ಮತ ಹಾಕದವರನ್ನು ಕೈ ಕಾಲು ಕಟ್ಟಿ ಎಳೆ ತಂದು ಬಿಜೆಪಿಗೆ ಮತ ಹಾಕುವಂತೆ ಮಾಡಿ- ಯಡಿಯೂರಪ್ಪ
ಬೆಳಗಾವಿ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಶನಿವಾರದಂದು ಭಾಷಣದ ವೇಳೆ ಮಾತನಾಡುತ್ತಾ ಮತ ಹಾಕದವರನ್ನು ಕೈ ಕಾಲು ಕಟ್ಟಿ ಎಳೆ ತಂದು ಬಿಜೆಪಿಗೆ ಮತ ಹಾಕುವಂತೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಕಿತ್ತೂರು ಬಿಜೆಪಿ ಅಭ್ಯರ್ಥಿ ಮಹಾಂತೇಶ್ ದೊಡ್ಡಗೌಡರ್ ಅವರ ಪರ ಪ್ರಚಾರ ಮಾಡುತ್ತಾ ಮಾತನಾಡಿದ ಅವರು "ಈಗ ವಿಶ್ರಾಂತಿ ತೆಗೆದುಕೊಳ್ಳಬೇಡಿ, ಯಾರಾದರೂ ಮತದಾನ ಮಾಡುತ್ತಿಲ್ಲವೆಂದು ಕಂಡುಬಂದರೆ ಅಂತವರ ಮನೆಗಳಿಗೆ ಹೋಗಿ, ಅವರ ಕೈ ಕಾಲುಗಳನ್ನು ಕಟ್ಟಿ ತಂದು ಬಿಜೆಪಿಗೆ ಮತ ಹಾಕುವಂತೆ ಮಾಡಿ" ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಯಡಿಯೂರಪ್ಪ "ಸಿದ್ದರಾಮಯ್ಯನವರು ಅವರು ಬಾದಾಮಿ ಮತ್ತು ಚಾಮುಂಡೇಶ್ವರಿಯ ಎರಡು ಕ್ಷೇತ್ರಗಳಲ್ಲಿಯೂ ಗೆಲ್ಲುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ ಇದೀಗ ಮುಳುಗುತ್ತಿರುವ ಹಡಗಾಗಿದ್ದು, ಹಾಗಾಗಿ ಈ ಬಾರಿ ನಾನು ನಿಮಗೆ ಬಿಜೆಪಿಯ ಪರವಾಗಿ ಮತ ಚಲಾಯಿಸಲು ಮನವಿ ಮಾಡುತ್ತೇನೆ" ಎಂದರು.