Karntaka Budget 2024 : ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ :ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂಪಾಯಿ ಮೀಸಲು
Karntaka Budget 2024 : ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸಹಕಾರ ಪಶು ಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
Karntaka Budget 2024 : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿರುವ ಬಜೆಟ್ ನಲ್ಲಿ ಸಮಗ್ರ ಕೃಷಿ ಉತ್ತೇಜನಕ್ಕೆ ಕೆಲವೊಂದು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಕ್ರಿಶು ಉತ್ತೇಜನ ಮತ್ತು ರೈತರ ಅಭಿವೃದ್ದಿಗಾಗಿ ಸಿಎಂ ಇಂದಿನ ಬಜೆಟ್ ನಲ್ಲಿ ಮಾಡಿರುವ ಪ್ರಮುಖ ಘೋಷಣೆಗಳು ಇಲ್ಲಿವೆ .
1. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ
2.ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂಪಾಯಿ ಮೀಸಲು
3.ಆಹಾರ ಸಂಸ್ಕರಣೆ ಮತ್ತು ರಫ್ತು ಉತ್ತೇಜನದ ಮುಖ್ಯ ಉದ್ದೇಶದಿಂದ ಕೃಷಿ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಆಹಾರ ಸಂಸ್ಕರಣಾ ಆಯುಕ್ತಾಲಯ ರಚನೆ.
4.ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಪ್ತು ಉತ್ತೇಜನಕ್ಕೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಪ್ತು ನಿಗಮ ನಿಯಮಿತ (ಕೆಫೆಕ್) ಸಂಸ್ಥೆ ಬಲಪಡಿಸಲು 80 ಕೋಟಿ ರೂ ಒದಗಿಸಲಾಗುವುದು.
5.ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಸರ‍್ವಜನಿಕ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ ಗಳ ಸ್ಥಾಪನೆ. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೊಗಾನೆ, ವಿಜಯಪುರದ ಇಟ್ಟಿಂಗಿಹಾಳ ಹಾಗೂ ಬೆಂಗಳೂರು ಬಳಿಯ ಪೂಜೆನಹಳ್ಳಿಯಲ್ಲಿ ಸ್ಥಾಪನೆ.
6.ನಶಿಸಿ ಹೋಗುತ್ತಿರುವ ಸ್ಥಳಿಯ ಬೆಳೆಗಳ ತಳಿಗಳ ಸಂಗ್ರಹಣೆಗೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ
7.ಕೃಷಿಕ ಹಾಗೂ ರೈತ ಮಹಿಳೆಯರ ಆರ್ಥಿಕ ಮತ್ತು ತಾಂತ್ರಿಕ ಸಬಲೀಕರಣಕ್ಕೆ ವಿಶೇಷ ಯೋಜನೆಗಳ ಜಾರಿ.
ಇದನ್ನೂ ಓದಿ : Karnataka Budget 2024 : ಸಿದ್ದರಾಮಯ್ಯ ಲೆಕ್ಕದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಿಕ್ಕಿದೆಷ್ಟು ?
8.ನಮ್ಮ ಮಿಲೇಟ್ ಎಂಬ ಹೊಸ ಯೋಜನೆ ಪ್ರಾರಂಭ. ಸಿರಿಧಾನ್ಯ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲು ಕ್ರಮ
9. ರಾಜ್ಯದ ಬರಪೀಡಿತ ಮತ್ತು ಮಳೆಯಾಶ್ರೀತ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಗಾಗಿ ನರೇಗಾ ಯೋಜನೆಯಡಿ ಒಟ್ಟು 5 ಸಾವಿರ ಸಣ್ಣ ಸರೋವರ ನಿರ್ಮಾಣಕ್ಕೆ ಕ್ರಮ
10. ಬೆಂಗಳೂರಿನ ಕೃಷಿ ಇಲಾಖೆಯ ಆರ್.ಕೆ ಶಾಲಾ ಕೃಷಿ ಕ್ಷೇತ್ರವನ್ನು ಕೃಷಿಗೆ ಸಂಬಂದಿಸಿದ ತಾಂತ್ರಿಕತೆಗಳನ್ನು ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ
11. ಕೀಟ, ರೋಗ ಮತ್ತು ಪೊಷಕಾಂಶ ನಿರ್ವಹಣೆ ಬಗ್ಗೆ ರೈತರಿಗೆ ಸಲಹೆ ನೀಡಲು ರಾಯಚೂರು ಕೃಷಿ ವಿವಿ ಅಭಿವೃದ್ಧಿ ಪಡಿಸಿರುವ e-sap ತಂತ್ರಾಂಶದ ಸೌಲಭ್ಯಗಳನ್ನು ಎಲ್ಲಾ ರೈತರಿಗೂ ಪರಿಚಯಿಸಲು ಕ್ರಮ
12.ಕೃಷಿಯಲ್ಲಿ ಉಪಗ್ರಹ ಚಿತ್ರ, ಸೆನ್ಸಾರ್ ಗಳ ಬಳಕೆ ಮತ್ತು ಮಿಷಿನ್ ಲರ್ನಿಂಗ್ ನಂತಹ ಅತ್ಯಾಧುನಿಕ ತಂತ್ರಜ್ಞಾನ ಗಳನ್ನು ಆಧಾರಿಸಿ ಉತ್ಪಾದಕತೆ ಮುನ್ಸೂಚನೆಯನ್ನು ಮಾಡಲು ದತ್ತಾಂಶ ವನ್ನು ಅಭಿವೃದ್ಧಿ ಪಡಿಸಲಾಗುವುದು.
ಇದನ್ನೂ ಓದಿ : Karnataka Budget 2024: ಮಹಿಳೆಯರ ಸ್ವಾವಲಂಬನೆಗಾಗಿ ಗ್ರಾಮೀಣ ಭಾಗಗಳಲ್ಲಿ ಕೆಫೆಸಂಜೀವಿನಿ
13.ರೈತ ಉತ್ಪನ್ನ ಸಂಸ್ಥೆಗಳನ್ನು (ಎಫ್ .ಪಿ.ಓ) ಇನ್ನಷ್ಟು ಸದೃಢ ಮತ್ತು ಸುಸ್ಥಿರಗೊಳಿಸಲು ಕೃಷಿ ವಲಯದ ಸ್ಟಾರ್ಟ್ ಅಫ್ ಗಳನ್ನು ಉತ್ತೇಜಿಸಲು ಕ್ರಮ.
14. ಮಂಡ್ಯ ವಿಸಿ ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆಗೆ ಪರಿಶೀಲನೆ ಸಮಿತಿ ರಚನೆ:-
ಮಂಡ್ಯ ಜಿಲ್ಲೆಯ ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ ಕುರಿತು ಪರಿಶೀಲಿಸಲು ಸಮಿತಿ ರಚನೆ..
15. ಕೃಷಿ ನವೋದ್ಯಮಗಳನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ 5 ಎಕರೆ ಜಮೀನನ್ನು ನೀಡಿ ಸಿ-ಕ್ಯಾಂಪ್ ಅಗ್ರಿ ಇನ್ನೋವೇಷನ್ ಪಾರ್ಕ್ ನಿರ್ಮಾಣ.(IT-BT and Science and Technology ಇಲಾಖೆ ಮೂಲಕ)
16. ಕೃಷಿ ಹಾಗೂ ಆರೋಗ್ಯ ವಿಜ್ಞಾನದ ಸುಧಾರಣೆಗೆ ಆಧುನಿಕ ಜೀನ್ ಎಡಿಟಿಂಗ್ ಮತ್ತು ಜೀನ್ ಥೆರಪಿ ಸಂಶೋಧನಾ ಸಂಸ್ಥೆಯನ್ನು ಸ್ಥಾಪನೇ. (IT-BT and Science and Technology ಇಲಾಖೆ ಮೂಲಕ).
17. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಆಧುನಿಕ ಕೃಷಿ ಸಂಕೀರ್ಣ ಕಟ್ಟಡ ಸ್ಥಾಪನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.