February 1 ರಿಂದ ಬ್ಯಾಂಕ್ ಗೆ ಸಂಬಂಧಿಸಿದ ಈ ನಿಯಮಗಳು ಬದಲಾಗುತ್ತಿವೆ, ನಿಮ್ಮ Budget ಬಿಗಡಾಯಿಸಬಹುದು
February Month Changes: ಫೆಬ್ರವರಿ 1 ರಂದು ಬಜೆಟ್ (Union Budget 2022-23) ಮಂಡನೆಯಾಗಲಿದೆ. ಇದರೊಂದಿಗೆ, ಈ ದಿನಾಂಕದಿಂದ ಬ್ಯಾಂಕ್ಗಳ ಕೆಲವು ನಿಯಮಗಳು ಕೂಡ ಬದಲಾಗಲಿವೆ.
February Month Changes: 2022-23 ನೇ ಸಾಲಿನ ಕೇಂದ್ರ ಬಜೆಟ್ 2022 (Union Budget 2022-23) ಮಂಡನೆಗೆ ಕೇವಲ ಎರಡೇ ದಿನ ಬಾಕಿ ಉಳಿದಿದೆ. ಈ ಬಾರಿಯ ಬಜೆಟ್ ಮೇಲೆ ಜನಸಾಮಾನ್ಯರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರೋನಾ ಸಾಂಕ್ರಾಮಿಕ (Corona Pandemic) ಸಮಯದಲ್ಲಿ, ಏರುತ್ತಿರುವ ಹಣದುಬ್ಬರ (Inflation) ಮತ್ತು ಹೆಚ್ಚಿನ ವೈದ್ಯಕೀಯ ವೆಚ್ಚಗಳು (Medical Expenses) ಸಾರ್ವಜನಿಕರ ಸಮಸ್ಯೆಗಳನ್ನು ಹೆಚ್ಚಿಸಿವೆ. ಬೇರೆ ಬೇರೆ ವಲಯಗಳಿಂದ ಬೇರೆ ಬೇರೆ ಬೇಡಿಕೆಗಳೂ ಬರಲಾರಂಭಿಸಿವೆ. ಕಳೆದ ಹಲವು ವರ್ಷಗಳಿಂದ ತೆರಿಗೆ ಸ್ಲ್ಯಾಬ್‌ಗಳಲ್ಲಿ (Tax Slabs) ಯಾವುದೇ ಮಹತ್ವದ ಬದಲಾವಣೆಯಾಗಿಲ್ಲ, ಆದ್ದರಿಂದ ಈ ಬಾರಿ ತೆರಿಗೆದಾರರು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ.
ಫೆಬ್ರವರಿ 1 ರಿಂದ ಅನೇಕ ಆರ್ಥಿಕ ಬದಲಾವಣೆಗಳು ಸಂಭವಿಸಲಿವೆ. ಮಾಹಿತಿಯ ಪ್ರಕಾರ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಫೆಬ್ರವರಿ ಮೊದಲನೇ ತಾರೀಖಿನಿಂದ ಬದಲಾಗಲಿದೆ. ಇದರೊಂದಿಗೆ ಬ್ಯಾಂಕ್ ಆಫ್ ಬರೋಡಾ, ಎಸ್‌ಬಿಐ ಬ್ಯಾಂಕ್ ಮತ್ತು ಪಿಎನ್‌ಬಿ ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ನಿಯಮಗಳೂ (Banking Rules) ಬದಲಾಗಲಿವೆ.
SBI ನಿಯಮಗಳು ಬದಲಾವಣೆ
ಹೊಸ ನಿಯಮದ ಪ್ರಕಾರ, ಫೆಬ್ರವರಿ 1 ರಿಂದ ಎಸ್‌ಬಿಐ ಹಣ ವರ್ಗಾವಣೆ ದುಬಾರಿಯಾಗಲಿದೆ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 1, 2022 ರಿಂದ ಜಾರಿಗೆ ಬರುವಂತೆ ಬ್ಯಾಂಕ್ IMPS ವಹಿವಾಟುಗಳಲ್ಲಿ ಹೊಸ ಸ್ಲ್ಯಾಬ್ ಅನ್ನು ಸೇರಿಸಲಿದೆ. ಈ ಸ್ಲ್ಯಾಬ್ 2 ಲಕ್ಷದಿಂದ 5 ಲಕ್ಷ ರೂ.ಗಳ ಸ್ಲ್ಯಾಬ್ ಆಗ್ರಲಿದೆ. ಫೆಬ್ರವರಿ 1 ರಿಂದ ಈ ಹೊಸ ಸ್ಲ್ಯಾಬ್ ನಡುವೆ, IMPS ಮೂಲಕ ಬ್ಯಾಂಕ್ ಶಾಖೆಯಿಂದ ಹಣವನ್ನು ವರ್ಗಾವಣೆ ಮಾಡುವಾಗ ರೂ. 20 + GST ಪಾವತಿಸಬೇಕಾಗಲಿದೆ.
ಬ್ಯಾಂಕ್ ಆಫ್ ಬರೋಡಾ ನಿಯಮಗಳು ಬದಲಾಗಿವೆ
ಬ್ಯಾಂಕ್ ಆಫ್ ಬರೋಡಾ (BOB) ಗ್ರಾಹಕರಿಗೆ, ಚೆಕ್ ಕ್ಲಿಯರೆನ್ಸ್‌ಗೆ ಸಂಬಂಧಿಸಿದ ನಿಯಮಗಳು ಫೆಬ್ರವರಿ 1 ರಿಂದ ಬದಲಾಗುತ್ತಿವೆ. ಈಗ ಫೆಬ್ರವರಿ 1 ರಿಂದ ಚೆಕ್ ಪಾವತಿಗಾಗಿ, ಗ್ರಾಹಕರು ಧನಾತ್ಮಕ ಪಾವತಿ ವ್ಯವಸ್ಥೆಯನ್ನು ಅನುಸರಿಸಬೇಕಾಗುತ್ತದೆ. ಅಂದರೆ, ಚೆಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಕಳುಹಿಸಿದ ನಂತರವೇ ಚೆಕ್ ಅನ್ನು ತೆರವುಗೊಳಿಸಲಾಗುತ್ತದೆ. 10 ಲಕ್ಷಕ್ಕಿಂತ ಹೆಚ್ಚಿನ ಚೆಕ್‌ಗಳ ಕ್ಲಿಯರೆನ್ಸ್‌ಗೆ ಈ ನಿಯಮ ಅನ್ವಯಿಸುತ್ತದೆ.
ಇದನ್ನೂ ಓದಿ-Mutual Fund ಗಳನ್ನು ಸ್ಥಗಿತ ಮಾಡಲು Unit Holder ಗಳ ಅನುಮತಿ ಕಡ್ಡಾಯಗೊಳಿಸಿದ SEBI
PNB ಗ್ರಾಹಕರಿಗೆ ನಿಯಮಗಳನ್ನು ಬಿಗಿಗೊಳಿಸುತ್ತಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನ ಬದಲಾಗುತ್ತಿರುವ ನಿಯಮಗಳ ಪ್ರಭಾವ ಕೂಡ ನಿಮ್ಮ ಜೇಬಿನ ಹೊರೆ ಹೆಚ್ಚಿಸಲಿದೆ. ಹೌದು ಈ ಮೊದಲು ನಿಮ್ಮ ಖಾತೆಯಲ್ಲಿ ಹಣದ ಕೊರತೆಯಿಂದ ಕಂತು ಅಥವಾ ಹೂಡಿಕೆ ವಿಫಲವಾದರೆ, ದಂಡದ ಮೊತ್ತ 100 ರೂ. ಇತ್ತು ಆದರೆ, ಇದೀಗ ಹೊಸ ನಿಯಮಗಳ ಪ್ರಕಾರ ಫೆಬ್ರವರಿ 1 ರಿಂದ ಅದು 250 ರೂ.ಇರಲಿದೆ.
ಅಡುಗೆ ಅನಿಲ (LPG Gas) ಸಿಲಿಂಡರ್ ಬೆಲೆ
ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಈ ಬಾರಿ ಹೊಸ ವರ್ಷ ಅಂದರೆ ಜನವರಿ 1ರಂದು ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಎಲ್‌ಪಿಜಿ ಬೆಲೆಯಲ್ಲಿನ ಹೆಚ್ಚಳ ಅಥವಾ ಇಳಿಕೆ ಕುರಿತು ಇದೀಗ ಎಲ್ಲರ ದೃಷ್ಟಿ ಫೆಬ್ರವರಿ 1ರ ಮೇಲೆ ನೆಟ್ಟಿದೆ.
ಇದನ್ನೂ ಓದಿ-PAN ಕಾರ್ಡ್‌ನಲ್ಲಿ ಹೆಸರನ್ನು ಬದಲಾಯಿಸುವ ಸುಲಭ ಪ್ರಕ್ರಿಯೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.