ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಮುಂದಿನ ವರ್ಷ ಅವರ ವೇತನದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಲಿವೆ ಎನ್ನಲಾಗುತ್ತಿದೆ. ಹೊಸ ವರ್ಷದಲ್ಲಿ ತುಟ್ಟಿಭತ್ಯೆ ಮತ್ತೆ ಹೆಚ್ಚಾಗಲಿದ್ದು, ಮುಂದಿನ ವೇತನ ಆಯೋಗದ ಬಗ್ಗೆ ಸರ್ಕಾರವು ಅಪ್ಡೇಟ್ ನೀಡಬಹುದು. ಆದರೆ, ಇನ್ನೊಂದೆಡೆ ಫಿಟ್‌ಮೆಂಟ್ ಅಂಶದ ಬಗ್ಗೆಯೂ ಕೂಡ ಒಳ್ಳೇಯ ಸುದ್ದಿ ಸಿಗುವ ಸಾಧ್ಯತೆ ಇದೆ. ತುಟ್ಟಿಭತ್ಯೆಯ ಕುರಿತು ಹೇಳುವುದಾದರೆ. ಇದುವರೆಗೆ ಬಂದಿರುವ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳು ಮುಂದಿನ ಬಾರಿಯೂ ಶೇ.4-5ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಸೂಚಿಸುತ್ತಿವೆ. ಇದರೊಂದಿಗೆ ಹಿರಿಯ ವೇತನ ಶ್ರೇಣಿಯ ನೌಕರರ ವೇತನ 20 ಸಾವಿರ ರೂ.ಗಳಷ್ಟು ಹೆಚ್ಚಾಗಲಿದ್ದು, 1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ಇದರ ನೇರ ಲಾಭ ಪಡೆಯಲಿದ್ದಾರೆ. (Busienss News In Kannada)


COMMERCIAL BREAK
SCROLL TO CONTINUE READING

ತುಟ್ಟಿಭತ್ಯೆ 50 ಪ್ರತಿಶತ ದಾಟಲಿದೆ
ಪ್ರಸ್ತುತ ಇರುವ ಶೇ 46 ರಷ್ಟು ತುಟ್ಟಿಭತ್ಯೆಯನ್ನು ಕೇಂದ್ರದಲ್ಲಿರುವ ಮೋದಿ ಸರ್ಕಾರವು ಹೊಸ ವರ್ಷ ಜನವರಿ 2024 ರಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4-5 ರಷ್ಟು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಸೆಪ್ಟೆಂಬರ್‌ವರೆಗಿನ ಎಐಸಿಪಿಐ ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ ತುಟ್ಟಿಭತ್ಯೆ ಶೇ.2.50ರಷ್ಟು ಹೆಚ್ಚಾಗಿದೆ. ಪ್ರಸ್ತುತ ಡಿಎ ಅಂಕವು 48.54 ಪ್ರತಿಶತದಲ್ಲಿದೆ. ಒಂದು ವೇಳೆ ಎಲ್ಲಾ ಅಂದಾಜುಗಳು ಸರಿಯಾದರೆ, ತುಟ್ಟಿಭತ್ಯೆ ಶೇ. 51 ರಷ್ಟು ತಲುಪಬಹುದು.


ಕನಿಷ್ಠ ವೇತನ 8000 ರೂ
ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಇದೇ ವೇಳೆ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ಫಿಟ್‌ಮೆಂಟ್ ಅಂಶ ಹೆಚ್ಚಳದಿಂದಾಗಿ ಕೇಂದ್ರ ನೌಕರರ ವೇತನ 8,860 ರೂ. ಹೆಚ್ಚಾಗಲಿದೆ. ಫಿಟ್‌ಮೆಂಟ್ ಅಂಶವು ಪ್ರಸ್ತುತ 2.57 ಆಗಿದೆ. 3.68ಕ್ಕೆ ಹೆಚ್ಚಿಸಿದರೆ, ಲೆವೆಲ್-1ರ ದರ್ಜೆಯ ವೇತನದ ಕನಿಷ್ಠ ಮಿತಿ 26,000 ರೂ. ಅಂದರೆ ಸಂಬಳದಲ್ಲಿ ನೇರವಾಗಿ 8000 ರೂಗಳಾಗಲಿದೆ.


ಇದನ್ನೂ ಓದಿ-ತನ್ನ ಕೋಟ್ಯಾಂತರ ಗ್ರಾಹಕರಿಗೆ ಭಾರಿ ಉಡುಗೊರೆ ನೀಡಿದ ಎಸ್ಬಿಐ!


ವೇತನ 49,420 ರೂ
ಉದಾಹರಣೆಗೆ, ಹಂತ-1 ರಲ್ಲಿ ಗ್ರೇಡ್ ಪೇ 1800 ರಲ್ಲಿ ಕೇಂದ್ರ ಉದ್ಯೋಗಿಯ ಮೂಲ ವೇತನವು ರೂ 18,000 ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ, ಫಿಟ್ಮೆಂಟ್ ಅಂಶದ ಪ್ರಕಾರ ಲೆಕ್ಕಹಾಕಿದ ವೇತನವು ರೂ 18,000 X 2.57 = ರೂ 46,260 ಆಗುತ್ತದೆ. ಇದನ್ನು 3.68 ಎಂದು ಪರಿಗಣಿಸಿದರೆ ಸಂಬಳ 26,000X3.68= 95,680 ರೂ.ಗಲಾಗುತ್ತದೆ ಅಂದರೆ ನೌಕರರ ವೇತನದಲ್ಲಿ ಒಟ್ಟು ವ್ಯತ್ಯಾಸ 49,420 ರೂ.ಗಳಾಗಲಿದೆ ಈ ಲೆಕ್ಕಾಚಾರವನ್ನು ಕನಿಷ್ಠ ಮೂಲ ವೇತನ ಆಧರಿಸಿ ಮಾಡಲಾಗಿದೆ. ಗರಿಷ್ಠ ಸಂಬಳ ಹೊಂದಿರುವವರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ.


ಇದನ್ನೂ ಓದಿ-ಸರ್ಕಾರಿ ನೌಕರರ ಡಿಎ ಮತ್ತೆ ಶೇ.3 ರಷ್ಟು ಹೆಚ್ಚಾಗುವುದು ಪಕ್ಕಾ, ವೇತನದಲ್ಲಿ 20,448 ರೂ.ಗಳ ಜಬರ್ದಸ್ತ ಏರಿಕೆ!


ಫಿಟ್‌ಮೆಂಟ್ ಫ್ಯಾಕ್ಟರ್ ಎಂದರೇನು?
ಫಿಟ್‌ಮೆಂಟ್ ಅಂಶವು ಎಲ್ಲಾ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು ನಿರ್ಧರಿಸುವ ಸೂತ್ರವಾಗಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಇದನ್ನು ಜಾರಿಗೊಳಿಸಲಾಗಿದೆ. ಈ ಕಾರಣದಿಂದಾಗಿ, ನೌಕರರ ವೇತನವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಕೊನೆಯ ಬಾರಿಗೆ 2016 ರಲ್ಲಿ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲಾಗಿತ್ತು. ನಂತರ ಕೇಂದ್ರ ನೌಕರರ ಮೂಲ ವೇತನವನ್ನು 6 ಸಾವಿರದಿಂದ 18 ಸಾವಿರಕ್ಕೆ ಹೆಚ್ಚಿಸಲಾಗಿತ್ತು. 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಫಿಟ್‌ಮೆಂಟ್ ಅಂಶವು ಪ್ರಸ್ತುತ 2.57 ಆಗಿದೆ. ಕೇಂದ್ರ ಉದ್ಯೋಗಿಗಳ ವೇತನವನ್ನು ನಿಗದಿಪಡಿಸುವಾಗ, ಭತ್ಯೆಗಳನ್ನು ಹೊರತುಪಡಿಸಿ  ಉದ್ಯೋಗಿಯ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶ 2.57 ರಿಂದ ಗುಣಿಸಿ ಲೆಕ್ಕಹಾಕಲಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ