ಬಿಜೆಪಿಯ 7+1 ಭ್ರಷ್ಟ ಗ್ಯಾಂಗ್ಗೆ ಕರ್ನಾಟಕದ ಅಧಿಕಾರ ನೀಡಬೇಕೆ?
ಬಿಜೆಪಿ ನಾಯಕರ ಹೆಸರನ್ನು ಉಲ್ಲೇಖಿಸುವ ಮೂಲಕ ಬಿಜೆಪಿಯಿಂದ ಗಣಿತ ಕಲಿಯೋದು ಹೇಗೆ ಎಂಬುದನ್ನು ಸಿದ್ದರಾಮಯ್ಯ ವೀಡಿಯೋ ಮೂಲಕ ಪ್ರಸ್ತುತಪಡಿಸಿದ್ದಾರೆ.
ಬೆಂಗಳೂರು: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆಲವು ಬಿಜೆಪಿ ನಾಯಕರ ಹೆಸರನ್ನು ಉಲ್ಲೇಖಿಸುವ ಮೂಲಕ ಬಿಜೆಪಿಯಿಂದ ಗಣಿತ ಕಲಿಯೋದು ಹೇಗೆ ಎಂಬುದನ್ನು ಸಿದ್ದರಾಮಯ್ಯ ವೀಡಿಯೋ ಮೂಲಕ ಪ್ರಸ್ತುತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ಈ ರೀತಿ ಹೇಳಿದ್ದಾರೆ.
ಜೈಲು ಹಕ್ಕಿ ಯಡ್ಡಿ= 1
ಕುಖ್ಯಾತ ರೆಡ್ಡಿ ಸಹೋದರರು= 2+1(ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ + ಯಡಿಯೂರಪ್ಪ)
ಶ್ರೀರಾಮುಲು = 3+1
ಕಟ್ಟಾ ಸುಬ್ರಹ್ಮಣ್ಯ= 4+1
ಕೃಷ್ಣಯ್ಯ ಶೆಟ್ಟಿ= 5+1
ಹರತಾಳು ಹಾಲಪ್ಪ= 6+1
ರೇಣುಕಾಚಾರ್ಯ= 7+1
ಒಟ್ಟಿನಲ್ಲಿ ಭ್ರಷ್ಟಾಚಾರ ಮಾಡಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಈ ಭ್ರಷ್ಟ ಗ್ಯಾಂಗ್ ಗೆ ಕರ್ನಾಟಕದ ಅಧಿಕಾರ ನೀಡಬೇಕೇ? ಎದ್ನು ಪ್ರಶ್ನಿಸಿರುವ ಸಿದ್ದರಾಮಯ್ಯ ಅವರು, #YeddyBeda ಎಂಬ ಹ್ಯಾಶ್ ಟ್ಯಾಗ್ ಹಾಕಿ ಜಾಣ್ಮೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದಿದ್ದಾರೆ.