7th Pay Commission Latest News Today : ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರು ಫಿಟ್‌ಮೆಂಟ್ ಅಂಶ ಹೆಚ್ಚಳ ಮತ್ತು 18 ತಿಂಗಳ ಡಿಎ ಬಾಕಿಯ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಹಲವಾರು ಸರ್ಕಾರಿ ನೌಕರರು ಮುಂದಿನ ತುಟ್ಟಿಭತ್ಯೆ ಹೆಚ್ಚಳವನ್ನು ಯಾವಾಗ? ಎಂಬ ಯೋಚನೆಯಲ್ಲಿದ್ದಾರೆ. ಡಿಎ ಹೆಚ್ಚಳವಾದರೆ ಸಂಬಳ ಎಷ್ಟು ಹೆಚ್ಚಳವಾಗುತ್ತದೆ ಎಂದು ಯೋವಾಹಿಸುತ್ತಿದ್ದರೆ ನಿಮಗಾಗಿ ನಾವು ಈ ಮಾಹಿತಿಯನ್ನು ತಂದಿದ್ದೇವೆ. ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಶೇ. 4 ರಷ್ಟು ಹೆಚ್ಚಿಸಿದೆ, ಹೀಗಾಗಿ ಡಿಎಯನ್ನು ಶೇ. 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮೊದಲು, ಮಾರ್ಚ್ 2022 ರಲ್ಲಿ ಡಿಎಯನ್ನು ಶೇ. 3 ರಷ್ಟು ಹೆಚ್ಚಿಸಲಾಗಿತ್ತು.


ಇದನ್ನೂ ಓದಿ : ಈ ವರ್ಷ ನೀವು ಮದುವೆಯಾಗಿದ್ದರೆ, ಪಡಿತರ ಚೀಟಿಯಲ್ಲಿ ಈ ತಪ್ಪದೆ ಬದಲಾವಣೆ ಮಾಡಿ


ಕೇಂದ್ರದ ಈ ಪ್ರವೃತ್ತಿಯನ್ನು ಗಮನಿಸಿದರೆ, ಕೇಂದ್ರ ಸರ್ಕಾರಿ ನೌಕರರು ತಮ್ಮ ಮುಂದಿನ ಡಿಎ ಹೆಚ್ಚಳವನ್ನು ಮಾರ್ಚ್ 2023 ರಲ್ಲಿ ಪಡೆಯುವ ಸಾಧ್ಯತೆಯಿದೆ ಎಂದು ಹೇಳಬಹುದು.


ಡಿಎ 3 ರಿಂದ 5% ರಷ್ಟು ಏರಿಕೆಯಾಗಬಹುದು


ಈ ಮಧ್ಯೆ, ಹಣದುಬ್ಬರ ದರವನ್ನು ಪರಿಗಣಿಸಿ ಮತ್ತು 7 ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸಿ ಕೇಂದ್ರವು ಡಿಎಯನ್ನು ಶೇ. 3 ರಿಂದ 5 ರಷ್ಟು ಹೆಚ್ಚಿಸಬಹುದು ಎಂದು ಹಲವಾರು ಮಾಧ್ಯಮ ವರದಿಗಳು ಸೂಚಿಸಿವೆ.


ಡಿಎ ಹೆಚ್ಚಳವು ಶೇ. 50 ರ ಸಮೀಪಕ್ಕೆ ತಲುಪಿದರೆ, ಅದನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಇತರ ಕೆಲವು ವರದಿಗಳು ಸೂಚಿಸಿವೆ. 2016ರಲ್ಲಿ ಕೇಂದ್ರ ಸರ್ಕಾರ 7ನೇ ವೇತನ ಆಯೋಗವನ್ನು ಜಾರಿಗೆ ತಂದಾಗ ಡಿಎಯನ್ನು ಶೂನ್ಯಕ್ಕೆ ಇಳಿಸಲಾಗಿತ್ತು. ಆದ್ದರಿಂದ, ಕೇಂದ್ರ ಸರ್ಕಾರಿ ಉದ್ಯೋಗಿಯ ಮೂಲ ವೇತನವು 18000 ರೂ ಆಗಿದ್ದರೆ, ಉದ್ಯೋಗಿಯು ರೂ 9000 ನ 50 ಪ್ರತಿಶತ ಡಿಎ ಪಡೆಯುತ್ತಾನೆ.


8ನೇ ವೇತನ ಆಯೋಗ ಶೀಘ್ರದಲ್ಲೇ?


ಪ್ರಸ್ತುತ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪಡೆಯುತ್ತಿರುವ ಸರಕಾರಿ ನೌಕರರು ಕೂಡ ಹೊಸ ವೇತನ ಆಯೋಗವನ್ನು ಪಡೆಯಲಿದ್ದಾರೆ ಎನ್ನಲಾಗಿದ್ದು, ನೌಕರರ ವೇತನ ಹೆಚ್ಚಳ ಅಥವಾ 8ನೇ ಸಿಪಿಸಿ ಜಾರಿಗೆ ತರುವಂತೆ ಒತ್ತಾಯಿಸಿ ನೌಕರರ ಸಂಘ ಮನವಿ ಪತ್ರ ಸಿದ್ಧಪಡಿಸುತ್ತಿದೆ. ಆದರೆ, 8ನೇ ವೇತನ ಆಯೋಗದ ಅನುಷ್ಠಾನದ ಕುರಿತು ಸರ್ಕಾರದಿಂದ ಯಾವುದೇ ದೃಢೀಕರಣ ಅಥವಾ ಯಾವುದೇ ಪ್ರಕಟಣೆ ಇಲ್ಲ.


18-ತಿಂಗಳ ಬಾಕಿ ಉಳಿದಿರುವ ಡಿಎ ಬಾಕಿ ಶೀಘ್ರದಲ್ಲೇ


ಈ ನಡುವೆ ಸರ್ಕಾರಿ ನೌಕರರಿಗೆ 18 ತಿಂಗಳ ಬಾಕಿ ಇರುವ ಡಿಎ ಬಾಕಿಯನ್ನು ಶೀಘ್ರವೇ ನೀಡಲಾಗುವುದು ಎಂದು ವರದಿಯಾಗಿದೆ.


ಇದನ್ನೂ ಓದಿ : Post office ಈ ಯೋಜನೆಯಲ್ಲಿ ₹50 ಹೂಡಿಕೆ ಮಾಡಿದ್ರೆ ಸಿಗಲಿದೆ ₹35 ಲಕ್ಷ ಲಾಭ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.