ಬಿ.ಸಿ.ಪಾಟೀಲ್ ಗೆ ಶ್ರೀರಾಮುಲು ಮತ್ತು ಮುರಳೀಧರ್ ರಾವ್ ಆಮಿಷ ನೀಡಿರುವ ಆಡಿಯೋ ಬಿಡುಗಡೆ
ಬೆಂಗಳೂರು: ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯುವ ನಿಟ್ಟಿನಲ್ಲಿ ಆಮಿಷವೋಡ್ಡಿರುವ ಆಡಿಯೋ ವೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಅವರಿಗೆ ಶ್ರೀರಾಮುಲು ವಿಂದ ‘25’ ಆಫರ್. ಅವರೊಡನೆ ಬರುವ ಶಾಸಕರಿಗೆ 15 ಆಫರ್… ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಆಡಿಯೋದ ಸಂಭಾಷಣೆ ವಿವರ ಇಲ್ಲಿದೆ:
ಶ್ರೀರಾಮುಲು: ನಾನು ರಾಮುಲು ಮಾತಡ್ತಾ ಇದ್ದೇನೆ..
ಬಿ.ಸಿ. ಪಾಟೀಲ್: ಹಾ… ನಮಸ್ಕಾರ ಹೇಳಿ ಅಣ್ಣಾ… ಬ್ರದರ್…
ಶ್ರೀರಾಮುಲು: ಏನು ಎಕ್ಸ್ ಪೆಕ್ಟ್ ಮಾಡ್ತೀರಾ?
ಬಿ.ಸಿ.ಪಾಟೀಲ್: ‘ಸಾಹೇಬ್ರು’ ಹಂಗೆ ಹೇಳಿದ್ರು… ಆದರೆ ಅಮೌಂಟ್ ಬಗ್ಗೆ ಏನೂ ಹೇಳಲಿಲ್ಲ.
ಶ್ರೀರಾಮುಲು: ಹೇಳಿ ಏನು ಅಮೌಂಟ್ ಎಕ್ಸ್ ಪೆಕ್ಟ್ ಮಾಡ್ತೀರಾ?
ಬಿಸಿಪಾ: ನೀವೇ ಹೇಳಬೇಕು.
ಶ್ರೀರಾ: 25 ಅಂತ ಹೇಳಿದ್ದೆ.
ಬಿಸಿಪಾ: ನನ್ನ ಜತೆಯಲ್ಲಿ 3-4 ಜನರಿದ್ದಾರೆ… ಅವರಿಗೆ ಕ್ಲಾರಿಫೈ ಮಾಡಬೇಕು
ಶ್ರೀರಾ: ಅವರಿಗೆ 10ರಿಂದ 15 ಕೊಡ್ತೀವಿ
ಬಿಸಿಪಾ: ಅಣ್ಣಾ… ಅಣ್ಣಾ…ಅವರ ಪೊಸಿಷನ್ ಏನು?
ಶ್ರೀರಾ: ಅವರನ್ನೂ ಮಂತ್ರಿ ಮಾಡ್ತೀವಿ…
ಬಿಸಿಪಾ: ನನ್ನ ಕ್ಷೇತ್ರದಲ್ಲಿ ಯು.ಬಿ. ಬಣಕಾರ್ ಇದ್ದು, ಅವರು ತುಂಬಾ ಸ್ಟ್ರಾಂಗ್ ಇದ್ದಾರೆ… ಅವರು ಮತ್ತೊಂದು ಪಕ್ಷಕ್ಕೆ ಹೋಗಿ ನನ್ನ ವಿರುದ್ಧ ಚುನಾವಣೆಗೆ ನಿಂತರೆ…?
ಶ್ರೀರಾ: ಡೋಂಟ್ ವರಿ… ಎಲೆಕ್ಶನ್ ಇರುವುದಿಲ್ಲ…ನಾವು ನಮ್ಮದೇ ಸ್ಪೀಕರ್ ಎಲೆಕ್ಟ್ ಮಾಡ್ತೀವಿ. ಮೆಜಾರಿಟಿ ಪ್ರೂವ್ ಮಾಡ್ತೀವಿ. ಆಂಧ್ರ ಪ್ರದೇಶ್ ದಲ್ಲಿ ಏನಾಯ್ತು ಗೊತ್ತಲ್ಲಾ ಅಣ್ಣಾ… ಎಂಎಲ್ ಎ ಗಳನ್ನು ಅಮಾನತ್ತು ಮಾಡೋದಿಲ್ಲ. ನಮ್ಮದೇ.. ಸೆಂಟ್ರಲ್ ಗೌರ್ನಮೆಂಟ್ ಕೂಡ ಇದೆ. ನಮ್ಮದೇ ಎಲೆಕ್ಶನ್ – ಗಿಲೆಕ್ಶನ್ ಏನೂ ಇರಲ್ಲ. ನಾನು ಫೋನ್ ಈಗ ಮುರಳೀಧರ್ ರಾವ್ ಗೆ ಕೊಡ್ತೀನೀ… ಅವರಹತ್ತಿರ ಮಾತಾಡಿ…
ಬಿ.ಸಿ.ಪಾಟೀಲ್: ಅವೆಲ್ಲಾ ಏನೂ ಬೇಡಾ ಬ್ರದರ್…
ಶ್ರೀರಾ: ಇಲ್ಲಾ ಮಾತನಾಡಿ…
ಬಿ.ಸಿ.ಪಾಟೀಲ್: ಓ.ಕೆ. ಓ.ಕೆ. ಓ.ಕೆ. ಬ್ರದರ್
ಮುರಳಿಧರ ರಾವ್: ನೀವು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ…ನೀವು ಎಲೆಕ್ಶನ್ ಗೆ ಹೋಗುವ ಅಗತ್ಯವೇ ಬಾರದು
ಬಿಸಿಪಾ: ನನ್ನ ಜತೆ 3ರಿಂದ ನಾಲ್ಕು ಶಾಸಕರಿದ್ದು, ಅವರ ಪರವಾಗಿ ನಾನೇ ಕೇಳಬೇಕು… ನೀವು ಒಂದು ಫಿಗರ್ ಹೇಳಿ…
(ರಾಮುಲು ಮಧ್ಯಪ್ರವೇಶ)
ಶ್ರೀರಾ: ಪಾಟೀಲ್ ಸಾಹೇಬರೆ ನಾನು ಈಗಾಗಲೇ 15 ಹೇಳಿದ್ದೇನೆ. ಇವರ ಬಳಿ ನೀವು ಫಿಗರ್ ಕೇಳಬೇಡಿ
ಮುರಳಿಧರರಾವ್: ನಾವು ರೆಡಿ ಇದ್ದೇವೆ. ಯಾರಿಗೂ ಎಲೆಕ್ಶನ್ ಇಲ್ಲ…ಎಲ್ಲಾ ಸ್ಪೀಕರ್ ಗೆ ಬಿಟ್ಟಿದ್ದು… ಎಲ್ಲ ರಾಜ್ಯಗಳಲ್ಲೂ ಇದೇ same. ನಾವು ನಿಮ್ಮೊಂದಿಗೆ ಎಂದಿಗೂ ಇದ್ದೇವೆ. ಇದು ನನ್ನ ಮಾತು… ಆಂಧ್ರ ತೆಲಂಗಾಣದಲ್ಲೂ ಹೀಗೆ ಆಗಿತ್ತು…
ಬಿಸಿಪಾ: ಸಾರ್ ನಾನು ಇಲ್ಲೂ ಮಿನಿಸ್ಟರ್ ಆಗ್ತೀನೀ ಸಾರ್…
ಮುರಳೀಧರ್ ರಾವ್: ಸಾರ್… ನೂರಾ ನಾಲ್ಕೇ ಸ್ಟೇಬಲ್ ಆಗಿಲ್ಲ ಅಂದರೆ… 38 ಹೇಗೆ ಸ್ಟೇಬಲ್ ಆಗುತ್ತದೆ.
ಬಿಸಿಪಾ: ಯೆಸ್ ಸಾರ್. ಯೆಸ್ ಸಾರ್…!!