7th pay commission : ಈ ಹಿಂದೆ ಕೇಂದ್ರ ಸರ್ಕಾರವು ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿತ್ತು. ಇದೀಗ ರಾಜ್ಯ ಸರ್ಕಾರಗಳು ಕೂಡಾ ನೌಕರರ ತುಟ್ಟಿ ಭತ್ಯೆ ಹೆಚ್ಚಿಸುತ್ತಿದೆ. ಇತ್ತೀಚೆಗೆ, 27 ಲಕ್ಷ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಿಸಿದ ನಂತರ ಉತ್ತರ ಪ್ರದೇಶ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಬರುತ್ತಿದೆ. ಮತ್ತೊಂದೆಡೆ ಡಿಎ ಹೆಚ್ಚಿಸಲು ತಮಿಳುನಾಡು ಸರ್ಕಾರ ಅನುಮೋದನೆ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೌಕರರ ತುಟ್ಟಿಭತ್ಯೆಯನ್ನು (ಡಿಎ) ನಾಲ್ಕು ಪ್ರತಿಶತದಷ್ಟು ಹೆಚ್ಚಿಸಲು ಅನುಮೋದನೆ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ 16 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.


COMMERCIAL BREAK
SCROLL TO CONTINUE READING

ಪಿಂಚಣಿದಾರರಿಗೂ ಅನುಕೂಲ :
ಸರ್ಕಾರದ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 2,366.82 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸರ್ಕಾರ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ನಿರ್ಧಾರದಿಂದ ಸರ್ಕಾರಿ ನೌಕರರ ಜತೆಗೆ ಪಿಂಚಣಿದಾರರು, ಕುಟುಂಬ ಪಿಂಚಣಿದಾರರಿಗೂ ಅನುಕೂಲವಾಗಲಿದೆ. ಉದ್ಯೋಗಿಗಳು 1 ಏಪ್ರಿಲ್ 2023 ರಿಂದ ಅನ್ವಯವಾಗುವಂತೆ ಹೆಚ್ಚಿದ ಡಿಎ ಮೊತ್ತವನ್ನು ಪಡೆಯುತ್ತಾರೆ. ಈ ಹಿಂದೆ ತಮಿಳುನಾಡಿನಲ್ಲಿ ಸರ್ಕಾರಿ ನೌಕರರ ಡಿಎ ಶೇ.38ರಷ್ಟಿದ್ದು, ಇದೀಗ ಏರಿಕೆ ನಂತರ ಇದು ಶೇ.42ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರದ ಕ್ರಮಗಳ ಪ್ರಕಾರ ರಾಜ್ಯ ಸರ್ಕಾರವೂ ಡಿಎ ಹೆಚ್ಚಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ : Best Selling Cars: ಏಪ್ರಿಲ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು!


ವಾರ್ಷಿಕ 7,536 ರೂ.ಗಳ  ಲಾಭ : 
ತಮಿಳುನಾಡಿನ ಸರ್ಕಾರಿ ನೌಕರರ ಕನಿಷ್ಠ ವೇತನ 15,700 ರೂ. ಆಗಿದೆ. ನಾಲ್ಕು ಶೇಕಡಾ ತುಟ್ಟಿ ಭತ್ಯೆ ಹೆಚ್ಚಳವಾದ ಮೇಲೆ ತಿಂಗಳಿಗೆ 628 ರೂಪಾಯಿ ವೇತನದಲ್ಲಿ ಹೆಚ್ಚಳವಾಗಲಿದೆ. ಇದನ್ನೂ ವಾರ್ಷಿಕವಾಗಿ ಲೆಕ್ಕ ಹಾಕಿ ನೋಡಿದರೆ 7,536 ರೂ.ಗಳಷ್ಟು ಹೆಚ್ಚಳವಾದಂತೆ ಆಗುತ್ತದೆ. ಏಳನೇ ವೇತನ ಆಯೋಗದ ಅಡಿಯಲ್ಲಿ, ಜನವರಿ ಮತ್ತು ಜುಲೈನಲ್ಲಿ ಕೇಂದ್ರ ನೌಕರರ ಡಿಎ ವರ್ಷಕ್ಕೆ ಎರಡು ಬಾರಿ ಹೆಚ್ಚಾಗುತ್ತದೆ. ಹಣದುಬ್ಬರ ದರದ ಆಧಾರದ ಮೇಲೆ ಎಷ್ಟು ಡಿಎ ಹೆಚ್ಚಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ.


ಯುಪಿಯಲ್ಲೂ ಶೇ.4ರಷ್ಟು ಡಿಎ ಹೆಚ್ಚಳ :
ಇದಕ್ಕೂ ಮುನ್ನ ಉತ್ತರ ಪ್ರದೇಶದ ಯೋಗಿ  ಸರ್ಕಾರ ಕೂಡಾ ಉದ್ಯೋಗಿಗಳ ಡಿಎಯನ್ನು ಶೇ.4ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಯುಪಿಯಲ್ಲಿ ಡಿಎ ಮತ್ತು ಡಿಆರ್ ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿದೆ. ಯುಪಿಯಲ್ಲಿನ ಉದ್ಯೋಗಿಗಳು ಜನವರಿ 1, 2023 ರಿಂದ ಅನ್ವಯವಾಗುವಂತೆ ಹೆಚ್ಚಿದ ಡಿಎ ಪ್ರಯೋಜನವನ್ನು ಪಡೆಯುತ್ತಾರೆ. 


ಇದನ್ನೂ ಓದಿ : ಮತ್ತೆ ಕುಸಿಯಿತು ಬಂಗಾರದ ಬೆಲೆ ! ಖರೀದಿಗೆ ಸರಿಯಾದ ಸಮಯ ಇದುವೇ


ಇನ್ನು ಜುಲೈ 1ರಿಂದ ಡಿಎ ಹೆಚ್ಚಳವಾಗುತ್ತದೆ ಎಂದು ಕೇಂದ್ರ ನೌಕರರು ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಸರ್ಕಾರ ಡಿಎ ಹೆಚ್ಚಳವನ್ನು ಘೋಷಿಸುವ ಸಾಧ್ಯತೆ ಇದೆ. ಆದರೆ ಈ ಹೆಚ್ಚಳ ಜುಲೈ 1 ರಿಂದಲೇ  ಜಾರಿಗೆ ಬರಲಿದೆ. ಈ ಬಾರಿಯೂ ಶೇ.4ರಷ್ಟು ಡಿಎ ಹೆಚ್ಚಳವಾಗುವ ನಿರೀಕ್ಷೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ