7th Pay Commission: ಸರ್ಕಾರಿ ನೌಕರರ ಮೇಲೆ ಹಣದ ಸುರಿಮಳೆ, ತುಟ್ಟಿಭತ್ಯೆ ಶೇ.45ಕ್ಕೆ ಏರಿಕೆ!
DA Hike Update: ಜನವರಿ 2023 ರ AICPI ಸೂಚ್ಯಕದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಸೂಚ್ಯಂಕದಲ್ಲಿ 0.5 ಅಂಕಗಳ ವೇಗ ಕಾಣಿಸಿಕೊಂಡಿದೆ. ಅಂದರೆ ತುಟ್ಟಿಭತ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದರ್ಥ.
DA Hike Latest News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಈ ವರ್ಷ ಅತ್ಯಂತ ಸಂತಸದಿಂದ ಕೂಡಿರಲಿದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರರ ತುಟ್ಟಿಭತ್ಯೆಯನ್ನು ಜನವರಿ 2023 ರಲ್ಲಿ ಘೋಷಿಸಲಾಗಿದೆ. ಆದರೆ ಈ ನಡುವೆ ಮತ್ತೊಂದು ಭಾರಿ ಸಂತಸ ಕೊಡುವ ಸುದ್ದಿ ಹೊರಬಿದ್ದಿದೆ. ಜನವರಿ 2023 ರ AICPI ಸೂಚ್ಯಂಕ ಅಂಕಿ-ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಸೂಚ್ಯಂಕವು 0.5 ಅಂಕಗಳ ವೇಗ ಪಡೆದುಕೊಂಡಿದೆ. ಅಂದರೆ ತುಟ್ಟಿಭತ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದರ್ಥ. ಇದುವರೆಗೆ ಸರ್ಕಾರಿ ನೌಕರರ ಶೇ.42ರಷ್ಟು ತುಟ್ಟಿಭತ್ಯೆಗೆ ಅನುಮೋದನೆಯನ್ನು ನೀಡಲಾಗಿದೆ. ಅದರಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
CPI-IW ಅಂಕಿ-ಸಂಖ್ಯೆಗಳು ಏನು ಹೇಳುತ್ತವೆ?
ಜನವರಿ 2023 ರ CPI-IW ಸೂಚ್ಯಂಕದ ಅಂಕಿ-ಸಂಖ್ಯೆಗಳು ಪ್ರಕಟಗೊಂಡಿವೆ. ಅದರಲ್ಲಿ 0.5 ಅಂಕಗಳ ಹೆಚ್ಚಳ ಗಮನಿಸಲಾಗಿದೆ ಮತ್ತು ಸೂಚ್ಯಂಕ 132.8ಕ್ಕೆ ತಲುಪಿದೆ. ಈ ಹೆಚ್ಚಳದೊಂದಿಗೆ, ಜುಲೈ 2023 ರಲ್ಲಿ ಮತ್ತೆ ತುಟ್ಟಿ ಭತ್ಯೆ ಹೆಚ್ಚಳ ಸ್ಪಷ್ಟವಾಗಿದೆ. ಈ ಅಂಕಿ ಸಂಖ್ಯೆಗಳ ಹೆಚ್ಚಳದಿಂದ ಜುಲೈನಲ್ಲಿ ಡಿಎ/ಡಿಆರ್ ಹೆಚ್ಚಳಕ್ಕೆ ದಾರಿ ಸುಗಮವಾದಂತಾಗಿದೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಈ ಹೆಚ್ಚಳದಿಂದ ಈ ಅಂಕಿ ಶೇ.1ರಷ್ಟು ಏರಿಕೆಯಾಗಿದೆ. ಅಂದರೆ ಜನವರಿ 2023 ರಲ್ಲಿ ತುಟ್ಟಿ ಭತ್ಯೆ 42.37% ಆಗಿತ್ತು. ಇದರ ಆಧಾರದ ಮೇಲೆ ಅವರ ತುಟ್ಟಿಭತ್ಯೆಯನ್ನು ಶೇ.42ಕ್ಕೆ ಹೆಚ್ಚಿಸಲಾಗಿದೆ. ಈಗ ಜುಲೈಗೆ ಬರುವ ಸಂಖ್ಯೆಗಳು 1% ರಷ್ಟು ಹೆಚ್ಚಾಗಿದೆ. ಅಂದರೆ ಈಗ ಅದು ಶೇ.43.08ಕ್ಕೆ ತಲುಪಿದೆ. ಆದಾಗ್ಯೂ, ಮುಂದಿನ 5 ತಿಂಗಳ ಸಿಪಿಐ-ಐಡಬ್ಲ್ಯೂ ಸೂಚ್ಯಂಕದ ಸಂಖ್ಯೆಯು ಉದ್ಯೋಗಿಗಳು ಮತ್ತು ಪಿಂಚಣಿದಾರರ ಡಿಎ/ಡಿಆರ್ ನಿಜವಾಗಿ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ನಿರ್ಧರಿಸಲಿವೆ.
Gold Rate Today: ಚಿನ್ನಾಭರಣ ಖರೀದಿ ನಿಯಮದಲ್ಲಿ ಬದಲಾವಣೆ ತಂದ ಮೋದಿ ಸರ್ಕಾರ, ತಿಳಿದು ಸಂಭಾವ್ಯ ಹಾನಿಯಿಂದ ತಪ್ಪಿಸಿಕೊಳ್ಳಿ!
ಜನವರಿಯಿಂದ DA/DR 42% ರಷ್ಟಿದೆ
ಜನವರಿ 2023 ರಿಂದ, ಕೇಂದ್ರ ನೌಕರರು ಮತ್ತು ಪಿಂಚಣಿದಾರರು 42% ದರದಲ್ಲಿ ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಪಡೆಯುತ್ತಿದ್ದಾರೆ. ಇದನ್ನು ಡಿಸೆಂಬರ್ 2022 ರವರೆಗಿನ ಡೇಟಾದ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಆದರೆ, ಕೇಂದ್ರ ಸರ್ಕಾರ ಇನ್ನೂ ಅಧಿಕೃತವಾಗಿ ಅದನ್ನು ಘೋಷಣೆ ಮಾಡಿಲ್ಲ. ಆದರೆ, ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆ ನೀಡಲಾಗಿದೆ. ಆದರೆ, ಮಂಜೂರಾತಿ ಕುರಿತು ಸರ್ಕಾರದಿಂದ ಯಾವುದೇ ಘೋಷಣೆಯಾಗಿಲ್ಲ. ಮೂಲಗಳನ್ನು ನಂಬುವುದಾದರೆ, ಹೋಳಿ ಮೊದಲು ಕ್ಯಾಬಿನೆಟ್ ಅದನ್ನು ಘೋಷಿಸಬೇಕು. ಇದಾದ ಬಳಿಕವಷ್ಟೇ ಅಧಿಸೂಚನೆ ಹೊರಡಿಸಲಾಗುವುದು.
ಇದನ್ನೂ ಓದಿ-PPF ನಲ್ಲಿ ಹಣ ಹೂಡಿಕೆ ಮಾಡುವವರಿಗೊಂದು ಸಂತಸದ ಸುದ್ದಿ, ಸರ್ಕಾರ ನೀಡುತ್ತಿದೆ 42 ಲಕ್ಷ ರೂ.!
ಮುಂದಿನ ತುಟ್ಟಿಭತ್ಯೆ ಎಷ್ಟು?
ಜುಲೈ 2023 ಕ್ಕೆ ಸ್ವೀಕರಿಸಬೇಕಾದ ತುಟ್ಟಿಭತ್ಯೆಯ ಅಂದಾಜು ಪ್ರಾರಂಭವಾಗಿದೆ. ಸೂಚ್ಯಂಕದ ಸಂಖ್ಯೆಗಳ ಪ್ರಕಾರ, ಇದು 1% ಗಳಿಸಿದೆ. ಅಂದರೆ 43% ಆಯಿತು. ಈ ಚಾರ್ಟ್ ಪ್ರಕಾರ ನಾವು ನೋಡಿದರೆ, ಒಟ್ಟು ತುಟ್ಟಿ ಭತ್ಯೆ 45% ತಲುಪಬಹುದು. 7 ನೇ ವೇತನ ಆಯೋಗದ ಪ್ರಕಾರ ಅದರ ಚಾರ್ಟ್ ಅನ್ನು ಕೆಳಗೆ ನೀಡಲಾಗಿದೆ.
Expected DA/DR from Jul, 2023 on issue of All-India CPI-IW for Jan, 2023 |
|||||||||
Increase/ Decrease Index | Month | Base Year 2016 = 100 | Base Year 2001 = 100 | Total of 12 Months | Twelve monthly Average | % increase over 115.76 for 6CPC DA | % increase over 261.42 for 7CPC DA | 6CPC DA announced or will be announced | 7CPC DA announced or will be announced |
0.7 | Jul,22 | 129.9 | 374 | 4361 | 363.42 | 213.94% | 39.02% | 212% | 38% |
0.3 | Aug,22 | 130.2 | 375 | 4382 | 365.17 | 215.45% | 39.69% | ||
1.1 | Sep,22 | 131.3 | 378 | 4405 | 367.08 | 217.11% | 40.42% | ||
1.2 | Oct,22 | 132.5 | 382 | 4427 | 368.92 | 218.69% | 41.12% | ||
0 | Nov,22 | 132.5 | 382 | 4447 | 370.58 | 220.13% | 41.76% | ||
-0.2 | Dec,22 | 132.3 | 381 | 4467 | 372.25 | 221.57% | 42.40% | ||
DA/DR from Jan, 2023 |
221% | 42% | |||||||
0.5 | Jan,23 | 132.8 | 382 | 4489 | 374.08 | 223.15% | 43.10% | ||
0 | Feb,23 | 132.8 | 382 | 4511 | 375.92 | 224.74% | 43.80% | ||
0 | Mar,23 | 132.8 | 382 | 4530 | 377.50 | 226.11% | 44.40% | ||
0 | Apr,23 | 132.8 | 382 | 4544 | 378.67 | 227.11% | 44.85% | ||
0 | May,23 | 132.8 | 382 | 4554 | 379.50 | 227.83% | 45.17% | ||
0 | Jun,23 | 132.8 | 382 | 4564 | 380.33 | 228.55% | 45.49% | ||
Expected DA/DR from Jul, 2023 |
228% | 45% |
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.