Good News: DA ಹಣ ಸಿಗುವ ದಿನಾಂಕ ಫಿಕ್ಸ್, ನೌಕರರಿಗೆ ಅರಿಯರ್ ಲಾಭ ಕೂಡ ಸಿಗಲಿದೆ
7th Pay Commission: ಕೊನೆಗೂ ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆಗೆ ತೆರೆ ಬಿದ್ದಂತಾಗಿದೆ. ಏಕೆಂದರೆ, ಶೀಘ್ರವೇ ಅವರಿಗೆ ತಮ್ಮ ತುಟ್ಟಿಭತ್ಯೆಯ ಪೇಮೆಂಟ್ ಸಿಗಲಿದೆ. ಇದರಿಂದ ಒಂದು ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಡಬಲ್ ಬೆನಿಫಿಟ್ ಸಿಗಲಿದೆ.
7th Pay Commission: ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆಗೆ ತೆರೆ ಬಿದ್ದಿದೆ. ಏಕೆಂದರೆ ಅವರಿಗೆ ಅವರ ನಿಂತು ಹೋದ Dearness Allowance ಸಿಗಲಿದೆ. ಹೀಗಾಗಿ ಒಂದು ಕೋಟಿಗೂ ಅಧಿಕ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಡಬಲ್ ಲಾಭ ಸಿಗಲಿದೆ. ಕಳೆದ ವರ್ಷ ಫ್ರೀಜ್ ಮಾಡಲಾಗಿರುವ DA ಜುಲೈನಿಂದ ಮತ್ತೆ ಆರಂಭಗೊಳ್ಳಲಿದೆ. ಆದರೆ, ಅದರ ಪೇಮೆಂಟ್ ನೌಕರರಿಗೆ ಜುಲೈ ತಿಂಗಳಿನಲ್ಲಿ ಸಿಗುವುದಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ಅವರ ಖಾತೆಗೆ ಈ ಹಣ ಬರಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ JCM (National Commission Of JCM), ಈ ಕುರಿತು ಲೆಟರ್ ಜಾರಿಗೊಳಿಸಿದೆ. ನಮ್ಮ ಅಂಗಸಂಸ್ಥೆ ಝೀ ಬಿಸಿನೆಸ್ ಬಳಿ ಈ ಲೆಟರ್ ಕಾಪಿ ಇದೆ.
ಜೂನ್ 26ರಂದು ನಡೆದ ಸಭೆಯಲ್ಲಿ ನಿರ್ಣಯ (7th Pay Commission News)
ನ್ಯಾಷನಲ್ ಕೌನ್ಸಿಲ್ ಆಫ್ JCM ಕಾರ್ಯದರ್ಶಿ ಶಿವ್ ಗೋಪಾಲ್ ಮಿಶ್ರಾ ಅವರಿಂದ ಜಾರಿ ಮಾಡಲಾಗಿರುವ ಈ ಪತ್ರದ ಪ್ರಕಾರ, ಜೂನ್ 26ರಂದು ಕ್ಯಾಬಿನೆಟ್ ಸಚಿವರ ಜೊತೆಗೆ ನಡೆದ ಅವರ ಸಭೆ ಸಾಕಷ್ಟು ಸಕಾರಾತ್ಮಕವಾಗಿತ್ತು ಎನ್ನಲಾಗಿದೆ. ಈ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಕಳೆದ 18 ತಿಂಗಳಿನಿಂದ ಫ್ರೀಜ್ ಆಗಿರುವ ತುಟ್ಟಿಭತ್ಯೆಯ ನಿರ್ಧಾರ ದೊಡ್ಡ ನಿರ್ಧಾರ ಎನ್ನಲಾಗಿದೆ. ಕೇಂದ್ರ ಸರ್ಕಾರ ಜುಲೈ ತಿಂಗಳಿನಿಂದಲೇ DA ಆರಂಭಿಸಲು ಹೇಳಿದೆ. ಆದರೆ, ಹಿಂದಿನ ಮೂರು ಕಂತುಗಳ ಪಾವತಿ ನೌಕರರಿಗೆ ಜುಲೈ ತಿಂಗಳಿನಲ್ಲಿ ಸಿಗುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ- Covid-19 Vaccine News: ಇನ್ಮುಂದೆ ಲಸಿಕೆ ಉತ್ಪಾದಕರಿಂದ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಪಡೆಯುವ ಹಾಗಿಲ್ಲ
ಮೂರು ಕಂತುಗಳ ಜೊತೆಗೆ ಅರಿಯರ್ ಲಾಭ ಕೂಡ ಸಿಗಲಿದೆ
ಕ್ಯಾಬಿನೆಟ್ ಸಚಿವರು DA (Dearness Allowance) ಹಾಗೂ DR (Dearness Relief) ಮೇಲಿನ ತಡೆಯನ್ನು ತೆರವುಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಿವ್ ಗೋಪಾಲ್ ಮಿಶ್ರಾ ಹೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಜನವರಿ 2020, ಜೂನ್ 2020 ಹಾಗೂ ಜನವರಿ 2021 ರ ತುಟ್ಟಿ ಭತ್ಯೆ ಏಕಕಾಲಕ್ಕೆ ಸಿಗಲಿದೆ. ಆದರೆ, ಸೆಪ್ಟೆಂಬರ್ ತಿಂಗಳ ವೇತನದ ಜೊತೆಗೆ ಈ ಮೂರು ಕಂತುಗಳನ್ನು ಪಾವತಿಸಲಾಗುವುದು ಎನ್ನಲಾಗಿದೆ. ಇದಲ್ಲದೆ, ಜುಲೈ 2021ರಲ್ಲಿ ಜಾರಿಯಾಗುವ ಜೂನ್ 2021ರ ತುಟ್ಟಿಭತ್ಯೆಯ ಅಂಕಿಯನ್ನು ಕೂಡ ಇದಕ್ಕೆ ಸೇರಿಸಲಾಗುವುದು ಎನ್ನಲಾಗಿದೆ. ಒಟ್ಟಾರೆ ಹೇಳುವುದಾದರೆ, ಮೂರು ಹಳೆ ಕಂತುಗಳ ಜೊತೆಗೆ ಜೂನ್ 2021ರ DA ಕೂಡ ಸಿಗಲಿದೆ. ಇಲ್ಲಿ ವಿಶೇಷ ಸಂಗತಿ ಎಂದರೆ ಸರ್ಕಾರ ಸೆಪ್ಟೆಂಬರ್ ತಿಂಗಳಿನ ವೇತನದಲ್ಲಿ ಜುಲೈ 2021 ಹಾಗೂ ಆಗಸ್ಟ್ 2021ರ ಅರಿಯರ್ ಕೂಡ ನೀಡಲಿದೆ.
ಇದನ್ನೂ ಓದಿ-Supreme Court: ಕೊರೊನಾದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರ ಪರಿಹಾರ ಒದಗಿಸಬೇಕು
ಶೇ.31ರಷ್ಟಾಗಲಿದೆ DA
ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯ ಶೇ.17 ರಷ್ಟು ತುಟ್ಟಿಭತ್ಯೆ ಸಿಗುತ್ತಿದೆ. ಆದರೆ, ಹಿಂದಿನ ಮೂರು ಕಂತುಗಳನ್ನು ಸೇರಿಸಿದರೆ, ಇದು ಶೇ.28 ರಷ್ಟಾಗಲಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ 7th Pay Commission ಅಡಿ ಜೂನ್ 2021ರಲ್ಲಿ ತುಟ್ಟಿಭತ್ಯೆ ಮತ್ತೆ ಶೇ.3ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ. ಹೀಗಾಗಿ ಸರ್ಕಾರಿ ನೌಕರರ ಒಟ್ಟು DA 28%+3%=31% ರಷ್ಟು ಆಗಲಿದ್ದು, ಈ DA ಹಣ ಸೆಪ್ಟೆಂಬರ್ ತಿಂಗಳ ವೇತನದ ಜೊತೆಗೆ ಸಿಗಲಿದೆ.
ಇದನ್ನೂ ಓದಿ-ಜು. 31 ರವರೆಗೆ ಇಂಟೆರ್ ನ್ಯಾಷನಲ್ ಫ್ಲೈಟ್ ಬಂದ್ : ಕೇಂದ್ರ ಸರ್ಕಾರ ಆದೇಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.