ನವದೆಹಲಿ: 7th Pay Commission-ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ (7th Pay Commission Latest News) ಇದೆ. ಸರ್ಕಾರ ಇತ್ತೀಚೆಗೆ ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ, ಅದರ ಅಡಿಯಲ್ಲಿ ಈಗ ನೌಕರನ ಮರಣದ ನಂತರ, ಅವರ ಕುಟುಂಬ ಮತ್ತು ಅವರ ಅವಲಂಬಿತರಿಗೆ ಅನುಕೂಲವಾಗಲಿದೆ. ಇದರ ಅಡಿಯಲ್ಲಿ ಪಿಂಚಣಿ ಹಣದ 50 ಪ್ರತಿಶತವನ್ನು ಅವಲಂಬಿತರಿಗೆ ನೀಡಲಾಗುವುದು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅವಲಂಬಿತರಿಗೆ ಲಾಭ ಸಿಗುತ್ತದೆ:
ಹೊಸ ನಿಯಮದ ಪ್ರಕಾರ, ಸರ್ಕಾರಿ ನೌಕರರ (Central Government Employees) ಅವಲಂಬಿತರಿಗೆ ಪಿಂಚಣಿಗಾಗಿ 7 ವರ್ಷಗಳ ಸೇವೆಯ ಷರತ್ತನ್ನು ರದ್ದುಪಡಿಸಲಾಗಿದೆ. ಈಗ 7 ವರ್ಷಗಳ ಸೇವೆ ಪೂರ್ಣಗೊಳ್ಳುವ ಮೊದಲು ಉದ್ಯೋಗಿ ಮರಣ ಹೊಂದಿದರೆ, ನಂತರ ಪಿಂಚಣಿ ಹಣದ 50 ಪ್ರತಿಶತವನ್ನು ನೌಕರನ ಕುಟುಂಬಕ್ಕೆ ನೀಡಲಾಗುತ್ತದೆ. ಅಂದರೆ, ಈಗ ಸರ್ಕಾರಿ ನೌಕರನ ಮರಣದ ನಂತರ ಪಿಂಚಣಿ ಪಡೆಯಲು ಇದ್ದ ಕೆಲವು ಷರತ್ತುಗಳನ್ನು ರದ್ದುಪಡಿಸಲಾಗಿದೆ. ಈ ಮೊದಲು ಯಾವುದೇ ಸರ್ಕಾರಿ ನೌಕರರು ತಮ್ಮ 7 ವರ್ಷಗಳ ಸೇವೆ ಪೂರ್ಣಗೊಳ್ಳುವ ಮೊದಲು ಮೃತಪಟ್ಟರೆ ಅಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರಿಗೆ ಪಿಂಚಣಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.


ಇದನ್ನೂ ಓದಿ- 7th Pay Commission: ಸರ್ಕಾರಿ ನೌಕರರಿಗೆ ಮನೆ ನಿರ್ಮಾಣಕ್ಕೆ ಸಿಗಲಿದೆ House Building Advance


ಸರ್ಕಾರವು ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ:
ದೀರ್ಘ ಕಾಯುವಿಕೆಯ ನಂತರ ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ (Central Government Employees) ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು  ಶೇಕಡಾ 11 ರಷ್ಟು ಹೆಚ್ಚಿಸಿದೆ. ಇದೀಗ ಕೇಂದ್ರ ನೌಕರರು ಶೇ.17 ರ ಬದಲು ಶೇ. 28 ದರದಲ್ಲಿ ಮೂಲ ವೇತನದಲ್ಲಿ ತುಟ್ಟಿಭತ್ಯೆ  ಪಡೆಯಲಿದ್ದಾರೆ. ಇದರ ಜೊತೆಗೆ, ನೌಕರರ ಮನೆ ಬಾಡಿಗೆ ಭತ್ಯೆ (HRA) ಅನ್ನು ಹೆಚ್ಚಳ ಮಾಡಲಾಗಿದೆ.  ವಾಸ್ತವವಾಗಿ, 7 ನೇ ವೇತನ ಆಯೋಗದ (7th Pay Commission) ನಿಯಮಗಳ ಪ್ರಕಾರ, ತುಟ್ಟಿ ಭತ್ಯೆ ಶೇಕಡಾ 25 ಕ್ಕಿಂತ ಹೆಚ್ಚಾಗಿದ್ದರೆ, ನಂತರ ಹೌಸ್ ರೆಂಟ್ ಅಲೌನ್ಸ್ (HRA) ಕೂಡ ಹೆಚ್ಚಾಗುತ್ತದೆ. 


ಇದನ್ನೂ ಓದಿ- 7th Pay Commission : ಕೇಂದ್ರ ನೌಕರರ DA ಕುರಿತು ಬಿಗ್ ನ್ಯೂಸ್ : ಸೆಪ್ಟೆಂಬರ್‌ನಲ್ಲಿ ಸಿಗಲಿದೆ ಫುಲ್ ವೇತನ! 


ಕರೋನಾ ಬಿಕ್ಕಟ್ಟಿನಿಂದಾಗಿ ಜುಲೈ 2021 ರವರೆಗೆ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಭತ್ಯೆ (DA) ಹೆಚ್ಚಳವನ್ನು ನಿಲ್ಲಿಸಲು ಹಣಕಾಸು ಸಚಿವಾಲಯ 2020 ರ ಏಪ್ರಿಲ್‌ನಲ್ಲಿ ನಿರ್ಧರಿಸಿತು. 30 ಜೂನ್ 2021 ರವರೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಸೌಲಭ್ಯ ದೊರೆತಿಲ್ಲ. ಈಗ ಸರ್ಕಾರದ ಈ ಕ್ರಮದಿಂದ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ