8th Pay Commission : ಸಾಮಾನ್ಯವಾಗಿ ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿ ಇರುವ ಸರ್ಕಾರಿ ನೌಕರರು, ಇದೀಗ ಎಂಟನೇ ವೇತನ ಆಯೋಗ ಜಾರಿ ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಆದರೆ, ಈಗ ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆ ಕೊನೆಯಾಗುವ ಕಾಲ ಸನ್ನಿಹಿತವಾಗಿದೆ. ಈ ಬಾರಿ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ನೀಡಬಹುದು ಎನ್ನಲಾಗಿದೆ.  ಏಳನೇ ವೇತನ ಆಯೋಗದ ನಂತರ ಸರ್ಕಾರವು ಶೀಘ್ರದಲ್ಲೇ ಎಂಟನೇ ವೇತನ ಆಯೋಗವನ್ನು ರಚಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಹೊಸ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರ ಈಗಾಗಲೇ ಚರ್ಚೆ ಆರಂಭಿಸಿವೆ. 


COMMERCIAL BREAK
SCROLL TO CONTINUE READING

8ನೇ ವೇತನ ಆಯೋಗಕ್ಕಾಗಿ ಪ್ರತಿಭಟನೆ : 
ದೆಹಲಿಯಲ್ಲಿ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನೌಕರರು ಮತ್ತು ಪಿಂಚಣಿದಾರರ ಪ್ರತಿಭಟನೆ ನಡೆಯುತ್ತಿದೆ. ವೇತನ ಆಯೋಗದ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. 8ನೇ ವೇತನ ಆಯೋಗ ಜಾರಿಯಾದರೆ ನೌಕರರ ಕನಿಷ್ಠ ವೇತನದಲ್ಲಿ ಭಾರೀ ಏರಿಕೆಯಾಗಬಹುದು. 


ಇದನ್ನೂ ಓದಿ : PPF Account: ನಿಮ್ಮ ಪಿ‌ಪಿ‌ಎಫ್ ಖಾತೆ ಬಂದ್ ಆಗಿದೆಯೇ? ಇಂದೇ ಈ ಕೆಲಸ ಮಾಡಿ, ಇಲ್ಲವೇ ಭಾರೀ ನಷ್ಟ


2024ರಲ್ಲಿ ನಡೆಯಲಿದೆ ಚುನಾವಣೆ  :
2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.  ಈ ಹಿನ್ನೆಲೆಯಲ್ಲಿ ಹೊಸ ವೇತನ ರಚನೆಯ ಬಗ್ಗೆಯೂ ಸರ್ಕಾರ ಚರ್ಚಿಸಬಹುದು. ಸದ್ಯ ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಮೂಲಗಳನ್ನು ನಂಬುವುದಾದರೆ, ವೇತನ ಆಯೋಗಕ್ಕಾಗಿ ಯಾವುದೇ ಸಮಿತಿಯನ್ನು ರಚಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಜನರಿಯಲ್ಲಿ ತುಟ್ಟಿಭತ್ಯೆ ಶೇ ೫೦ಕ್ಕೆ ಏರಿದಾಗ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಮತ್ತು ಡಿಎ ಶೂನ್ಯವಾಗುತ್ತದೆ. ಹೆಚ್ಚಳವಾದ 50 ಶೇ. ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಸೇರಿಸಿದಾಗ ವೇತನ ಪರಿಷ್ಕರಣೆಯಾಗಬೇಕಾಗುತ್ತದೆ. ಅಂದರೆ ವೇತನ ಪರಿಷ್ಕರಣೆಗೆ ಹೊಸ ಸೂತ್ರ ರೂಪಿಸಬೇಕು. ಅಥವಾ ಹೊಸ ಆಯೋಗ ರಚನೆಯಾಗಬೇಕು. 


2024 ರಲ್ಲಿ ರಚನೆಯಾಗಲಿದೆ  8 ನೇ ವೇತನ ಆಯೋಗ :
ಮೂಲಗಳ ಪ್ರಕಾರ, 2024 ರಲ್ಲಿ 8 ನೇ ವೇತನ ಆಯೋಗವನ್ನು ರಚಿಸಲಾಗುವುದು. ಇದಾದ ಬಳಿಕ ಸುಮಾರು ಒಂದೂವರೆ ವರ್ಷದೊಳಗೆ ಈ ಆಯೋಗ ಕಾರ್ಯರೂಪಕ್ಕೆ ಬರಬೇಕಿದೆ. ಎಂಟನೇ ವೇತನ ಆಯೋಗ ಜಾರಿಯಾದ ನಂತರ ಕೇಂದ್ರ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗಲಿದೆ ಎನ್ನುತ್ತಾರೆ ತಜ್ಞರು. ಇದಲ್ಲದೆ, ಫಿಟ್‌ಮೆಂಟ್ ಅಂಶದಲ್ಲೂ ಬದಲಾವಣೆಗಳಾಗಲಿದೆ ಎನ್ನಲಾಗಿದೆ. 


ಇದನ್ನೂ ಓದಿ : ವಿಸ್ತಾರ ಏರ್ಲೈನ್ಸ್ ಫೆಸ್ಟಿವಲ್‌ ಸೇಲ್:‌ ಭಾರಿ ರಿಯಾಯಿತಿ ಹಾಗೂ ಆಫರ್‌ಗಳು ಲಭ್ಯ


ಮೂಲ ವೇತನ ಶೇ.44.44ರಷ್ಟು ಹೆಚ್ಚಾಗಬಹುದು : 
8ನೇ ವೇತನ ಆಯೋಗ ಜಾರಿಯಾದ ಬಳಿಕ ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶವು ಸುಮಾರು 3.68 ಪಟ್ಟು ಹೆಚ್ಚಾಗುತ್ತದೆ. ಹೀಗಾದಾಗ ಉದ್ಯೋಗಿಗಳ ಮೂಲ ವೇತನವು ಸುಮಾರು 44.44 ರಷ್ಟು ಹೆಚ್ಚಾಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.