ತಿಂಗಳಿಗೆ ಕೈ ಸೇರುವುದು 20,500 ರೂಪಾಯಿ ಪಿಂಚಣಿ !ವೃದ್ದಾಪ್ಯದಲ್ಲಿ ನೆಮ್ಮದಿಯ ಜೀವನಕ್ಕೆ ಸರ್ಕಾರದ ಯೋಜನೆ
ಹಿರಿಯ ನಾಗರಿಕರಿಗಾಗಿ ಸರ್ಕಾರವು ಹಲವಾರು ವಿಶೇಷ ಹೂಡಿಕೆ ಯೋಜನೆಗಳನ್ನು ಜಾರಿಗೆ ತಂದಿದೆ. ವೃದ್ಧಾಪ್ಯದಲ್ಲಿ ಹಣವನ್ನು ಗಳಿಸುವ ಸುರಕ್ಷಿತ ಮಾರ್ಗವನ್ನು ಕಂಡು ಕೊಳ್ಳುವುದು ಬಹಳ ಮುಖ್ಯ.
ಬೆಂಗಳೂರು : ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇರುತ್ತದೆ. ವಯಸ್ಸಿಗೆ ತಕ್ಕಂತೆ ನಮ್ಮ ಹಣದ ಅಗತ್ಯವೂ ಬದಲಾಗುತ್ತದೆ. ವೃದ್ಧಾಪ್ಯದಲ್ಲಿ ಯೌವನದಂತೆ ಹಣ ಗಳಿಸುವುದು ಸಾಧ್ಯವಿಲ್ಲ. ಹಾಗಾಗಿ ವೃದ್ಧಾಪ್ಯದಲ್ಲಿ ಹಣವನ್ನು ಗಳಿಸುವ ಸುರಕ್ಷಿತ ಮಾರ್ಗವನ್ನು ಕಂಡು ಕೊಳ್ಳುವುದು ಬಹಳ ಮುಖ್ಯ.
ಮಾಸಿಕ ಆದಾಯಕ್ಕೆ ಉತ್ತಮ ಆಯ್ಕೆ :
ಹಿರಿಯ ನಾಗರಿಕರಿಗಾಗಿ ಸರ್ಕಾರವು ಹಲವಾರು ವಿಶೇಷ ಹೂಡಿಕೆ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಎಂದರೆ ನಾಗರಿಕ ಉಳಿತಾಯ ಯೋಜನೆ (SCSS). ಅಂಚೆ ಇಲಾಖೆ ಈ ಯೋಜನೆಯನ್ನು ನಡೆಸುತ್ತದೆ. ಇದರಲ್ಲಿ ಹೂಡಿಕೆದಾರರು ಮಾಸಿಕ ಆದಾಯವನ್ನು ಪಡೆಯುತ್ತಾರೆ. ಪೋಸ್ಟ್ ಆಫೀಸ್‌ನ ಹಿರಿಯ ನಾಗರಿಕ ಉಳಿತಾಯ ಯೋಜನೆಯು ನಿವೃತ್ತಿಯ ನಂತರ ನಿಯಮಿತ ಮಾಸಿಕ ಆದಾಯದ ಚಿಂತೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಈ ಯೋಜನೆಯು ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಸ್ಥಿರವಾದ ಮಾಸಿಕ ಆದಾಯವನ್ನು ಖಾತ್ರಿಗೊಳಿಸುತ್ತದೆ. ನಿವೃತ್ತರಾದವರು ಮತ್ತು ತಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಈ ಯೋಜನೆಯು ಉಪಯುಕ್ತವಾಗಿದೆ.
ಇದನ್ನೂ ಓದಿ : ವಾರದ ಮೊದಲ ದಿನವೇ ಇಳಿಕೆ ಕಂಡ ಚಿನ್ನದ ದರ! ಹಾಗಾದ್ರೆ ಇಂದೆಷ್ಟಿದೆ 10 ಗ್ರಾಂ ಬಂಗಾರದ ಬೆಲೆ?!
ತಿಂಗಳಿಗೆ 20,500 ಆದಾಯ :
SCSS ಮೇಲಿನ ಪ್ರಸ್ತುತ ಬಡ್ಡಿ ದರವು 8.2% ಆಗಿದೆ. ಸರ್ಕಾರದ ಇತರ ಯೋಜನೆಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಬಡ್ಡಿದರವನ್ನು ನೀಡುವ ಯೋಜನೆ ಇದು. ಇದರಲ್ಲಿ ಗರಿಷ್ಠ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ವರ್ಷ ಸುಮಾರು 2,46,000 ರೂಪಾಯಿ ಬಡ್ಡಿ ಸಿಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳಿಗೆ ಲೆಕ್ಕ ಹಾಕಿದರೆ 20,500 ರೂಪಾಯಿ ಪಡೆಯಬಹುದು. ಈ ಹಣವನ್ನು ನೇರವಾಗಿ ಹೂಡಿಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
SCSS :ಹೂಡಿಕೆ ಮಿತಿ ಮತ್ತು ಅವಧಿ :
- ಮೊದಲು ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿ 15 ಲಕ್ಷ ರೂಪಾಯಿ ಆಗಿತ್ತು. ಇದೀಗ ಈ ಮಿತಿಯನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ.
- ಈ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ಮೆಚ್ಯುರಿಟಿ ನಂತರವೂ ಇದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು.
ಇದನ್ನೂ ಓದಿ : ಪಿಂಚಣಿದಾರರಿಗೆ 20%-100% ಪಿಂಚಣಿ ಹೆಚ್ಚಳ:ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಸಂಪೂರ್ಣ ವಿವರ ಇಲ್ಲಿದೆ
SCSS :ಇದರಲ್ಲಿ ಯಾರು ಹೂಡಿಕೆ ಮಾಡಬಹುದು? :
- 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
- 55 ರಿಂದ 60 ವರ್ಷದೊಳಗಿನ ಸ್ವಯಂ ನಿವೃತ್ತಿ ಹೊಂದಿರುವವರು ಸಹ ಈ ಪ್ರಯೋಜನವನ್ನು ಪಡೆಯಬಹುದು.
- ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಲು, ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಬಹುದು.
SCSS :ತೆರಿಗೆ ಮತ್ತು ಇತರ ಪ್ರಯೋಜನಗಳು :
- ಈ ಯೋಜನೆಯಿಂದ ಬರುವ ಆದಾಯವು ತೆರಿಗೆಗೆ ಒಳಪಡುತ್ತದೆ. ಆದರೆ ಕೆಲವು ತೆರಿಗೆ ಉಳಿತಾಯ ಸೌಲಭ್ಯಗಳು SCSS ಅಡಿಯಲ್ಲಿ ಲಭ್ಯವಿದೆ. ಇದು ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ.
SCSS:ಈ ಯೋಜನೆಯ ಪ್ರಯೋಜನಗಳು:
- ಸುರಕ್ಷಿತ ಹೂಡಿಕೆ: ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿರುವುದರಿಂದ, ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
- ಸ್ಥಿರ ಮಾಸಿಕ ಆದಾಯ: ನಿವೃತ್ತಿಯ ನಂತರ, ಹೂಡಿಕೆದಾರರು ನಿಯಮಿತ ವೆಚ್ಚಗಳಿಗಾಗಿ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಪಡೆಯುತ್ತಾರೆ.
- ಬಡ್ಡಿ ದರ: 8.2% ಬಡ್ಡಿಯನ್ನು ಗಳಿಸಬಹುದು. ಇದು ತುಲನಾತ್ಮಕವಾಗಿ ಹೆಚ್ಚಿನ ಬಡ್ಡಿ ದರವಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
SCSS: ನಿಯಮಗಳು ಮತ್ತು ಷರತ್ತುಗಳು :
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು, ಅದರ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ಯೋಜನೆಯು ನಿವೃತ್ತಿಯ ನಂತರದ ಅವಧಿಗೆ ಆರ್ಥಿಕ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ. ನಿವೃತ್ತಿಯ ನಂತರ ಆರಾಮದಾಯಕ ಮತ್ತು ಸುರಕ್ಷಿತ ಜೀವನವನ್ನು ನಡೆಸಲು ಬಯಸುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸರಿಯಾದ ಆಯ್ಕೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.