7th Pay Commission: 7ನೇ ವೇತನ ಆಯೋಗದ ಪರಿಷ್ಕರಣೆಯಿಂದಾಗಿ 2024ರಂತೆ 2025ನೇ ವರ್ಷವೂ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಹಲವು ಖುಷಿ ಸಮಾಚಾರಗಳನ್ನು ಒಳಗೊಂಡಿರುತ್ತದೆ. 2025ರ ಜನವರಿಯಿಂದ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ. ಆದರೆ ಎಷ್ಟು ಹೆಚ್ಚಾಗುತ್ತದೆ ಎಂಬುದು AICPIಯ ಅರ್ಧವಾರ್ಷಿಕ ಡೇಟಾವನ್ನು ಅವಲಂಬಿಸಿರುತ್ತದೆ. 


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಅರ್ಧವಾರ್ಷಿಕ ಡೇಟಾವನ್ನು ಆಧರಿಸಿ ಪ್ರತಿ ವರ್ಷ 2 ಬಾರಿ (ಜನವರಿ ಮತ್ತು ಜುಲೈ) ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ದರಗಳನ್ನು ಪರಿಷ್ಕರಿಸುತ್ತದೆ. 2024ರ ಜನವರಿಯಲ್ಲಿ ಶೇಕಡಾ 4ರಷ್ಟು ಮತ್ತು ಜುಲೈನಲ್ಲಿ ಶೇಕಡಾ 3ರಷ್ಟು ಹೆಚ್ಚಿಸಲಾಗಿತ್ತು. ಇದರ ನೇರ ಲಾಭವನ್ನು 2025ರ ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ. 


ಇದನ್ನೂ ಓದಿ- ಹೊಸ ವರ್ಷದ ಮೊದಲ ದಿನವೇ ಗುಡ್ ನ್ಯೂಸ್, ಎಲ್‌ಪಿ‌ಜಿ ಬೆಲೆಯಲ್ಲಿ ಭಾರೀ ಇಳಿಕೆ


48 ಲಕ್ಷ ಕೇಂದ್ರ ಸರ್ಕಾರದ ನೌಕರರು ಹಾಗು 68 ಲಕ್ಷ ಪಿಂಚಣಿದಾರವು ಶೇಕಡಾ 53ರಷ್ಟು ಡಿಎ ಪ್ರಯೋಜನ ಪಡೆಯುತ್ತಿದ್ದಾರೆ. 2025ರ ಜನವರಿಯಲ್ಲಿ ಮತ್ತೆ ಪರಿಷ್ಕರಣೆಯಾಗಲಿದ್ದು ಅದು 2024ರ ಡಿಸೆಂಬರ್ ವರೆಗಿನ AICPI ಸೂಚ್ಯಂಕ ಡೇಟಾವನ್ನು ಅವಲಂಬಿಸಿರುತ್ತದೆ. ಕಳೆದ ಜುಲೈನಿಂದ ಅಕ್ಟೋಬರ್ ವರೆಗಿನ ಡೇಟಾಗಳನ್ನು ನೋಡಿದರೆ AICPI ಸೂಚ್ಯಂಕ 144.5 ತಲುಪಿದೆ. ಡಿಎ ಸ್ಕೋರ್ ಶೇಕಡಾ 55.05ರಷ್ಟಾಗಿದೆ. ನವೆಂಬರ್ ಹಾಗು ಡಿಸೆಂಬರ್ ಅಂಕಿಅಂಶಗಳನ್ನು 2025ರ ಜನವರಿ 30ರಂದು ರಿಲೀಸ್ ಮಾಡಲಾಗುತ್ತದೆ.


ಇದನ್ನೂ ಓದಿ- Income Tax Rules: ಆದಾಯ ತೆರಿಗೆಗೆ ಸಂಬಂಧಿಸಿದಂತೆ 5  ಪ್ರಮುಖ ಬದಲಾವಣೆ, ತೆರಿಗೆದಾರರಿಗೆ ಗುಡ್ ನ್ಯೂಸ್..! 


2025ರ ಹೊಸ ವರ್ಷದಲ್ಲಿ  ಡಿಎ ಶೇಕಡಾ 3 ರಿಂದ 4 ರಷ್ಟು ಏರಿಕೆ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಬಜೆಟ್ ಮಂಡನೆ ವೇಳೆ ಇದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಕೈಗಾರಿಕಾ ಕಾರ್ಮಿಕರಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (CPI-IW) 12 ತಿಂಗಳ ಸರಾಸರಿಯಲ್ಲಿ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ DA ಮತ್ತು DR ಹೆಚ್ಚಳದ ಲೆಕ್ಕಹಾಕಲಾಗುತ್ತದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.