44% ವೇತನ ಹೆಚ್ಚಳದೊಂದಿಗೆ ಮುಂದಿನ ವೇತನ ಆಯೋಗವು ಕಾರ್ಯರೂಪಕ್ಕೆ ! ಸರ್ಕಾರಿ ನೌಕರರಲ್ಲಿ ಹರ್ಷ
ಮುಂದಿನ ವರ್ಷಾರಂಭದಲ್ಲಿ ಮುಂದಿನ ವೇತನ ಆಯೋಗ ಅಂದರೆ 8ನೇ ವೇತನ ಆಯೋಗ ರಚನೆ ಕುರಿತು ಘೋಷಣೆಯಾಗಬಹುದು ಎನ್ನಲಾಗಿದೆ. ಮುಂದಿನ ವರ್ಷ ಈ ನಿಟ್ಟಿನಲ್ಲಿ ಕೇಂದ್ರ ಮಹತ್ವದ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರಿಗೆ ಇತ್ತೀಚೆಗಷ್ಟೇ ಒಳ್ಳೆಯ ಸುದ್ದಿ ಸಿಕ್ಕಿದೆ. ತುಟ್ಟಿಭತ್ಯೆ ಹೆಚ್ಚಳದ ಮೂಲಕ ಅವರ ವೇತನದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದೀಗ ಮತ್ತೆ ಉದ್ಯೋಗಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ. ಅವರ ಬಹುದಿನಗಳ ಬೇಡಿಕೆಗಳು ಈಗ ಈಡೇರಲಿವೆ ಎಂದು ಮೂಲಗಳು ತಿಳಿಸಿವೆ.
ಹೌದು, ಮುಂದಿನ ವರ್ಷಾರಂಭದಲ್ಲಿ ಮುಂದಿನ ವೇತನ ಆಯೋಗ ಅಂದರೆ 8ನೇ ವೇತನ ಆಯೋಗ ರಚನೆ ಕುರಿತು ಘೋಷಣೆಯಾಗಬಹುದು ಎನ್ನಲಾಗಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ಆದರೂ ಹೊಸ ವೇತನ ಆಯೋಗವನ್ನು ರಚಿಸುವ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ ಎನ್ನಲಾಗಿದೆ. ಮುಂದಿನ ವರ್ಷ ಈ ನಿಟ್ಟಿನಲ್ಲಿ ಕೇಂದ್ರ ಮಹತ್ವದ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ಐದು ವರ್ಷದವರೆಗೆ ಉಚಿತ ರೇಶನ್ : ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
8ನೇ ವೇತನ ಆಯೋಗಕ್ಕೆ ಸಿದ್ಧತೆ :
ದೆಹಲಿಯಲ್ಲಿ ನೌಕರರ ಮತ್ತು ಪಿಂಚಣಿದಾರರ ಸಂಘಗಳು 8ನೇ ವೇತನ ಆಯೋಗ ರಚನೆಗೆ ಒತ್ತಾಯಿಸಿವೆ. ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಪೌರಕಾರ್ಮಿಕರು ಮುಂದಿನ ವೇತನ ಆಯೋಗದ ಸ್ಥಿತಿಗತಿ ಕುರಿತು ಸ್ಪಷ್ಟನೆ ಕೇಳಿದ್ದಾರೆ. ಸರಕಾರ ಇದಕ್ಕೆ ಒಪ್ಪಿಗೆ ನೀಡಿದರೆ ಕೇಂದ್ರ ನೌಕರರ ಕನಿಷ್ಠ ವೇತನದಲ್ಲಿ ಭಾರೀ ಏರಿಕೆಯಾಗಲಿದೆ. 8ನೇ ವೇತನ ಆಯೋಗದ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಆದರೆ, ಮುಂದಿನ ವೇತನ ಆಯೋಗವನ್ನು ಯೋಜಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ವೇತನದಲ್ಲಿ ಆಗುವುದು ದೊಡ್ಡ ಮಟ್ಟದ ಏರಿಕೆ :
2024 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರನ್ನು ಖುಷಿ ಪಡಿಸಲು ಸರ್ಕಾರ ಹೊಸ ವೇತನ ಆಯೋಗದ ಬಗ್ಗೆ ನೌಕರರಿಗೆ ಒಳ್ಳೆಯ ಸುದ್ದಿ ನೀಡಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮುಂದಿನ ವರ್ಷದಲ್ಲಿಯೇ ವೇತನ ಆಯೋಗ ರಚನೆಯಾಗಿ ಜಾರಿಯಾಗಲಿದೆ ಎಂದು ಹೇಳುವುದು ಸಾಧ್ಯವಿಲ್ಲ. 8ನೇ ವೇತನ ಆಯೋಗ ಜಾರಿಯಾದರೆ ನೌಕರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮತ್ತೊಂದೆಡೆ, ವೇತನ ಆಯೋಗದಲ್ಲಿ ಬದಲಾವಣೆ ತರಲು ಸರ್ಕಾರ ಚಿಂತನೆ ನಡೆಸಿದೆ.
ಇದನ್ನೂ ಓದಿ : ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಪ್ರಮಾಣಪತ್ರ: ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗಗಳು...
ಫಿಟ್ಮೆಂಟ್ ಅಂಶ ಹೆಚ್ಚಾಗುತ್ತದೆ :
ಕೇಂದ್ರ ಸರ್ಕಾರವು ಹತ್ತು ವರ್ಷಕ್ಕೊಮ್ಮೆ ಜಾರಿಗೊಳಿಸುವ ವೇತನ ಆಯೋಗದಲ್ಲಿ ನೌಕರರ (ಕೇಂದ್ರ ಸರ್ಕಾರಿ ನೌಕರರು) ಮೂಲ ವೇತನವನ್ನು ಬಹಳವಾಗಿ ಹೆಚ್ಚಿಸಲಾಗುತ್ತದೆ. ಮುಂದಿನ ವೇತನ ಆಯೋಗ ಅಂದರೆ 8ನೇ ವೇತನ ಆಯೋಗ ಹತ್ತು ವರ್ಷಗಳ ನಂತರ 2026ರಲ್ಲಿ ಬರುವ ಸಾಧ್ಯತೆ ಇದೆ. ಇದರಿಂದ ಎಲ್ಲಾ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಫಿಟ್‌ಮೆಂಟ್ ಅಂಶ ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ನೌಕರರಿಂದ ಕೇಳಿ ಬರುತ್ತಿದೆ. ಫಿಟ್‌ಮೆಂಟ್ ಅಂಶವನ್ನು ಸರ್ಕಾರ ನೇರವಾಗಿ 2.57 ರಿಂದ 3.0 ಪಟ್ಟು ಹೆಚ್ಚಿಸಬಹುದು ಎಂದು ಹೇಳಲಾಗಿದೆ. ಆದರೆ, 8ನೇ ವೇತನ ಶ್ರೇಣಿಯಲ್ಲಿರುವ ನೌಕರರ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗಬಹುದು. ಅಂದರೆ ನೌಕರರ ಕನಿಷ್ಠ ವೇತನ ಶೇ.44.44ರಷ್ಟು ಹೆಚ್ಚಾಗಬಹುದು. 7ನೇ ವೇತನ ಶ್ರೇಣಿಯಡಿ ನೌಕರರು 2.57 (ಫಿಟ್ಮೆಂಟ್ ಫ್ಯಾಕ್ಟರ್) ಆಧಾರದ ಮೇಲೆ ಮೂಲ ವೇತನವಾಗಿ ರೂ.18 ಸಾವಿರ ಪಡೆಯುತ್ತಾರೆ. ಇದು 26 ಸಾವಿರ ಅಥವಾ ಅದಕ್ಕಿಂತ ಹೆಚ್ಚಾಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.