7th Pay Commission : ಹಬ್ಬದ ದಿನವೆ ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ಡಿಎ ಹೆಚ್ಚಳಕ್ಕೆ ಅಧಿಸೂಚನೆ ಬಿಡುಗಡೆ
ಇದೀಗ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ತುಟ್ಟಿಭತ್ಯೆಯನ್ನು ಹೆಚ್ಚಿಸುವ ಅಧಿಸೂಚನೆಯನ್ನು ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ (DOE) ಹೊರಡಿಸಿದೆ.
7th Pay Commission DA Hike : ಕಳೆದ ದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ನೌಕರರ ಡಿಎಯನ್ನು ಶೇ.4ರಷ್ಟು ಹೆಚ್ಚಿಸುವುದಾಗಿ ಘೋಷಿಸಲಾಗಿತ್ತು. ಸಂಪುಟದ ಈ ನಿರ್ಧಾರದ ನಂತರ ತುಟ್ಟಿಭತ್ಯೆಯನ್ನು ಶೇ.34ರಿಂದ ಶೇ.38ಕ್ಕೆ ಹೆಚ್ಚಿಸಲಾಗಿದೆ. ಇದೀಗ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ತುಟ್ಟಿಭತ್ಯೆಯನ್ನು ಹೆಚ್ಚಿಸುವ ಅಧಿಸೂಚನೆಯನ್ನು ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ (DOE) ಹೊರಡಿಸಿದೆ.
ತುಟ್ಟಿಭತ್ಯೆಯನ್ನು ಮಾರ್ಚ್‌ನಲ್ಲಿ ಶೇ. 3 ರಷ್ಟು ಹೆಚ್ಚಳ
ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯಲ್ಲಿ, ತುಟ್ಟಿಭತ್ಯೆಯ ಪರಿಷ್ಕೃತ ದರಗಳನ್ನು ಜುಲೈ 1, 2022 ರಿಂದ ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ. ಶೀಘ್ರದಲ್ಲಿಯೇ ನೌಕರರ ಖಾತೆಗೆ ಹಣ ಬರಲಿದೆ. ತುಟ್ಟಿಭತ್ಯೆ ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ 50 ಲಕ್ಷ ಕೇಂದ್ರ ನೌಕರರು ಮತ್ತು 62 ಲಕ್ಷ ಪಿಂಚಣಿದಾರರಿಗೆ ದೊಡ್ಡ ಪರಿಹಾರ ಸಿಗಲಿದೆ. ಈ ಹಿಂದೆ, ಮಾರ್ಚ್‌ನಲ್ಲಿ ಕೇಂದ್ರ ಸಚಿವ ಸಂಪುಟವು 3% ತುಟ್ಟಿಭತ್ಯೆಯನ್ನು ಹೆಚ್ಚಿಸಿತು. ಆಗ ಡಿಎ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿತ್ತು.
ಇದನ್ನೂ ಓದಿ : ರೈತರಿಗೆ ಸಿಹಿ ಸುದ್ದಿ! ಅನ್ನದಾತನ ಸಂಕಷ್ಟ ಪರಿಹಾರಕ್ಕೆ ಮತ್ತೊಂದು ಸೌಲಭ್ಯ ಒದಗಿಸಿದ ಸರ್ಕಾರ
ಅಧಿಸೂಚನೆಯ ಮುಖ್ಯ ವಿಷಯಗಳು ನಿಮಗಾಗಿ
1. ಕೇಂದ್ರ ನೌಕರರಿಗೆ ಶೇ.34ರ ಬದಲಾಗಿ ಶೇ.38ರಷ್ಟು ತುಟ್ಟಿಭತ್ಯೆ ನೀಡಲಾಗುವುದು. ಈ ಭತ್ಯೆ ಮೂಲ ವೇತನದ ಆಧಾರದ ಮೇಲೆ ಇರುತ್ತದೆ. ಪರಿಷ್ಕೃತ ದರವು ಜುಲೈ 1, 2022 ರಿಂದ ಅನ್ವಯವಾಗುತ್ತದೆ.
2. ಏಳನೇ ವೇತನ ಆಯೋಗದ ಅಡಿಯಲ್ಲಿ, 'ಬೇಸಿಕ್ ಪೇ' ಅನ್ನು ವಿವಿಧ ಹಂತಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಈ ಪರಿಷ್ಕೃತ ವೇತನ ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೂಲ ವೇತನದಲ್ಲಿ ವಿಶೇಷ ಭತ್ಯೆ ಇಲ್ಲ.
3. ಮೂಲ ವೇತನವು ಯಾವುದೇ ಕೇಂದ್ರ ಉದ್ಯೋಗಿಯ ಸಂಬಳದ ಅತ್ಯಗತ್ಯ ಭಾಗವಾಗಿದೆ. ಇದನ್ನು FR9(21) ಅಡಿಯಲ್ಲಿ ಸಂಬಳ ಎಂದು ಪರಿಗಣಿಸಲಾಗುತ್ತದೆ.
4. ವೆಚ್ಚ ಇಲಾಖೆ (DoT) ಯ ಅಧಿಸೂಚನೆಯಲ್ಲಿ, ತುಟ್ಟಿಭತ್ಯೆಯ ಪಾವತಿಯಲ್ಲಿ 50 ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪೂರ್ಣ ರೂಪಾಯಿ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ. ಅದಕ್ಕಿಂತ ಕಡಿಮೆ ಮೊತ್ತವನ್ನು ನಿರ್ಲಕ್ಷಿಸಬಹುದು.
5. ಅಧಿಸೂಚನೆಯ ಪ್ರಕಾರ, ಪರಿಷ್ಕೃತ ಡಿಎಯ ಪ್ರಯೋಜನವು ರಕ್ಷಣಾ ಸೇವೆಗಳ ನಾಗರಿಕ ಉದ್ಯೋಗಿಗಳಿಗೆ ಲಭ್ಯವಿರುತ್ತದೆ. ಈ ವೆಚ್ಚವು ನಿರ್ದಿಷ್ಟ ರಕ್ಷಣಾ ಸೇವಾ ಅಂದಾಜಿನ ಅಡಿಯಲ್ಲಿ ಬರುತ್ತದೆ.
ಹೆಚ್ಚಿದ ಡಿಎ ಬಾಕಿ ಯಾವಾಗ ಬರುತ್ತದೆ?
ಅಧಿಸೂಚನೆ ಹೊರಬಿದ್ದ ಬಳಿಕ ಇದೀಗ ಸರ್ಕಾರದಿಂದ ಬಾಕಿ ಇರುವ ಡಿಎ ಬಿಡುಗಡೆ ಮಾಡಲಾಗುವುದು. ಇದರ ಹಣ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಖಾತೆಗೆ ಶೀಘ್ರದಲ್ಲೇ ಬರಲಿದೆ.
ಇದನ್ನೂ ಓದಿ : Gold Price Today : ಎರಡನೇ ದಿನವೂ ದುಬಾರಿಯಾದ ಚಿನ್ನ, ಬೆಳ್ಳಿ ಖರೀದಿ ಯೋಚನೆ ಸಾಧ್ಯವೇ ಇಲ್ಲ .!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.