7th pay commission: Family Pension ನಿಯಮದಲ್ಲಿ ಭಾರಿ ಬದಲಾವಣೆ, ಇದೀಗ 2.5 ಲಕ್ಷ ರೂ.ಗಳವರೆಗೆ ಸಿಗಲಿದೆ ಲಾಭ
7th pay commission: ದೀಪಾವಳಿಗೂ (Diwali 2021) ಮುನ್ನ ಕೇಂದ್ರ ರಕ್ಷಣಾ ಸಚಿವಾಲಯ (Defence Ministry) ಕುಟುಂಬ ಪಿಂಚಣಿ (Family Pension) ಕುರಿತು ಮಹತ್ವದ ಘೋಷಣೆ ಮಾಡಿದೆ.
7th pay commission: ದೀಪಾವಳಿಗೂ (Diwali 2021) ಮುನ್ನ ಕೇಂದ್ರ ರಕ್ಷಣಾ ಸಚಿವಾಲಯ (Defence Ministry) ಕುಟುಂಬ ಪಿಂಚಣಿ (Family Pension) ಕುರಿತು ಮಹತ್ವದ ಘೋಷಣೆ ಮಾಡಿದೆ. ಸಚಿವಾಲಯ ಹೊರಡಿಸಿರುವ ಹೇಳಿಕೆಯ ಪ್ರಕಾರ, ಮಕ್ಕಳಿಗೆ ನೀಡುವ ಕುಟುಂಬ ಪಿಂಚಣಿಯ (Family Pension Rule) ಗರಿಷ್ಠ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಬದಲಾವಣೆಯ ಪ್ರಯೋಜನವನ್ನು ಅವರ ತಾಯಿ ಮತ್ತು ತಂದೆ ಇಬ್ಬರೂ ರಕ್ಷಣಾ ಸಚಿವಾಲಯದ ಉದ್ಯೋಗಿಗಳಾಗಿರುವ ಮಕ್ಕಳಿಗೆ ನೀಡಲಾಗುವುದು. ಪೋಷಕರು 7 ನೇ ಕೇಂದ್ರ ವೇತನ ಆಯೋಗದ (CPC) ವ್ಯಾಪ್ತಿಯಲ್ಲಿರುವುದು ಸಹ ಅಗತ್ಯವಾಗಿದೆ. ಇದಲ್ಲದೆ, ಮಗುವಿನ ಹೆಸರು ಇಬ್ಬರ ನಾಮಿನಿಯಲ್ಲಿ ನೋಂದಣಿಯಾಗಿರಬೇಕು.
ಎಷ್ಟು ಪೆನ್ಷನ್ ಸಿಗಲಿದೆ?
ಸಚಿವಾಲಯ ಹೊರಡಿಸಿರುವ ಹೇಳಿಕೆ ಪ್ರಕಾರ, ಸರ್ಕಾರಿ ಸೇವೆಯಲ್ಲಿ ಅತ್ಯಧಿಕ ಪಿಂಚಣಿ ಪಾವತಿಯನ್ನು ತಿಂಗಳಿಗೆ 2.5 ಲಕ್ಷ ರೂ.ಗೆ ಪರಿಷ್ಕರಿಸಲಾಗಿದೆ. ಪೋಷಕರಿಬ್ಬರಿಗೂ ಸಂಬಂಧಿಸಿದಂತೆ ಒಂದು ಮಗು ಅಥವಾ ಮಕ್ಕಳಿಗೆ ಪಾವತಿಸಬೇಕಾದ 2 ಕುಟುಂಬ ಪಿಂಚಣಿಗಳ ಗರಿಷ್ಠ ಮಿತಿಯನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ನಿರ್ಧಾರವನ್ನು ಜನವರಿ 1, 2016 ರಿಂದ ಜಾರಿಗೆ ಬರುವಂತೆ ಪರಿಗಣಿಸಲಾಗುತ್ತದೆ.
ಅಂದರೆ ಹಿಂದೆ ಇದರ ವ್ಯಾಪ್ತಿಗೆ ಒಳಪಟ್ಟ ಮಕ್ಕಳಿಗೂ ಇದರ ಲಾಭ ಸಿಗಲಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ಈ ಆದೇಶವನ್ನು ಜಾರಿಗೊಳಿಸಿದೆ.
ಇದನ್ನೂ ಓದಿ-NPS: ಪ್ರತಿನಿತ್ಯ ₹50 ಹೂಡಿಕೆ ಮಾಡಿ ನಿವೃತ್ತಿಯ ನಂತರ ಪಡೆಯಿರಿ ₹34 ಲಕ್ಷ : ಇದು ಹೂಡಿಕೆ ಮಾಡಲು ಉತ್ತಮ ಮಾರ್ಗ!
ಪ್ರಸ್ತುತ ಯಾವುದೇ ಸರ್ಕಾರಿ ನೌಕರರ ಪುತ್ರ/ಪುತ್ರಿ ಎಲ್ಲಾ ಷರತ್ತುಗಳನ್ನ ಪೂರೈಸಿದರೆ, ಅವರು ತಂದೆ ಮತ್ತು ತಾಯಿಯ ಹೆಸರಿನಲ್ಲಿ ಒಟ್ಟು 2 ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಈ ಎರಡು ಪಿಂಚಣಿಗಳ ಮಾಸಿಕ ಗರಿಷ್ಟ ಮೊತ್ತ 1,25,000 ರೂ.ಗಳಾಗಿದೆ. ಆದರೆ ಇದೀಗ ರಕ್ಷಣಾ ಸಚಿವಾಲಯದ ಹೊಸ ಆದೇಶದ ಬಳಿಕ ರಕ್ಷಣಾ ಸಚಿವಾಲಯದ ನೌಕರರ ಮಕ್ಕಳಿಗೆ ದೊಡ್ಡ ಮೊತ್ತವೇ ಸಿಗಲಿದೆ.
ಇದನ್ನೂ ಓದಿ-PMSYMY : ಈ ಸರ್ಕಾರಿ ಯೋಜನೆಯಲ್ಲಿ ₹2 ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ ಸಿಗಲಿದೆ ₹36000 ಪಿಂಚಣಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ