ನವದೆಹಲಿ : ಹೋಳಿಗೂ ಮುನ್ನ ಕೇಂದ್ರ ನೌಕರರಿಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಇದೀಗ ಕೇಂದ್ರ ನೌಕರರ ಮತ್ತೊಂದು ಭತ್ಯೆ ಹೆಚ್ಚಾಗಿದೆ. ಸರ್ಕಾರ ಕೈಗೊಂಡ ಈ ನಿರ್ಧಾರದ ನಂತರ ನೌಕರರ ವೇತನ 1000 ರೂ.ನಿಂದ 8000 ರೂ.ಗೆ ಏರಿಕೆಯಾಗಿದೆ. ನಿಮ್ಮ ಸಂಬಳ ಎಷ್ಟು ಹೆಚ್ಚಾಗುತ್ತದೆ ಎಂದು ಇಲ್ಲಿ ನೋಡಿ..


COMMERCIAL BREAK
SCROLL TO CONTINUE READING

ನೌಕರರ ಭತ್ಯೆ ಹೆಚ್ಚಳ


ಹೋಳಿ ಹಬ್ಬ(Holi Festival 2022)ಕ್ಕೂ ಮುನ್ನ ಕೇಂದ್ರದ ಮೋದಿ ಸರ್ಕಾರ ರಕ್ಷಣಾ ಇಲಾಖೆಯ ಪೌರ ನೌಕರರ ಅಪಾಯ ಭತ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಕೇಂದ್ರ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ನೌಕರರಿಗೆ ಈ ಭತ್ಯೆಯನ್ನು ನೀಡಲಾಗುತ್ತದೆ ಮತ್ತು ಅಂತಹ ಭತ್ಯೆಗಳನ್ನು ಹೆಚ್ಚಿಸಲು ನಿರ್ಧರಸಿದೆ.


ಇದನ್ನೂ ಓದಿ : NPS ನಿಯಮಗಳಲ್ಲಿ ಭಾರೀ ಬದಲಾವಣೆ : ಈಗ ನಿಮಗೆ 75 ವರ್ಷಗಳವರೆಗೆ ಪಿಂಚಣಿ ಮತ್ತು ಹೆಚ್ಚಿನ ಪ್ರಯೋಜನಗಳು!


8000 ರೂ.ವರೆಗೆ ವೇತನ ಹೆಚ್ಚಳ


ರಕ್ಷಣಾ ಇಲಾಖೆ(Ministry of Defence)ಯಲ್ಲಿನ ಅನೇಕ ವರ್ಗದ ನಾಗರಿಕ ಉದ್ಯೋಗಿಗಳಿಗೆ ಅಪಾಯ ಖಾತೆಯ ಪ್ರಯೋಜನವನ್ನು ಸಹ ನೀಡಲಾಗುತ್ತದೆ. ಆದರೆ, ಈ ಭತ್ಯೆಯೂ ಹುದ್ದೆಗೆ ಅನುಗುಣವಾಗಿ ಬದಲಾಗುತ್ತದೆ. ಈ ವಿಶೇಷ ಭತ್ಯೆಯನ್ನು ವಾರ್ಷಿಕವಾಗಿ ಲೆಕ್ಕ ಹಾಕಿದರೆ, ಅದು ನೌಕರರ ವೇತನವನ್ನು ವಾರ್ಷಿಕವಾಗಿ 1000 ರೂ.ನಿಂದ 8000 ರೂ.ಗೆ ಹೆಚ್ಚಿಸಿದೆ.


ಯಾರಿಗೆ ಎಷ್ಟು ಭತ್ಯೆ ಸಿಗುತ್ತದೆ ಎಂದು ತಿಳಿಯಿರಿ


ಈ ವರ್ಗಕ್ಕೆ ಸೇರುವ ಉದ್ಯೋಗಿಗಳ ಭತ್ಯೆ(DA)ಯ ಅಡಿಯಲ್ಲಿ, ಕೌಶಲ್ಯರಹಿತ ಸಿಬ್ಬಂದಿಗೆ ತಿಂಗಳಿಗೆ 90 ರೂ.ಗಳ ಅಪಾಯ ಭತ್ಯೆಯನ್ನು ನೀಡಲಾಗುವುದು ಎಂಬುದು ಗಮನಿಸಬೇಕಾದ ಸಂಗತಿ. ಇದಲ್ಲದೇ ಸೆಮಿ ಕುಶನ್ ಸಿಬ್ಬಂದಿಗೆ 135 ರೂ., ನುರಿತ ಸಿಬ್ಬಂದಿಗೆ 180 ರೂ., ನಾನ್ ಗೆಜೆಟೆಡ್ ಅಧಿಕಾರಿಗೆ 408 ರೂ., ಗೆಜೆಟೆಡ್ ಅಧಿಕಾರಿಗಳಿಗೆ ಮಾಸಿಕ 675 ರೂ.ನಂತೆ ಈ ಭತ್ಯೆ ನೀಡಲಾಗುವುದು.


ಇದನ್ನೂ ಓದಿ : 13-03-2022 Today Gold Price:ಆಭರಣ ಪ್ರಿಯರಿಗೆ ಶಾಕ್.. ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ
 
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.