ಇನ್ನು ಎರಡೇ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಿಗುವುದು ಸಿಹಿ ಸುದ್ದಿ ! ವೇತನದಲ್ಲಿ ಆಗುವುದು ಏರಿಕೆ
7th pay commission : ಪ್ರಸ್ತುತ ಸರಕಾರಿ ನೌಕರರಿಗೆ ಶೇ.42ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ. ಜನವರಿ 2023 ರಿಂದ ಶೇ.42ರಷ್ಟು ಡಿಎ ಏರಿಕೆಯಾಗಿದೆ. ಏಪ್ರಿಲ್ ತಿಂಗಳ ವೇತನದಲ್ಲಿ ಹೆಚ್ಚಿದ ಡಿಎ ಮತ್ತು ಬಾಕಿಯನ್ನು ನೌಕರರ ಖಾತೆಗೆ ಜಮಾ ಮಾಡಲಾಗುವುದು.
ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಮಾರ್ಚ್‌ನಲ್ಲಿ ಘೋಷಿಸಿತ್ತು. ಜನವರಿಯಿಂದ ಈ ಹೆಚ್ಚಳ ಅನ್ವಯವಾಗಲಿದೆ. ಆರು ತಿಂಗಳ ನಂತರ ಮುಂದಿನ ತುಟ್ಟಿಭತ್ಯೆ ಏರಿಕೆಯನ್ನು ಪ್ರಕಟಿಸಲಾಗುವುದು. ಪ್ರತಿ ಆರು ತಿಂಗಳಿಗೊಮ್ಮೆ ಸರಕಾರ ತುಟ್ಟಿ ಭತ್ಯೆಯನ್ನು ಹೆಚ್ಚಿಸುತ್ತದೆ. AICPI ಸೂಚ್ಯಂಕವನ್ನು ಆಧರಿಸಿ, ತುಟ್ಟಿಭತ್ಯೆಯನ್ನು ಪ್ರಕಟಿಸಲಾಗುತ್ತದೆ.
ಪ್ರಸ್ತುತ ನೌಕರರಿಗೆ ಸಿಗುವುದು 42 ಶೇ ತುಟ್ಟಿಭತ್ಯೆ :
7 ನೇ ವೇತನ ಆಯೋಗದ ಪ್ರಕಾರ, ಜುಲೈ 1, 2023 ರಿಂದ, ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುವುದು. ಆದರೆ ಈ ಹೆಚ್ಚಳವನ್ನು ಸೆಪ್ಟೆಂಬರ್ ನಲ್ಲಿ ಘೋಷಿಸಲಾಗುವುದು. ಪ್ರಸ್ತುತ ಸರಕಾರಿ ನೌಕರರಿಗೆ ಶೇ.42ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ. ಜನವರಿ 2023 ರಿಂದ ಶೇ.42ರಷ್ಟು ಡಿಎ ಏರಿಕೆಯಾಗಿದೆ. ಏಪ್ರಿಲ್ ತಿಂಗಳ ವೇತನದಲ್ಲಿ ಹೆಚ್ಚಿದ ಡಿಎ ಮತ್ತು ಬಾಕಿಯನ್ನು ನೌಕರರ ಖಾತೆಗೆ ಜಮಾ ಮಾಡಲಾಗುವುದು.
ಇದನ್ನೂ ಓದಿ : Gold Price Today: ಸತತ ಇಳಿಕೆಯ ಬಳಿಕ ಏರಿಕೆ ಕಂಡ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಹೇಗಿದೆ ತಿಳಿಯಿರಿ
ಏಪ್ರಿಲ್ 28 ರ ಸಂಜೆ ಹೊರ ಬೀಳುವುದು ನಿರ್ಧಾರ :
ಜುಲೈನಿಂದ, ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ 2023 ರ ಜನವರಿಯಿಂದ ಜೂನ್ ವರೆಗೆ ಹೆಚ್ಚಳವಾಗುವ ಡಿಎಯನ್ನು ಉದ್ಯೋಗಿಗಳಿಗೆ ಪಾವತಿಸಲಾಗುತ್ತದೆ. ಎಐಸಿಪಿಐ ಸೂಚ್ಯಂಕದ ಹೊಸ ದರ ಏಪ್ರಿಲ್ 28 ರ ಸಂಜೆ ಹೊರ ಬೀಳಲಿದೆ. ಇದರಿಂದ ಈ ಬಾರಿ ಡಿಎ ಪ್ರಮಾಣ ಎಷ್ಟರ ಮಟ್ಟಿಗೆ ಏರಿಕೆಯಾಗಲಿದೆ ಎಂಬುದು ಸ್ಪಷ್ಟವಾಗಲಿದೆ. ಪ್ರಸ್ತುತ, ಸೂಚ್ಯಂಕ ಆಧಾರದ ಮೇಲೆ ಈ ದರ ಶೇಕಡಾ 43.79 ತಲುಪಿದೆ. ಅಂದರೆ ಫೆಬ್ರುವರಿವರೆಗೆ ಶೇ.44ರಷ್ಟು ದರ ನಿಗದಿ ಮಾಡಲಾಗಿದೆ. ಇದೀಗ ಮಾರ್ಚ್ ಸಂಖ್ಯೆ ಏಪ್ರಿಲ್ 28 ರ ಸಂಜೆ ಹೊರ ಬೀಳಲಿದೆ. ಇದಾದ ಬಳಿಕ ದರ ಏರಿಕೆ ಕುರಿತು ಸ್ಪಷ್ಟ ನಿರ್ಧಾರ ತಿಳಿಯುತ್ತದೆ.
ಕಳೆದ ತಿಂಗಳು ಎಐಸಿಪಿಐ ಸೂಚ್ಯಂಕ ದರದಲ್ಲಿ ಕುಸಿತ ಕಂಡಿತ್ತು. ಆದರೆ ಏಪ್ರಿಲ್ 28 ರಂದು ಹೊರ ಬೀಳುವ ಮಾರ್ಚ್ ಡೇಟಾದಲ್ಲಿ ಸುಧಾರಣೆ ನಿರೀಕ್ಷಿಸಲಾಗಿದೆ. ಇದಾದ ಮೇಲೆ ಏಪ್ರಿಲ್, ಮೇ ಮತ್ತು ಜೂನ್ ದರಗಳು ಡಿಎ/ಡಿಆರ್ ಅನ್ನು ನಿರ್ಧರಿಸುತ್ತದೆ. ಈ ಬಾರಿಯೂ ಡಿಎಯಲ್ಲಿ ಶೇ.4ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಒಂದು ವೇಳೆ ಈ ಬಾರಿ ಡಿಎ ಶೇ ನಾಲ್ಕರಷ್ಟು ಏರಿಕೆಯಾದರೆ ಈ ದರ ಶೇ.46ರಷ್ಟಾಗಲಿದೆ.
ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ..!
ಫಿಟ್ಮೆಂಟ್ ಅಂಶವನ್ನು ಹೆಚ್ಚಿಸುವ ಸಾಧ್ಯತೆ :
ಈ ನಡುವೆ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಮೋದಿ ಸರ್ಕಾರ ನಿರ್ಧರಿಸಬಹುದು ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಇದರೊಂದಿಗೆ ಸರ್ಕಾರವು ವೇತನವನ್ನು ಹೆಚ್ಚಿಸಲು ಹೊಸ ಸೂತ್ರಗಳನ್ನು ಸಹ ಸಿದ್ಧಪಡಿಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.