ನವದೆಹಲಿ: 2023ರ ಮೇ 19ರಂತೆ ಚಲಾವಣೆಯಲ್ಲಿರುವ 2,72 ಲಕ್ಷ ಕೋಟಿ ರೂ. ಅಥವಾ ಶೇ.76ರಷ್ಟು 2,000 ರೂ. ಮುಖಬೆಲೆಯ ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್ ಆಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI)  ಸೋಮವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಮೇ 19ರಂದು ಆರ್‌ಬಿಐ ಘೋಷಿಸಿತ್ತು. ಉಳಿತಾಯ ಖಾತೆಗಳಲ್ಲಿ ಠೇವಣಿ ಇಡುವ ಮೂಲಕ ಅಥವಾ ಬದಲಾಯಿಸಿಕೊಳ್ಳುವ ಮೂಲಕ ಮೇ 19ರೊಳಗೆ ಬ್ಯಾಂಕ್‌ಗಳಿಗೆ ಈ ನೋಟುಗಳನ್ನು ಹಿಂತಿರುಗಿಸಬೇಕು ಎಂದು ಸೂಚನೆ ನೀಡಿತ್ತು.


ಇದನ್ನೂ ಓದಿ: Mahindra Best Selling Car: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ SUV


ವಿವಿಧ ಬ್ಯಾಂಕ್‌ಗಳಿಂದ ಕಲೆಹಾಕಿರುವ ಅಂಕಿ-ಅಂಶಗಳ ಪ್ರಕಾರ, ಮೇ 19ರಂದು 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ದಿನದಿಂದ ಜೂನ್ 30ರವರೆಗೆ 2.72 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್‌ ಆಗಿವೆ. ಪರಿಣಾಮ ಜೂನ್ 30ರ ವಹಿವಾಟು ಅಂತ್ಯದ ವೇಳೆಗೆ  0.84 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.


ಈವರೆಗೆ ಶೇ.76 ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್ ಆಗಿವೆ. ಪ್ರಮುಖ ಬ್ಯಾಂಕ್‌ಗಳು ನೀಡಿರುವ ಮಾಹಿತಿ ಪ್ರಕಾರ, ಶೇ.87ರಷ್ಟು ನೋಟುಗಳು ಠೇವಣಿ ಮೂಲಕ ಹಾಗೂ ಉಳಿದ ಶೇ.13ರಷ್ಟು ನೋಟುಗಳು ಇತರ ನೋಟುಗಳೊಂದಿಗೆ ಬದಲಾವಣೆ ಮೂಲಕ ವಾಪಸ್‌ ಆಗಿವೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Harley Davidson ಬೈಕ್ ಖರೀದಿಸುವ ನಿಮ್ಮ ಕನಸು ಶೀಘ್ರದಲ್ಲೇ ನನಸಾಗಲಿದೆ, ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಈ ಅಗ್ಗದ ಬೈಕ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.