Interim Budget 2024 :  ಈ ಬಾರಿಯ ಮಧ್ಯಂತರ ಬಜೆಟ್‌ನೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪೂರ್ಣ ಬಜೆಟ್‌ನ ಸುಳಿವು ನೀಡಿದ್ದಾರೆ. ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹಣಕಾಸು ಸಚಿವರು  ಭರವಸೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯಂತರ ಬಜೆಟ್ ನಲ್ಲಿ ಹಣಕಾಸು ಸಚಿವರು ರೈತರು, ಯುವಕರು, ಮಹಿಳೆಯರು ಮತ್ತು ಬಡವರಿಗಾಗಿ ಕೆಲವು ವಿಶೇಷ ಘೋಷಣೆಗಳನ್ನು ಮಾಡಿದ್ದಾರೆ.ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ನಾಲ್ಕು ವರ್ಗಗಳಿಗೆ ವಿಶೇಷ ಘೋಷಣೆಗಳನ್ನು ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ರೈತರ ಕುರಿತು ಮಾತನಾಡಿದ ಸಚಿವರು ಹೈನುಗಾರರಿಗೆ ಹೊಸ ಯೋಜನೆ ರೂಪಿಸುವುದಾಗಿ ಘೋಷಿಸಿದ್ದಾರೆ. ಇದರ ಹೊರತಾಗಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹಣಕಾಸು ಸಚಿವರು ಯಾವುದೇ ಹೊಸ ಘೋಷಣೆ ಮಾಡಿಲ್ಲ. ಈ ಬಾರಿಯ ಮಧ್ಯಂತರ ಬಜೆಟ್ ನ  10 ಪ್ರಮುಖ ಘೋಷಣೆಗಳು ಇಲ್ಲಿವೆ. 


ಇದನ್ನೂ ಓದಿ : 300 Unit Free Electricity : ಜನಸಾಮಾನ್ಯರಿಗೆ ಬಂಪರ್ ! ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್


ಮಧ್ಯಂತರ ಬಜೆಟ್‌ನ 10 ದೊಡ್ಡ ಘೋಷಣೆಗಳು :
- ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ
- ಹಣಕಾಸು ವರ್ಷ 25 ರಲ್ಲಿ 11.1 ಲಕ್ಷ ಕೋಟಿ ಕ್ಯಾಪೆಕ್ಸ್ ಘೋಷಿಸಲಾಗಿದೆ
-  ರೂಫ್ ಟಾಪ್ ಸೌರ ಯೋಜನೆಯಡಿಯಲ್ಲಿ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್‌ಗಳು  ಉಚಿತ ವಿದ್ಯುತ್
- ಇಂಧನ, ಖನಿಜ, ಸಿಮೆಂಟ್‌ಗಾಗಿ 3 ರೈಲ್ವೆ ಕಾರಿಡಾರ್‌ಗಳು
- 40,000 ರೈಲ್ವೇ ಕೋಚ್‌ಗಳು ವಂದೇ ಭಾರತ್ ಯೋಜನಗೆ ಬದಲು 
- ಸಣ್ಣ ನಗರಗಳನ್ನು ಸಂಪರ್ಕಿಸಲು 517 ಹೊಸ ಮಾರ್ಗಗಳಲ್ಲಿ 'ಉಡಾನ್' ಯೋಜನೆ
- 2030 ರ ವೇಳೆಗೆ 100 ಲಕ್ಷ ಕೋಟಿ ಟನ್ ಕೊಳ ಗ್ಯಾಸಿಫಿಕೆಶನ್ ಗುರಿ
- ಯುವಕರಿಗೆ 1 ಲಕ್ಷ ಕೋಟಿ ನಿಧಿಯನ್ನು ವ್ಯವಸ್ಥೆ
- ಗ್ರಾಮೀಣ ವಸತಿ ಯೋಜನೆಯ ಮುಂದಿನ  5 ವರ್ಷಗಳಲ್ಲಿ  2 ಕೋಟಿ ಮನೆಗಳ ನಿರ್ಮಾಣ 
- ಮಧ್ಯಮ ವರ್ಗದ ಜನರಿಗೆ ಹೊಸ ವಸತಿ ಯೋಜನೆ ಸಿದ್ಧಪಡಿಸಲಾಗುವುದು


ಇದನ್ನೂ ಓದಿ : Union Budget 2024 : ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ..! ಮಹತ್ವದ ನಿರ್ಧಾರ ಪ್ರಕಟ


ಸ್ಟಾರ್ಟ್‌ಅಪ್‌ಗಳಿಗಾಗಿ ಮಾಡಿರುವ ಘೋಷಣೆ : 
ಸ್ಕಿಲ್ ಇಂಡಿಯಾ ಮಿಷನ್ ಮೂಲಕ 1.4 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದ್ದು,  ಈ ತರಬೇತಿ ಮೂಲಕ 54 ಲಕ್ಷ ಯುವಕರು ಉನ್ನತ ಕೌಶಲ್ಯವನ್ನು ಹೊಂದಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಧಾನಮಂತ್ರಿ ಮುದ್ರಾ ಯೋಜನೆ ಮೂಲಕ ಕಳೆದ 10 ವರ್ಷಗಳಲ್ಲಿ 43 ಕೋಟಿ ಸಾಲ ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.ಈ ಮೂಲಕ ಉದ್ಯಮಶೀಲತೆಗೆ ಉತ್ತೇಜನ ನೀಡಲಾಗಿದೆ ಎಂದಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.