7th Pay Commission Latest Updates: ಕೇಂದ್ರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆ ಹಾಗೂ ಪರಿಹಾರ ಭತ್ಯೆಯನ್ನು ಶೇ.17 ರಿಂದ ಶೇ. 28ಕ್ಕೆ ಹೆಚ್ಚಿಸಲಾಗಿದೆ. ಶೇ.11 ರಷ್ಟು ಈ ಹೆಚ್ಚಳ ಕೇಂದ್ರ ಸರ್ಕಾರಿ ನೌಕರಿಗೆ ಭಾರಿ ಖುಷಿಕೊಡುವ ಸುದ್ದಿಯೇ ಆಗಿದೆ. ಆದರೂ ಕೂಡ ಅವರ ಪಾಲಿಗೆ ಈ ಖುಷಿ ಪರಿಪೂರ್ಣವಾಗಿಲ್ಲ. ಏಕೆಂದರೆ, ತಮ್ಮ ಬಾಕಿ ಇರುವ ತುಟ್ಟಿಭತ್ಯೆಯ ಕುರಿತು ಕೂಡ ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ ಎಂದು ನೌಕರರು ನಿರೀಕ್ಷಿಸಿದ್ದರು. ಆದರೆ, ಹಾಗೆ ನಡೆದಿಲ್ಲ. ಅಂದರೆ, ಕಳೆದ 18 ತಿಂಗಳ ಬಾಕಿ ಉಳಿದಿರುವ DA ನೌಕರರಿಗೆ ಸಿಕ್ಕಿಲ್ಲ.


COMMERCIAL BREAK
SCROLL TO CONTINUE READING

ಜುಲೈ 1 ರಿಂದ ಹೆಚ್ಚಾಗಿರುವ  DA ಸಿಗಲಿದೆ
ತುಟ್ಟಿಭತ್ಯೆಯನ್ನು ಶೇ. 28% ಕ್ಕೆ ಹೆಚ್ಚಿಸುವ ಸರ್ಕಾರದ ಈ ನಿರ್ಧಾರವು ಸುಮಾರು 65.26 ಲಕ್ಷ ಪಿಂಚಣಿದಾರರಿಗೆ (DR Hike) ಮತ್ತು ಸುಮಾರು 48.34 ಲಕ್ಷ ಕೇಂದ್ರ ಉದ್ಯೋಗಿಗಳಿಗೆ ಭಾರಿ ನೆಮ್ಮದಿಯನ್ನೇ ನೀಡಿದೆ. ಕರೋನಾದಿಂದಾಗಿ, 2020 ರ ಜನವರಿಯಿಂದ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು (DA Hike) ಹೆಚ್ಚಿಸಲು ಕೇಂದ್ರ ಸರ್ಕಾರ ನಿಲ್ಲಿಸಿತ್ತು. ಅಂದಿನಿಂದ ನೌಕರರು 17% ದರದಲ್ಲಿ ಡಿಎ ಪಡೆಯುತ್ತಿದ್ದರು. 2020 ರ ಜನವರಿ 1 ರಿಂದ 2021 ರ ಜೂನ್ 30 ರವರೆಗೆ ತುಟ್ಟಿಭತ್ಯೆ  ಶೇಕಡಾ 17 ರಷ್ಟಿದೆ. ಪ್ರಸ್ತುತ ಹೆಚ್ಚಿಸಲಾಗಿರುವ ತುಟ್ಟಿಭತ್ಯೆ, ಅಂದರೆ ಶೇ.28 ರಷ್ಟು DA ಜುಲೈ 2021 ರಿಂದ ಅನ್ವಯವಾಗಲಿದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.


ತುಟ್ಟಿಭತ್ಯೆ ಸಿಕ್ಕಿದೆ ಆದರೆ ಬಾಕಿ ಸಿಕ್ಕಿಲ್ಲ
ಸರ್ಕಾರ ರೆಟ್ರೋಸ್ಪೆಕ್ಟಿವ್ ಪದ್ಧತಿಯಿಂದ ಅವರ DA ಪಾವತಿಸಬೇಕು ಎಂಬುದು ನೌಕರರ ಬೇಡಿಕೆಯಾಗಿತ್ತು. ಆದರೆ, ಸರ್ಕಾರ ಈ ಸಂಗತಿಯನ್ನು ಅಲ್ಲಗಳೆದಿದೆ. ಈ ಕುರಿತು ಹೇಳಿರುವ ಸರ್ಕಾರ ಹೆಚ್ಚಾಗಿರುವ DA ಜುಲೈ 1, 2021ರಿಂದ ಅನ್ವಯಿಸಲಿದೆ ಎಂದಿದೆ. ಅಂದರೆ, ಕಳೆದ 18 ತಿಂಗಳ ಬಾಕಿ ಉಳಿದಿರುವ DA (DA Arrear) ನೌಕರರಿಗಾಗಲಿ ಅಥವಾ ಪಿಂಚಣಿದಾರರಿಗಾಗಲಿ ಸಿಗುವುದಿಲ್ಲ ಮತ್ತು ನೌಕರರ ಪಾಲಿಗೆ ಇದು ನಿರಾಶಾದಾಯಕ ಸಂಗತಿಯಾಗಿದೆ. ಏಕೆಂದರೆ, ಬಾಕಿ ಉಳಿದಿರುವ ಮೂರು DA ತಮ್ಮ ಖಾತೆ ಸೇರಿದರೆ, ಒಂದು ದೊಡ್ಡ ಮೊತ್ತ ತಮ್ಮದಾಗುತ್ತಿತ್ತು ಎಂಬುದು ನೌಕರರ ನಿರೀಕ್ಷೆಯಾಗಿತ್ತು.


ಇದನ್ನೂ ಓದಿ-Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಇಂದು ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ! 


ಯಾವ ತಿಂಗಳ ವೇತನದಲ್ಲಿ ಹೆಚ್ಚಾಗಿರುವ DA ಬರಲಿದೆ
ಕೇಂದ್ರ ಸರ್ಕಾರ ಮಾಡಿರುವ ಘೋಷಣೆಯ ಪ್ರಕಾರ, ನೌಕರರು ಹಾಗೂ ಪಿಂಚಣಿದಾರರಿಗೆ ಈ ಹೆಚ್ಚಾಗಿರುವ DA, ಜುಲೈ 1 ರಿಂದ ಅನ್ವಯಿಸಲಿದೆ. ಆದರೆ, ಜುಲೈ ತಿಂಗಳ ಸಂಬಳದ ಜೊತೆಗೆ ಇದು ಸಿಗಲಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದಾಗ ಮಾತ್ರ ಹಣ ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲ ನೌಕರರ ವೇತನ ಪ್ರತಿ ತಿಂಗಳ 16ರಿಂದ ಸಿದ್ಧವಾಗಲಿದೆ. ಇದು ಒಂದು ವೇಳೆ ನಡೆಯದೆ ಹೋದಲ್ಲಿ ಈ ಹೆಚ್ಚಾಗಿರುವ ಶೇ.28ರಷ್ಟು DA ಮುಂದಿನ ತಿಂಗಳ ವೇತನದ ಜೊತೆಗೆ ಬರಲಿದೆ.


ಇದನ್ನೂ ಓದಿ- Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ!


DA ಹೆಚ್ಚಾದಲ್ಲಿ ವೇತನದಲ್ಲಿ ಎಷ್ಟು ಏರಿಕೆಯಾಗಲಿದೆ?
ಇದುವರೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಅವರ ಮೂಲ ವೇತನದ ಶೇ.17 ರಷ್ಟು ತುಟ್ಟಿಭತ್ಯೆ ಸಿಗುತ್ತಿತ್ತು. ಇದೀಗ ಅದನ್ನು ಶೇ. 28ಕ್ಕೆ ಹೆಚ್ಚಿಸಲಾಗಿದೆ. ಉದಾಹರಣೆಗೆ ಓರ್ವ ನೌಕರನ ಮೂಲ ವೇತನ ರೂ.20000 ಆಗಿದೆ ಎಂದಿಟ್ಟುಕೊಳ್ಳೋಣ. ಮೊದಲು ಆತನಿಗೆ ಶೇ.17ರ ಲೆಕ್ಕಾಚಾರದಲ್ಲಿ 3500 ರೂ.ತುಟ್ಟಿಭತ್ಯೆ ಸಿಗುತ್ತಿತ್ತು. ಇದೀಗ ಶೇ.28ರ ಲೆಕ್ಕಾಚಾರದಲ್ಲಿ ರೂ.5600 ತುಟ್ಟಿಭತ್ಯೆ ಸಿಗಲಿದೆ. ಅಂದರೆ ಸರ್ಕಾರಿ ನೌಕರರ ವೇತನದಲ್ಲಿ ನೇರ ರೂ.2200 ಏರಿಕೆಯಾದಂತಾಗಲಿದೆ. ಇದೆ ರೀತಿ ಪಿಂಚಣಿದಾರರ ಪರಿಹಾರ ಭತ್ಯೆ ಮತ್ತು ಪಿಂಚಣಿ ಕೂಡ ನಿರ್ಧರಿಸಲಾಗುವುದು. ವಿವಿಧ ವರ್ಗದ ನೌಕರರಿಗೆ ವಿವಿಧ ಸ್ಕೇಲ್ ನಲ್ಲಿ ಬೇಸಿಕ್ ಸ್ಯಾಲರಿ ನೀಡಲಾಗುತ್ತದೆ. ಅವರು ತಮ್ಮ ಮೂಲ ವೇತನದ ಆಧಾರದ ಮೇಲೆ ವೇತನ ಹೆಚ್ಚಳವನ್ನು ಲೆಕ್ಕ ಮಾಡಬಹುದಾಗಿದೆ. 


ಇದನ್ನೂ ಓದಿ-ITR Benefits : ನಿಮ್ಮ ಆದಾಯಕ್ಕೆ ತೆರಿಗೆ ವಿಧಿಸದಿದ್ದರೂ ITR ಸಲ್ಲಿಸಿದರೆ ನಿಮಗೆ ಸಿಗಲಿದೆ 5 ಪ್ರಯೋಜನಗಳು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ