7th Pay Commission: ತುಟ್ಟಿಭತ್ಯೆ (DA) ಕುರಿತು ಮತ್ತೊಂದು ಹೊಸ ಅಪ್ಡೇಟ್ ಪ್ರಕಟಗೊಂಡಿದೆ. ಮಾರ್ಚ್‌ನಲ್ಲಿ DA ಹೆಚ್ಚಿಸಿದ (DA Hike) ನಂತರ ಈಗ ಜುಲೈನಲ್ಲಿ ಪ್ರತ್ಯೇಕ ಹೆಚ್ಚಳವಾಗಲಿದೆ. ಆದರೆ, ಜುಲೈನಲ್ಲಿ, DA ಲೆಕ್ಕಾಚಾರದ ಸೂತ್ರ (DA Calculation Rule Change) ಬದಲಾಗುತ್ತದೆ. ಪ್ರಸ್ತುತ ಕೇಂದ್ರ ನೌಕರರ DA ಶೇ.3 ರಷ್ಟು ಹೆಚ್ಚಾಗುತ್ತಿದೆ. ಅಂದರೆ ಒಟ್ಟು DA ಶೇ.34ಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಮುಂದಿನ ತುಟ್ಟಿಭತ್ಯೆ (Dearness Allowance) ಬದಲಾವಣೆ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ AICPI ಸೂಚ್ಯಂಕದಲ್ಲಿ ನಿರಂತರ ಕುಸಿತ ಕಂಡುಬರುತ್ತಿದ್ದು, ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ಸಹ ಬದಲಾದ ರೀತಿಯಲ್ಲಿ ಲೆಕ್ಕಹಾಕಲಾಗುತ್ತಿದೆ.

COMMERCIAL BREAK
SCROLL TO CONTINUE READING

ಕಾಸ್ಟ್ ಆಫ್ ಲಿವಿಂಗ್ ಗಾಗಿ ತುಟ್ಟಿಭತ್ಯೆ ಸಿಗುತ್ತದೆ
ಕೇಂದ್ರ (Central Government) ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಅವರ ಜೀವನ ವೆಚ್ಚದ ಮಟ್ಟವನ್ನು ಸುಧಾರಿಸಲು ತುಟ್ಟಿಭತ್ಯೆ ನೀಡಲಾಗುತ್ತದೆ. ಈ ಭತ್ಯೆಯು ವೇತನ ರಚನೆಯ ಒಂದು ಭಾಗವಾಗಿದೆ, ಆದ್ದರಿಂದ ಹಣದುಬ್ಬರ ಏರಿಕೆಯ ನಂತರವೂ ಉದ್ಯೋಗಿಯ ಜೀವನ ಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗಬಾರದು. ಸರ್ಕಾರಿ ನೌಕರರಿಗೆ, ಸಾರ್ವಜನಿಕ ವಲಯದ ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ.

ಹೊಸ ಸೂತ್ರ ಯಾವುದು?
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತುಟ್ಟಿಭತ್ಯೆಗೆ ಸಂಬಂಧಿಸಿದ ಲೆಕ್ಕಾಚಾರದ ಸೂತ್ರವನ್ನು ಬದಲಾಯಿಸಿದೆ. ಕಾರ್ಮಿಕ ಸಚಿವಾಲಯವು ತುಟ್ಟಿಭತ್ಯೆ (DA Calculation) ಗಾಗಿ 2016 ರ ಮೂಲ ವರ್ಷವನ್ನು ಬದಲಾಯಿಸಿದೆ. ವೇತನ ದರ ಸೂಚ್ಯಂಕದ ಹೊಸ ಸರಣಿಯನ್ನು (WRI-Wage Rate Index) ಬಿಡುಗಡೆ ಮಾಡಲಾಗಿದೆ. 2016=100 ರ ಮೂಲ ವರ್ಷದೊಂದಿಗೆ WRI ಯ ಹೊಸ ಸರಣಿಯು 1963-65 ರ ಮೂಲ ವರ್ಷದ ಹಳೆಯ ಸರಣಿಯನ್ನು ಬದಲಿಸುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ತುಟ್ಟಿಭತ್ಯೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
7ನೇ ವೇತನ ಆಯೋಗದ (7th CPC) ಪ್ರಸ್ತುತ ತುಟ್ಟಿಭತ್ಯೆಯ ದರವನ್ನು ಮೂಲ ವೇತನದೊಂದಿಗೆ ಗುಣಿಸಿ ತುಟ್ಟಿಭತ್ಯೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ. ನಿಮ್ಮ ಮೂಲ ವೇತನ ರೂ 56,900 ಆಗಿದ್ದರೆ, DA  (56,900 x12)/100 ಆಗಿದ್ದರೆ, ಪ್ರಸ್ತುತ ಶೇಕಡಾವಾರು ದರವು 12% ಆಗಿದೆ. ತುಟ್ಟಿಭತ್ಯೆಯ ಶೇಕಡಾವಾರು = ಕಳೆದ 12 ತಿಂಗಳುಗಳಲ್ಲಿ CPI ನ ಸರಾಸರಿ - 115.76. ಬರುವ ಮೊತ್ತವನ್ನು 115.76 ರಿಂದ ಭಾಗಿಸಲಾಗುತ್ತದೆ. ಬರುವ ಅಂಕವನ್ನು 100 ರಿಂದ ಗುಣಿಸಲಾಗುತ್ತದೆ.

ನಿಮ್ಮ ಸಂಬಳವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
7ನೇ ವೇತನ ಆಯೋಗದ (7ನೇ ವೇತನ ಆಯೋಗದ ವೇತನ ಹೆಚ್ಚಳ) ಅಡಿಯಲ್ಲಿ ವೇತನ ಲೆಕ್ಕಾಚಾರಕ್ಕಾಗಿ, ಉದ್ಯೋಗಿಯ ಮೂಲ ವೇತನದ ಮೇಲೆ DA ಲೆಕ್ಕ ಹಾಕಬೇಕು. ಕೇಂದ್ರ ನೌಕರನ ಕನಿಷ್ಠ ಮೂಲ ವೇತನವು 25,000 ರೂ ಎಂದು ಭಾವಿಸೋಣ, ಆಗ ಅವನ ಡಿಎ ಲೆಕ್ಕಾಚಾರವು 25,000 ರಲ್ಲಿ ಶೇ.34% ರಷ್ಟು ಆಗಿರುತ್ತದೆ. ರೂ 25,000 ರಲ್ಲಿ 34% ಅಂದರೆ ಒಟ್ಟು ರೂ 8500 ಆಗಿರುತ್ತದೆ. ಇದೊಂದು ಉದಾಹರಣೆಯಾಗಿದೆ ಅಷ್ಟೇ. ಇವೆ ರೀತಿ, ಉಳಿದ ಸಂಬಳದ ರಚನೆಯನ್ನು ಹೊಂದಿರುವವರು ತಮ್ಮ ಮೂಲ ವೇತನಕ್ಕೆ ಅನುಗುಣವಾಗಿ ಅದನ್ನು ಲೆಕ್ಕ ಹಾಕಬಹುದು.


ಇದನ್ನೂ ಓದಿ-LICಯ ಈ ಸೂಪರ್ ಹಿಟ್ ಯೋಜನೆಯಲ್ಲಿ ತಿಂಗಳಿಗೆ ರೂ.233 ಹೂಡಿಕೆ ಮಾಡಿ 17 ಲಕ್ಷ ರೂ. ಸಂಪಾದಿಸಿ

ತುಟ್ಟಿಭತ್ಯೆ ತೆರಿಗೆಗೆ ಒಳಪಡುತ್ತದೆ
ತುಟ್ಟಿಭತ್ಯೆ ಸಂಪೂರ್ಣ ತೆರಿಗೆಗೆ ಒಳಪಡುತ್ತದೆ. ಭಾರತದಲ್ಲಿನ ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ, ಆದಾಯ ತೆರಿಗೆ ರಿಟರ್ನ್ (ITR) ನಲ್ಲಿ ತುಟ್ಟಿಭತ್ಯೆಯ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ನೀಡಬೇಕು. ಅಂದರೆ ತುಟ್ಟಿ ಭತ್ಯೆಯ ಹೆಸರಿನಲ್ಲಿ ನೀವು ಪಡೆಯುವ ಮೊತ್ತವು ತೆರಿಗೆಗೆ ಒಳಪಟ್ಟಿರುತ್ತದೆ ಮತ್ತು ಅದರ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ-IT Firm: ತನ್ನ ನೌಕರರಿಗೆ ಕೋಟ್ಯಾಂತರ ಮೌಲ್ಯದ ಕಾರ್ ಗಿಫ್ಟ್ ನೀಡಿದ IT ಕಂಪನಿ

ತುಟ್ಟಿ ಭತ್ಯೆಯಲ್ಲಿ ಎರಡು ವಿಧಗಳಿವೆ
ತುಟ್ಟಿಭತ್ಯೆಯಲ್ಲಿ ಒಟ್ಟು ಎರಡು ವಿಧಗಳಿವೆ. ಮೊದಲನೆಯದ್ದು ಇಂಡಸ್ಟ್ರಿಯಲ್ ಡಿಯರ್ನೆಸ್ ಅಲೌಂಸ್ ಆಗ್ಗಿದರೆ ಮತ್ತು ಎರಡನೇಯದ್ದು ವೇರಿಯಬಲ್ ಡಿಯರ್ನೆಸ್ ಅಲೌಂಸ್ ಆಗಿದೆ. ಕೈಗಾರಿಕಾ ತುಟ್ಟಿಭತ್ಯೆಯನ್ನು ಪ್ರತಿ 3 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಇದು ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ನೌಕರರಿಗೆ ಅನ್ವಯಿಸುತ್ತದೆ. ಇದನ್ನು ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ವೇರಿಯಬಲ್ ಡಿಯರ್ನೆಸ್ ಭತ್ಯೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ವೇರಿಯಬಲ್ ಡಿಯರ್ನೆಸ್ ಭತ್ಯೆಯನ್ನು ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.