Vehicle Scrapping Policy: ಶೀಘ್ರವೇ ಗುಜರಿ ಸೇರಲಿರುವ 15 ವರ್ಷ ಹಳೆಯ ವಾಹನಗಳು..!
Vehicle Scrapping Policy: 20 ವರ್ಷ ಪೂರೈಸಿದ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಬಳಿಯಿದ್ದು, ಈ ಕುರಿತು ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ನವದೆಹಲಿ: 15 ವರ್ಷ ಹಳೆಯ ಸರ್ಕಾರಿ ವಾಹನಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ‘15 ವರ್ಷ ಹಳೆಯ ಎಲ್ಲಾ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಗುಜರಿಗೆ ಹಾಕಲಾವುದು’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
‘ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೂ ಈ ಬಗ್ಗೆ ಮಾಹಿತಿ ರವಾನಿಸಿದೆ. ಬಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳು ಸೇರಿದಂತೆ ಎಲ್ಲಾ ರೀತಿಯ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾವುದು. ಪ್ರತಿದಿನ ರಸ್ತೆಗೆ ಇಳಿಯಲಿರುವ ಎಲ್ಲಾ ಹಳೆಯ ವಾಹನಗಳ ಸಂಚಾರವನ್ನು ಇನ್ಮುಂದೆ ಬಂದ್ ಮಾಡಲಾಗುವುದು. ಹೊಸ ವಾಹನಗಳಿಗೆ ಹೋಲಿಸಿದ್ರೆ ಈ ವಾಹನಗಳು ಶೇ.10-12ರಷ್ಟು ಹೆಚ್ಚು ವಾಯುಮಾಲಿನ್ಯವನ್ನುಂಟು ಮಾಡುತ್ತಿವೆ. ಇದೇ ಕಾರಣಕ್ಕೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಗಡ್ಕರಿ ಹೇಳಿದ್ದಾರೆ.
ನಾಗ್ಪುರದಲ್ಲಿ ‘ಅಗ್ರೋವಿಷನ್‌ನ 2022’ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಗಡ್ಕರಿ, ‘ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ನಾನು 15 ವರ್ಷ ಹಳೆಯ ಎಲ್ಲಾ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಕಡತಕ್ಕೆ ಸಹಿ ಮಾಡಿದ್ದೇನೆ. ಭಾರತ ಸರ್ಕಾರದ ಈ ನೀತಿಯನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಲಾಗಿದೆ. ದೇಶದ ಪ್ರತಿ ಸರ್ಕಾರವೂ ಈ ನೀತಿಯನ್ನು ರಾಜ್ಯ ಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು’ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: Hotel Rule: ಈ ಕೆಲಸಕ್ಕಾಗಿ ನೀವು ಉಚಿತವಾಗಿ 5 ಸ್ಟಾರ್ ಹೋಟೆಲ್ ಮತ್ತು ರೆಸ್ಟೋರೆಂಟ್ ಬಳಸಬಹುದಂತೆ
ವಾಹನ ಮಾಲಿನ್ಯದ ಅಪಾಯವನ್ನು ಪರಿಹರಿಸುವ ಉದ್ದೇಶದಿಂದ ಸರ್ಕಾರವು ಈ ವರ್ಷದ ಆರಂಭದಲ್ಲಿ ವಾಹನ ಸ್ಕ್ರ್ಯಾಪ್ ನೀತಿಯನ್ನು ಘೋಷಿಸಿತ್ತು. ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲಿ 2-3 ವಾಹನಗಳನ್ನು ಸ್ಕ್ರ್ಯಾಪಿಂಗ್ ಸೌಲಭ್ಯಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ ಎಂದು ಗಡ್ಕರಿ ಈ ಹಿಂದೆ ಹೇಳಿದ್ದರು. ರಸ್ತೆಗಳನ್ನು ನಿರ್ಮಿಸಲು ಹಳೆಯ ಟೈರ್‌ಗಳಂತಹ ಸ್ಕ್ರ್ಯಾಪ್ ಮಾಡಿದ ವಾಹನಗಳ ಭಾಗಗಳನ್ನು ಬಳಸಿಕೊಳ್ಳಲಾಗುವುದು ಎಂದು ಸಹ ಕೇಂದ್ರ ಸಚಿವರು ಹೇಳಿದ್ದರು.
2018ರ ಅಕ್ಟೋಬರ್‍ನಲ್ಲಿ ಸರ್ಕಾರವು ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಘೋಷಿಸುವ ಮೊದಲು ದೆಹಲಿ-NCRನಲ್ಲಿ 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ಬಳಸುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿತು. 2014ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಆಗಸ್ಟ್ 2021ರಲ್ಲಿ ಪ್ರಧಾನಿ ಮೋದಿಯವರು ಸ್ವಯಂಪ್ರೇರಿತ ವಾಹನ ಫ್ಲೀಟ್ ಆಧುನೀಕರಣ ಕಾರ್ಯಕ್ರಮ ಎಂದೂ ಕರೆಯಲ್ಪಡುವ ಆಟೋಮೋಟಿವ್ ಸ್ಕ್ರ್ಯಾಪೇಜ್ ನೀತಿಗೆ ಚಾಲನೆ ನಿಡಿದ್ದರು. ನೀತಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ಪ್ರಧಾನಿಯವರು ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆಯನ್ನು ತರುವ ನಿರೀಕ್ಷೆಯಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ನೆಲದಲ್ಲಿ ಹಾರಿದ ಕನ್ನಡ ಧ್ವಜ : ಪುಂಡರ ವಿರುದ್ಧ ತೊಡೆ ತಟ್ಟಿದ ಮಾರಾಠಿ ಕನ್ನಡಿಗರು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.