ಬೆಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 15 ನೇ ಕಂತಿನ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ. ಯೋಜನೆಯ ೧೫ನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಜಾರ್ಖಂಡ್‌ ಭೇಟಿ ವೇಳೆಯಲ್ಲಿ ಪಿಎಂ ಕಿಸಾನ್ ಯೋಜನೆಯ 15 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಅರ್ಹ ರೈತರಿಗೆ ಸುಮಾರು 18,000 ಕೋಟಿ ರೂ.ಯನ್ನು ಬಿಡುಗಡೆ ಮಾಡಲಾಗಿದೆ. 


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಬಂಪರ್! ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಬಗ್ಗೆ ಅಮಿತ್ ಶಾ ಮಾತು!


ಪಿಎಂ ಕಿಸಾನ್ ಸಮ್ಮಾನ್ ನಿಧಿ 15ನೇ ಕಂತಿನ ಸ್ಟೇಟಸ್ ಪರಿಶೀಲನೆ ಹೇಗೆ ?  : 
- ಅಧಿಕೃತ PM KISAN ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ
-  Payment Success tab ಅಡಿಯಲ್ಲಿ ಭಾರತದ ನಕ್ಷೆ  ಕಾಣಿಸುತ್ತದೆ. 
- ಬಲಭಾಗದಲ್ಲಿ, "ಡ್ಯಾಶ್‌ಬೋರ್ಡ್" ಎಂಬ ಹಳದಿ ಬಣ್ಣದ ಟ್ಯಾಬ್ ಇರುತ್ತದೆ
- ಡ್ಯಾಶ್‌ಬೋರ್ಡ್ ಮೇಲೆ ಕ್ಲಿಕ್ ಮಾಡಿ
- ಕ್ಲಿಕ್ ಮಾಡಿದ ನಂತರ,  ಹೊಸ ಪುಟ ತೆರೆಯುತ್ತದೆ 
- ವಿಲೇಜ್ ಡ್ಯಾಶ್‌ಬೋರ್ಡ್ ಟ್ಯಾಬ್‌ನಲ್ಲಿ, ನಿಮ್ಮ ಸಂಪೂರ್ಣ ವಿವರಗಳನ್ನು  ಭರ್ತಿ ಮಾಡಬೇಕು
- ರಾಜ್ಯ, ಜಿಲ್ಲೆ, ಉಪಜಿಲ್ಲೆ ಮತ್ತು ಪಂಚಾಯತ್ ಆಯ್ಕೆಮಾಡಿ
- ನಂತರ ಶೋ ಬಟನ್ ಕ್ಲಿಕ್ ಮಾಡಿ
- ಇದರ ನಂತರ ನೀವು ನಿಮ್ಮ ವಿವರಗಳನ್ನು ಆಯ್ಕೆ ಮಾಡಬಹುದು
- ಗೆಟ್ ರಿಪೋರ್ಟ್ ಬಟನ್ ಕ್ಲಿಕ್ ಮಾಡಿ
- ಈಗ ನೀವು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಬಹುದು


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ವಿವರಗಳು :
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿಯೋಗ್ಯ ಭೂಮಿ ಹೊಂದಿರುವ ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಯೋಜನೆ  ಹೊಂದಿದೆ. ಯೋಜನೆಯಡಿಯಲ್ಲಿ, ಪ್ರತಿ ವರ್ಷಕ್ಕೆ  6000 ರೂಪಾಯಿಯನ್ನು  ಮೂರು ಮಾಸಿಕ ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ.


ಇದನ್ನೂ ಓದಿ : ಮತ್ತೆ ವಿದ್ಯುತ್ ಬೆಲೆ ಏರಿಕೆ: ರಾಜ್ಯದ ಜನತೆಗೆ ಸರ್ಕಾರದ ಮತ್ತೊಂದು ಶಾಕ್


PM-KISAN ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಯಾರು ಅರ್ಹರು? :
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಭೂಹಿಡುವಳಿ ರೈತರ ಕುಟುಂಬಗಳು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ.


PM-KISAN ಯೋಜನೆಯಿಂದ ಯಾರನ್ನು ಹೊರಗಿಡಲಾಗಿದೆ? :
PM-KISANನಿಂದ ಹೊರಗಿಡಲ್ಪಟ್ಟವರಲ್ಲಿ ಸಾಂಸ್ಥಿಕ ಭೂಮಿ ಹೊಂದಿರುವವರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರು ಹಾಗೂ ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಸೇರಿವೆ. ವೈದ್ಯರು, ಇಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು ಹಾಗೂ 10,000 ರೂ.ಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು ಮತ್ತು ಕಳೆದಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು  ಸರ್ಕಾರದ ಈ ಯೋಜನೆಯ ಲಾಭ ಪಡೆಯುವಂತಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.