ಕರ್ನಾಟಕದಲ್ಲಿ ಮತ್ತೆ ಅರಳುತ್ತಿದೆ ಕಮಲ !
ಬೆಂಗಳೂರು: ಇಡೀ ದೇಶದ ಕುತೂಹಲ ಕೆರಳಿಸಿದ್ದ ಕರ್ನಾಟಕದಲ್ಲಿ ಕಮಲ ಮತ್ತೆ ಅರಳುತ್ತಿದೆ. ಆ ಮೂಲಕ ದಕ್ಷಿಣ ಭಾರತಕ್ಕೆ ಬಿಜೆಪಿ ಈ ಭಾರಿ ಲಗ್ಗೆ ಇಟ್ಟಿದೆ.
ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ 222 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಪಕ್ಷವು ಈ ವರೆಗೂ ಮುನ್ನಡೆಯನ್ನು ಕಾಯ್ದುಕೊಂಡಿದೆ.ಸುಮಾರು 117 ಗಳ ಕ್ಷೇತ್ರದಲ್ಲಿ ಬಿಜೆಪಿ, 65 ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷವು 38 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.ಆ ಮೂಲಕ ಬಿಜೆಪಿ ಪಕ್ಷವು ಈ ಬಾರಿ ಮತ್ತೆ ಪೂರ್ಣ ಬಹುಮತದೊಂಡಿದೆ ಸರ್ಕಾರ ರಚಿಸುವತ್ತ ಹೆಜ್ಜೆ ಇಟ್ಟಿದೆ.
ಕರ್ನಾಟಕ ಚುನಾವಣಾ ಪ್ರಚಾರವು ದೇಶದೆಲ್ಲೆಡೆ ಭಾರಿ ಸಂಚಲನ ಮೂಡಿಸಿತ್ತು. ಒಂದು ಕಡೆ ಈ ಭಾರಿಯ ಚುನಾವಣೆಯು ಮೋದಿ ಮತ್ತು ಸಿದ್ದರಾಮಯ್ಯ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಚಾರದ ವೈಖರಿಯು ಬಿಂಬಿತವಾಗಿತ್ತು. ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಯವರು ಸಿದ್ದರಾಮಯ್ಯನವರುದು ಸಿಧಾರೂಪಯ್ಯ ಸರ್ಕಾರ ಮತ್ತು 10 ಪರ್ಸೆಂಟ್ ಸರ್ಕಾರ ಎಂದು ಟೀಕಾ ಪ್ರಹಾರ ನಡೆಸಿದ್ದರು.
ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಎಲ್ಲ ಟೀಕೆಗಳಿಗೆ ಟ್ವೀಟ್ ನಲ್ಲಿ ಅಂಕಿ ಸಮೇತ ಉತ್ತರ ನೀಡಿದ್ದರು. ಈ ಭಾರಿಯ ಚುನಾವಣೆಯಲ್ಲಿ ಪ್ರತ್ಯೇಕ ಕನ್ನಡ ಧ್ವಜ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ, ಮೆಟ್ರೋಗಳಲ್ಲಿ ಹಿಂದಿ ಫಲಕ ಈ ಎಲ್ಲ ವಿಷಯಗಳು ಪ್ರಮುಖವಾಗಿ ಚುನಾವಣಾ ವಿಷಯಗಳಾಗಿದ್ದವು. ಇನ್ನೊಂದೆಡೆ ಬಿಜೆಪಿ ಮುಕ್ತ ದಕ್ಷಿಣ ಭಾರತ ಎನ್ನುವ ಘೋಷಣೆಯು ಸಹಿತ ಈ ಚುನಾವಣೆಯಲ್ಲಿ ಸದ್ದು ಮಾಡಿತ್ತು.ಆದರೆ ಇನ್ನೊಂದೆಡೆಗೆ ಬಿಜೆಪಿ ದಕ್ಷಿಣಕ್ಕೆ ಕರ್ನಾಟಕದ ಮೂಲಕ ಮತ್ತೊಮ್ಮೆ ಪ್ರವೇಶಿಸಬೇಕು ಇಚ್ಚಾಸಕ್ತಿಯನ್ನು ಹೊಂದಿತ್ತು. ಸಧ್ಯ ಮತ ಎಣಿಕೆಯ ಬೆಳವಣಿಗೆಯನ್ನು ನೋಡಿದರೆ ದಕ್ಷಿಣದ ಈ ಕೋಟೆಗೆ ಮತ್ತೆ ಬಿಜೆಪಿ ಲಗ್ಗೆ ಇಡುತ್ತಿದೆ ಎನ್ನಬಹುದು.