IT Job in Bangalore: ಐಟಿ ಉದ್ಯೋಗಿಗಳ ಕೆಲಸದ ಸಮಯವನ್ನು ವಿಸ್ತರಣೆ ಮಾಡುವುದಕ್ಕೆ ಕಾರ್ಮಿಕ ಇಲಾಖೆ ಮುಂದಾಗಿದೆ. ಇದು ಸಾಫ್ಟ್‌ವೇರ್‌ ನೌಕರರಿಗೆ ಬಿಗ್‌ ಶಾಕ್‌ ಅಂತಾನೇ ಹೇಳಬದುದು. ಹೌದು, ಇನ್ಮೇಲೆ 9 ಗಂಟೆಯಲ್ಲ 14 ಗಂಟೆ ಕೆಲಸ ಮಾಡಬೇಕಂತೆ. 


COMMERCIAL BREAK
SCROLL TO CONTINUE READING

ಈ ಸಮಯದ ವಿಸ್ತರಣೆ ಬಗ್ಗೆ ಕಾರ್ಮಿಕ ಇಲಾಖೆ ಬಹುತೇಕ ಒಪ್ಪಿಗೆ ಸೂಚಿಸಿದ್ದು, ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಡಬೇಕಾಗಿದೆ. ಹಾಲಿ 9 ಗಂಟೆ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳು ಇನ್ಮುಂದೆ 9 ಗಂಟೆ ಬದಲು 14 ಗಂಟೆ ಕೆಲಸ ಮಾಡುವ ಕಾನೂನು ತರಲು ಸರ್ಕಾರದ ಮೇಲೆ ಒತ್ತಡವಿದೆ. ಇದರಿಂದ salary ಜಾಸ್ತಿ ಆಗುತ್ತಾ NO, ಈಗ ಇರುವ ಅದೇ ಸಂಬಳವಿರುತ್ತದೆ. ಆದರೆ ಕೆಲಸದ ಸಮಯ ಮಾತ್ರ ವಿಸ್ತರಣೆ ಮಾಡಲು ಕಾರ್ಮಿಕ ಇಲಾಖೆ ಮುಂದಾಗಿದೆ. 


ಇದನ್ನೂ ಓದಿ: SBI Recruitment 2024: ಪದವಿ ಪಾಸಾದವರಿಗೆ SBIನಲ್ಲಿ 1,040 ಹುದ್ದೆಗಳಿಗೆ ಅರ್ಜಿ ಆಹ್ವಾನ


ಈಗಾಗಲೇ IT ಎಂಪ್ಲೈಯಿಸ್ ಅಸೋಸಿಯೇಷನ್ & ಕಾರ್ಮಿಕ ಇಲಾಖೆ ಸಭೆ ನಡೆದಿದ್ದು, ಸಭೆಯಲ್ಲಿ ಐಟಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದಾರೆ. 14 ಗಂಟೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ, ದೈಹಿಕ ಹಿಂಸೆ, ಆರೋಗ್ಯದಲ್ಲಿ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ನಿಯಮ ಜಗತ್ತಿನಲ್ಲಿ ಎಲ್ಲೂ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


14 ಗಂಟೆ ಕೆಲಸ ಮಾಡಿದರೆ ಐಟಿ ನೌಕರರ ಡಿಪ್ರೆಷನ್‌ಗೆ ಕಾರಣವಾಗುತ್ತದೆ. 14 ಗಂಟೆ ಕೆಲಸ ಅಂದರೆ ಜರ್ನಿ ಎಲ್ಲಾ ಸೇರಿ 18-20 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಇದು ಡಿಪ್ರೆಷನ್ ಮಾತ್ರವಲ್ಲ, ಕೌಟುಂಬಿಕ ಸಮಸ್ಯೆಗೂ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಕೆಲಸದ ಅವಧಿಯನ್ನು ವಿಸ್ತರಣೆ ಮಾಡಬಾರದು ಅಂತಾ IT ನೌಕರರ ಸಂಘ ವಿರೋಧ ವ್ಯಕ್ತಪಡಿಸಿದೆ.


ಇದನ್ನೂ ಓದಿ: ಅಂಬಾನಿ ಮನೆಯ ಪ್ರೀತಿಯ ಶ್ವಾನಕ್ಕಾಗಿ 4 ಕೋಟಿ ರೂಪಾಯಿ ಕಾರು..Mercedes-Benz G 400D ಕಾರಿನಲ್ಲಿ 'ಹ್ಯಾಪಿ' ಲೈಫ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.