7th Pay Commission - ಹಣದುಬ್ಬರದ ಮಧ್ಯೆ ಕೇಂದ್ರ ಸರ್ಕಾರ ಕೇಂದ್ರ ನೌಕರರಿಗೆ (Central Government Employees) ಮತ್ತೊಂದು ದೊಡ್ಡ ಪರಿಹಾರ ಸಿಕ್ಕಂತಾಗಿದೆ. ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತುಟ್ಟಿಭತ್ಯೆಯನ್ನು ಭತ್ಯೆಯನ್ನು ಶೇಕಡಾ 11 ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ಇದೀಗ ಕೇಂದ್ರ ನೌಕರರು ಶೇ.17 ರ ಬದಲು ಶೇ. 28 ದರದಲ್ಲಿ ಮೂಲ ವೇತನದಲ್ಲಿ ತುಟ್ಟಿಭತ್ಯೆ  ಪಡೆಯಲಿದ್ದಾರೆ. ಇದರ ಜೊತೆಗೆ, ನೌಕರರ ಮನೆ ಬಾಡಿಗೆ ಭತ್ಯೆ (HRA) ಕೂಡ ಹೆಚ್ಚಾಗಿದೆ. ನೌಕರರ HRAನಲ್ಲಿ ಎಷ್ಟು ಹೆಚ್ಚಳ ಮಾಡಲಾಗಿದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-RBI Master Stroke: ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ಗೆ ಹೊಸ ಗ್ರಾಹಕರ ನಿಷೇಧ..!


ಎಷ್ಟು ಹೆಚ್ಚಳ?
7 ನೇ ವೇತನ ಆಯೋಗದ (7th Pay Commission) ನಿಯಮಗಳ ಪ್ರಕಾರ, ತುಟ್ಟಿ ಭತ್ಯೆ ಶೇಕಡಾ 25 ಕ್ಕಿಂತ ಹೆಚ್ಚಾಗಿದ್ದರೆ, ನಂತರ ಮನೆ ಬಾಡಿಗೆ ಭತ್ಯೆ (HRA) ಕೂಡ ಹೆಚ್ಚಾಗುತ್ತದೆ. ಎಚ್‌ಆರ್‌ಎಯನ್ನು X ವರ್ಗದ ನಗರಗಳು / ಪಟ್ಟಣಗಳಿಗೆ ಶೇ 3, Y ವರ್ಗಕ್ಕೆ ಶೇ 2 ಮತ್ತು Z ವರ್ಗಕ್ಕೆ ಶೇ 1 ರಷ್ಟು ಹೆಚ್ಚಿಸಬೇಕು ಎಂದು ನಿಯಮ ಹೇಳುತ್ತದೆ. ಇದೀಗ ನೌಕರರ ತುಟ್ಟಿ ಭತ್ಯೆ ಶೇ.28ಕ್ಕೆ ತಲುಪಿದೆ. ಅಂದರೆ ಈ ವರ್ಗದ ನಗರಗಳು / ಪಟ್ಟಣಗಳಲ್ಲಿ ವಾಸಿಸುವ ನೌಕರರಿಗೆ ಕ್ರಮವಾಗಿ ಶೇ.27, ಶೇ.18 ಮತ್ತು ಶೇ.9 ರಷ್ಟು HRA ಸಿಗಲಿದೆ. ಇದುವರೆಗೆ ಈ ನೌಕರರಿಗೆ HRA ಕ್ರಮವಾಗಿ ಶೇ.24, ಶೇ.16 ಮತ್ತು ಶೇ.8 ರಷ್ಟು ಸಿಗುತ್ತಿತ್ತು.


[[{"fid":"211776","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಕೇಂದ್ರ ಸರ್ಕಾರ (Central Government) ತನ್ನ ನೌಕರರಿಗೆ ಹೌಸ್ ರೆಂಟ್ ಅಲೌನ್ಸ್ ನೀಡುತ್ತದೆ. ಒಂದು ವೇಳೆ ಸರ್ಕಾರಿ ನೌಕರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ಆದಾಯ ತೆರಿಗೆಯಲ್ಲಿಯೂ ಕೂಡ ವಿನಾಯ್ತಿ ನೀಡುತ್ತದೆ. ITR ಸಲ್ಲಿಕೆಯ ವೇಳೆ HRA ಲೆಕ್ಕಾಚಾರ ಕೂಡ ಸಲ್ಲಿಸಬೇಕು.


ಇದನ್ನೂ ಓದಿ-EPFO : ಮನೆಯಲ್ಲಿ ಕುಳಿತು ನಿಮ್ಮ PF ಖಾತೆಯ ಬ್ಯಾಂಕ್ ಅಕೌಂಟ್ ನವೀಕರಿಸಬಹುದು ; ಹೇಗೆ ಇಲ್ಲಿ ನೋಡಿ


ಕೇಂದ್ರ ಸರ್ಕಾರವು  ಕೇಂದ್ರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (ಡಿಎ) ಮತ್ತು ಪರಿಹಾರ ಭತ್ಯೆ (ಡಿಆರ್) ಅನ್ನು ಶೇಕಡಾ 11 ರಷ್ಟು ಹೆಚ್ಚಿಸಿದೆ. ಇದರಿಂದ ಸರ್ಕಾರಿ ನೌಕರರ  ಡಿಎ ಅಥವಾ ಡಿಆರ್ ಶೇ.28ಕ್ಕೆ ಏರಿಕೆಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸುಮಾರು 1.14 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ.


ಇದನ್ನೂ ಓದಿ-ITR Benefits : ನಿಮ್ಮ ಆದಾಯಕ್ಕೆ ತೆರಿಗೆ ವಿಧಿಸದಿದ್ದರೂ ITR ಸಲ್ಲಿಸಿದರೆ ನಿಮಗೆ ಸಿಗಲಿದೆ 5 ಪ್ರಯೋಜನಗಳು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ