7th Pay Commission Latest News: ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಸರ್ಕಾರದ ನಂತರೆ ಇದೀಗ ಹಲವು ರಾಜ್ಯ ಸರ್ಕಾರಗಳು ಕೂಡ ತುಟ್ಟಿಭತ್ಯೆಯನ್ನು ಹೆಚ್ಚಿಸಿವೆ. ಹಲವು ರಾಜ್ಯ ಸರ್ಕಾರಿ ನೌಕರರ ಡಿಎ ಇದೀಗ ಕೇಂದ್ರ ಸರ್ಕಾರಿ ನೌಕರರ ಶೇ.34ರಷ್ಟು ಡಿಎಗೆ ಸಮನಾಗಿದೆ. ಇದೇ ಸರಣಿಯಲ್ಲಿ ಮಹಾ ಸರ್ಕಾರ ಕೂಡ ತನ್ನ ಉದ್ಯೋಗಿಗಳಿಗೆ ಭರ್ಜರಿ ಸುದ್ದಿಯನ್ನು ನೀಡಿದೆ. ಈಗಾಗಲೇ ಬಾಕಿ ಉಳಿದಿದ್ದ ಡಿಎ ಹಣದ ಎರಡು ಕಂತುಗಳನ್ನು ಪಾವತಿಸಿರುವ ರಾಜ್ಯ ಸರ್ಕಾರ ಇದೀಗ ಮೂರನೇ ಕಂತನ್ನು ಕೂಡ ಖಾತೆಗೆ ಕಳುಹಿಸುತ್ತಿದೆ. 

COMMERCIAL BREAK
SCROLL TO CONTINUE READING

ಈ ಮೊದಲೇ ಮಹಾರಾಷ್ಟ್ರ ಸರ್ಕಾರ ಏಳನೇ ವೇತನ ಆಯೋಗದ ಅಡಿ ಬಾಕಿ ಉಳಿದಿರುವ ಹಣವನ್ನು ವರ್ಗಾಗಿಯಿಸುವುದಾಗಿ ಘೋಷಣೆ ಮಾಡಿದ್ದು ಇಲ್ಲಿ ಗಮನಾರ್ಹ. ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ಎದುರಾಗಿದ್ದ ರಾಜಕೀಯ ಬಿಕ್ಕಟ್ಟಿನ ಮುನ್ನವೇ ಈ ಕುರಿತಾತ ಪೇಪರ್ ವರ್ಕ್ ಪೂರ್ಣಗೊಳಿಸಲಾಗಿದೆ.


ಇದನ್ನೂ ಓದಿ-Good News: ಬ್ಯಾಂಕ್ ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಮಹಾರಾಷ್ಟ್ರದಲ್ಲಿ 2019 ರಲ್ಲಿ, ರಾಜ್ಯ ಸರ್ಕಾರದ ನೌಕರರು ಸೇರಿದಂತೆ ಎಲ್ಲ ಜಿಲ್ಲಾ ಪರಿಷತ್ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ನೌಕರರಿಗೆ 7 ನೇ ವೇತನ ಆಯೋಗವನ್ನು ಜಾರಿಗೊಳಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದಾದ ನಂತರ 2019-20 ನೇ ಸಾಲಿನಿಂದ ಮುಂದಿನ 5 ವರ್ಷಗಳಲ್ಲಿ ಐದು ಕಂತುಗಳಲ್ಲಿ, ಡಿಎ ಬಾಕಿ ಹಣವನ್ನು ನೌಕರರಿಗೆ ಪಾವತಿಸಲು ಸರ್ಕಾರ ನಿರ್ಧರಿಸಿತ್ತು. ಈ ನಿರ್ಧಾರದ ಪ್ರಕಾರ, ಈಗಾಗಲೇ ಸರ್ಕಾರಿ ನೌಕರರು 2 ಕಂತುಗಳ ಹಣವನ್ನು ಪಡೆದಿದ್ದಾರೆ. ಈಗ ಮೂರನೇ ಕಂತು ಖಾತೆಗೆ ಬರಲಾರಂಭಿಸಿದೆ. ಇದರ ನಂತರ, ನಾಲ್ಕು ಮತ್ತು ಐದನೇ ಕಂತುಗಳ ಹಣ ಬಾಕಿ ಉಳಿಯಲಿದೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಡಿಎ ಯಲ್ಲಿ ಹೆಚ್ಚಳ.! ವೇತನದಲ್ಲೂ ಭರ್ಜರಿ ಏರಿಕೆ

ನೌಕರರಿಗೆ ಭಾರಿ ಲಾಭ
ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಭಾರಿ ಲಾಭ ಸಿಗಲಿದೆ. ಸರ್ಕಾರಿ ನೌಕರರ ಖಾತೆಗೆ ಇದೀಗ ಹಣ ಬರಲಾರಂಭಿಸಿದೆ. ಒಂದು ವೇಳೆ ನೀವೂ ಕೂಡ ಮಹಾರಾಷ್ಟ್ರ ಸರ್ಕಾರದ ನೌಕರರಾಗಿದ್ದರೆ, ತಕ್ಷಣ ನಿಮ್ಮ ಖಾತೆಯನ್ನು ಪರಿಶೀಲಿಸಿ. ಇದರ ಅಡಿಯಲ್ಲಿ ಸರ್ಕಾರದ ಗ್ರೂಪ್ ಎ ಅಧಿಕಾರಿಗಳಿಗೆ 30 ರಿಂದ 40 ಸಾವಿರ ರೂ.ಗಳ ಲಾಭ ಸಿಗಲಿದೆ. ಗ್ರೂಪ್ ಬಿ ಅಧಿಕಾರಿಗಳಿಗೆ 20 ರಿಂದ 30 ಸಾವಿರ ಲಾಭವಾಗಲಿದ್ದರೆ, ಗ್ರೂಪ್ ಸಿ ಅಧಿಕಾರಿಗಳಿಗೆ 10 ರಿಂದ 15 ಸಾವಿರ ಮತ್ತು ಗ್ರೂಪ್ ಡಿ ಅಧಿಕಾರಿಗಳಿಗೆ 8 ರಿಂದ 10 ಸಾವಿರ ರೂ.ಗಳ ಲಾಭ ಸಿಗಲಿದೆ. ಪ್ರಸ್ತುತ ಮಹಾರಾಷ್ಟ್ರ ಸರ್ಕಾರದ ನೌಕರರಿಗೆ ಶೇ.31ರಷ್ಟು ಡಿಎ ಲಾಭ ಸಿಗುತ್ತಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.