ನವೆಂಬರ್ 30 ರೊಳಗೆ ರೈತರ ಖಾತೆಗೆ ಎರಡು ಸಾವಿರ ರೂಪಾಯಿ.! ನಿಮ್ಮ ಖಾತೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ
PM Kisan Scheme Latest News:ಸರ್ಕಾರ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 12 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಒಂದು ವೇಳೆ ನಿಮ್ಮ ಖಾತೆಗೆ 12 ನೇ ಕಂತು ವರ್ಗಾವನೆಯಾಗಿಲ್ಲ ಎಂದಾದರೆ ಚಿಂತಿಸಬೇಕಾಗಿಲ್ಲ.
PM Kisan Scheme Latest News : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರ ರೈತರ ಖಾತೆಗೆ 12 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಒಂದು ವೇಳೆ ನಿಮ್ಮ ಖಾತೆಗೆ 12 ನೇ ಕಂತು ವರ್ಗಾವನೆಯಾಗಿಲ್ಲ ಎಂದಾದರೆ ಚಿಂತಿಸಬೇಕಾಗಿಲ್ಲ. ನವೆಂಬರ್ 30ರೊಳಗೆ ಎಲ್ಲಾ ಅರ್ಹ ರೈತರ ಖಾತೆಗೂ 12 ನೇ ಕಂತಿನ ಹಣವನ್ನು ವರ್ಗಾಯಿಸುವುದಾಗಿ ಸರ್ಕಾರ ಹೇಳಿದೆ.
ನ.30ರೊಳಗೆ ಖಾತೆ ಸೇರುವುದು ಹಣ :
ಇತ್ತೀಚೆಗಷ್ಟೇ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣವನ್ನು ಕೋಟ್ಯಂತರ ರೈತರ ಖಾತೆಗೆ ವರ್ಗಾಯಿಸಲಾಗಿದೆ. ಆದರೂ ಇನ್ನು ಕೂಡಾ ಇದುವರೆಗೂ ಲಕ್ಷಗಟ್ಟಲೆ ರೈತರ ಖಾತೆಗೆ 12ನೇ ಕಂತಿನ ಹಣ ಬಂದು ಸೇರಿಲ್ಲ. ಇದೀಗ ಯಾವ ರೈತರ ಖಾತೆಗೆ 12 ನೇ ಕಂತಿನ ಹಣ ಬಂದಿಲ್ಲವೋ ಆ ಎಲ್ಲಾ ರೈತರ ಖಾತೆಗೆ ನವೆಂಬರ್ 30 ರಂದು ಯೋಜನೆಯ ಹಣವನ್ನು ವರ್ಗಾಯಿಸುವುದಾಗಿ ಸರ್ಕಾರ ಹೇಳಿದೆ.
ಇದನ್ನೂ ಓದಿ : Gold Price Today : ಭರ್ಜರಿ ಏರಿಕೆ ಕಂಡ ಚಿನ್ನ.! ಬೆಳ್ಳಿ ಬೆಲೆ ಸ್ಥಿರ
ಕೃಷಿ ಸಚಿವಾಲಯಕ್ಕೆ ದೂರು ನೀಡಬಹುದು :
ಯಾವ ರೈತರಿಗೆ ಹಣ ವರ್ಗಾವನೆಯಾಗಿಲ್ಲ ಆ ರೈತರು, ಕೃಷಿ ಸಚಿವಾಲಯಕ್ಕೆ ದೂರು ನೀಡಬಹುದು ಎಂದು ಸರ್ಕಾರ ತಿಳಿಸಿದೆ. ಇದಲ್ಲದೆ, ಕೃಷಿ ಅಧಿಕಾರಿಗೆ ಕೂಡಾ ಈ ಬಗ್ಗೆ ದೂರು ನೀಡಬಹುದು.
ರೈತರು ಈ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು :
ರೈತರು ಸಹಾಯವಾಣಿ ಸಂಖ್ಯೆ 155261 / 011-24300606 ಗೆ ಕರೆ ಮಾಡಬಹುದು. ಇಲ್ಲಿ ಕಂತಿನ ಅಪ್ಡೇಟ್ ಸಿಗುತ್ತದೆ. ಇದರೊಂದಿಗೆ, ಟೋಲ್ ಫ್ರೀ ಸಂಖ್ಯೆ 18001155266 ಅಥವಾ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಡೈರೆಕ್ಟ್ ಸಹಾಯವಾಣಿ ಸಂಖ್ಯೆ 011-23381092ಯನ್ನು ಕೂಡಾ ಸಂಪರ್ಕಿಸಬಹುದು.
ಇದನ್ನೂ ಓದಿ : Banking Alert! ದೇಶದ ಕೋಟ್ಯಾಂತರ ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.