ನವದಹಲಿ  : ನಿವೃತ್ತಿ (Retirement)  ಬಳಿಕ ಪಿಂಚಣಿ (Pension) ಅನ್ನೊದು ಜೀವನಕ್ಕೆ ಬಲು ಮುಖ್ಯ ಆಧಾರ. ಪಿಂಚಣಿ ಕೂಡಾ ಸಿಗದೇ ಹೋದಾಗ ನೌಕರರ ಕುಟಂಬ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.  ನಿವೃತ್ತ ನೌಕರರ ಕಷ್ಟ ನಷ್ಟಗಳು ಮೋದಿ ಸರ್ಕಾರದ ಗಮನಕ್ಕೂ ಬಂದಿದೆ. ಮೋದಿ ಸರ್ಕಾರ ಪಿಂಚಣಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರಿಂದ ಜನರಿಗೆ ಸಾಕಷ್ಟು ಪ್ರಯೋಜನವಾಗಲಿವೆ.


COMMERCIAL BREAK
SCROLL TO CONTINUE READING

ದಿವ್ಯಾಂಗರಿಗೆ ದೊಡ್ಡ ರಿಲೀಫ್ :
ಸರ್ಕಾರಿ ನೌಕರ ನಿಧನರಾದಾಗ, ಅವರ ಕುಟುಂಬದಲ್ಲಿ ದಿವ್ಯಾಂಗರಿದ್ದರೆ (Specially Abled), ಅವರಿಗೆ ಜೀವನೋಪಾಯಕ್ಕೆ ಬೇರೆ ಮಾರ್ಗ ಇಲ್ಲದೇ ಇದ್ದರೆ, ಅಂಥ ದಿವ್ಯಾಂಗರಿಗೆ ಜೀವನಪೂರ್ತಿ ಪಿಂಚಣಿ ಸಿಗಲಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಈ ಮಾಹಿತಿ ನೀಡಿದ್ದಾರೆ. ಇದರಿಂದ ಸಾವಿರಾರು ಮಂದಿ ದಿವ್ಯಾಂಗರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಈ ಹಿಂದೆಯೂ ಮಂಥನ ನಡೆದಿತ್ತು. ಆದರೆ, ಯಾವುದೇ ನಿರ್ಧಾರವಾಗಿರಲಿಲ್ಲ. 


ಇದನ್ನೂ ಓದಿ : 7th Pay Commission: ಏಪ್ರಿಲ್ 2021 ರಿಂದ ಬದಲಾಗಬಹುದು ನಿಮ್ಮ PF, Gratuity ಕೊಡುಗೆ


ಹೊಸ ನಿಯಮ ಏನು ಹೇಳುತ್ತದೆ..? :
ಕೇಂದ್ರ ನಾಗರಿಕ ಸೇವೆ ಪಿಂಚಣಿ ನಿಯಮ 1972 (54/6)ರ ಪ್ರಕಾರ ಓರ್ವ ಕೇಂದ್ರ ನೌಕರನ (Central Government Employee) ಪರಿವಾರದ ಒಟ್ಟು ಆದಾಯ, ಆ ನೌಕರ ಪಡೆದ ಕೊನೆಯ ವೇತನದ ಶೇ. 30 ಕ್ಕಿಂತ ಕಡಿಮೆ ಇದ್ದರೆ, ಅಂಥ ನೌಕರನ ಅವಲಂಬಿತ ಕುಟುಂಬಕ್ಕೆ (Family)  ಪಿಂಚಣಿ ಪಡೆಯುವ ಹಕ್ಕು ಇರುತ್ತದೆ. ಜೊತೆಗೆ ಕುಟುಂಬದಲ್ಲಿ ದಿವ್ಯಾಂಗರಿದ್ದರೆ ಅವರಿಗೆ ಜೀವನಪೂರ್ತಿ ಪಿಂಚಣಿ ಸಿಗಲಿದೆ. ಈ ಹೊಸ ನಿಯಮ ಸದ್ಯದಲ್ಲೇ ಅನುಷ್ಠಾನಕ್ಕೆ ಬರಲಿದೆ. 


ಮೊದಲಿದ್ದ ನಿಯಮ ಏನು..? :
ಕೇಂದ್ರ ನೌಕರನ ನಿಧನದ ಬಳಿಕ ಮೃತರ ಪತ್ನಿಗೆ ಪಿಂಚಣಿ (Pension) ಸಿಗುತ್ತಿತ್ತು. ಪತ್ನಿಯ ನಿಧನದ ಬಳಿಕ ಯಾರಿಗೂ ಪಿಂಚಣಿ ಸಿಗುತ್ತಿರಲಿಲ್ಲ. ಈ ನಿಯಮದ ಪ್ರಕಾರ, ಇಂಥ ಸನ್ನಿವೇಶದಲ್ಲಿ   ಮನೆಯಲ್ಲಿರುವ ದಿವ್ಯಾಂಗರಿಗೆ ಜೀವನೋಪಾಯ ದುಸ್ತರವಾಗುತ್ತಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ , ದಿವ್ಯಾಂಗರಿರುವ ಮನೆಯಲ್ಲಿ ಆಶ್ರಿತರಿಗೆ ಜೀವನಪೂರ್ತಿ ಪಿಂಚಣಿ ನೀಡಲು ಮುಂದಾಗಿದೆ.  ಬದಲಾದ ನಿಯಮದ ಪ್ರಕಾರ ಸರ್ಕಾರಿ ನೌಕರನ ಮನೆಯಲ್ಲಿ ದಿವ್ಯಾಂಗರಿದ್ದರೆ, ಅಂಥವರಿಗೆ ಜೀವನಪೂರ್ತಿ ಪಿಂಚಣಿ ಬರಲಿದೆ.


ಇದನ್ನೂ ಓದಿ : 7th Pay commission : ಡಿಎ ಸೇರಿಸಿದರೆ ಸರ್ಕಾರಿ ನೌಕರರಿಗೆ ಸಂಬಳ ಎಷ್ಟಾಗುತ್ತೆ, ಗೊತ್ತಾ.?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.