Aadhaar Update: ಈಗ ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ ಆಧಾರ್ ಡೌನ್ಲೋಡ್ ಮಾಡಬಹುದು
Aadhaar Update: ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ UIDAI ನ ಅಧಿಕೃತ ವೆಬ್ಸೈಟ್ನಿಂದ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸದವರಿಗೆ ನೆರವಾಗುವ ನಿಟ್ಟಿನಲ್ಲಿ ಯುಐಡಿಎಐ ಈ ಕ್ರಮ ಕೈಗೊಂಡಿದೆ.
Aadhaar Update: ಆಧಾರ್ ಕಾರ್ಡ್ ಹೊಂದಿರುವವರಿಗೆ ತುಂಬಾ ಒಳ್ಳೆಯ ಮತ್ತು ಉಪಯುಕ್ತ ಸುದ್ದಿ ಇದೆ. ನೀವು ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ (Aadhaar Card Download) ಮಾಡಲು ಬಯಸಿದರೆ ಮತ್ತು ನೀವು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ ಚಿಂತಿಸಬೇಕಿಲ್ಲ. ಇದೀಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಆಧಾರ್ ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದನ್ನು ಪ್ರಕಟಿಸಿದೆ. ಆಧಾರ್‌ಗೆ ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸದವರಿಗೆ ನೆರವಾಗುವ ನಿಟ್ಟಿನಲ್ಲಿ ಯುಐಡಿಎಐ ಈ ಕ್ರಮ ಕೈಗೊಂಡಿದೆ.
ವಾಸ್ತವವಾಗಿ, ಈ ಮೊದಲು ಬಳಕೆದಾರರಿಗೆ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ (Aadhaar Card Download) ಮಾಡಲು ಆಧಾರ್‌ಗೆ ಲಿಂಕ್ ಮಾಡಲಾದ ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಿತ್ತು. ಮೊಬೈಲ್ ಸಂಖ್ಯೆ ಇಲ್ಲದೆ ನೀವು ಆಧಾರ್ ಕಾರ್ಡ್ ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ.
ಇದನ್ನೂ ಓದಿ- Aadhaar Card Update: ನಿಮ್ಮ ಆಧಾರ್‌ನಲ್ಲಿನ ಫೋಟೋ ಬದಲಾಯಿಸುವುದು ಹೇಗೆ?
ಆಧಾರ್ ಡೌನ್‌ಲೋಡ್ ಮಾಡುವ ಸುಲಭ ಪ್ರಕ್ರಿಯೆಯನ್ನು ತಿಳಿಯಿರಿ :
1. ಇದಕ್ಕಾಗಿ ನೀವು ಮೊದಲು UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು 'My Aadhaar' ಅನ್ನು ಟ್ಯಾಪ್ ಮಾಡಿ.
2. ಈಗ 'ಆರ್ಡರ್ ಆಧಾರ್ ಪಿವಿಸಿ ಕಾರ್ಡ್' ಮೇಲೆ ಕ್ಲಿಕ್ ಮಾಡಿ.
3. ಈಗ ಇಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
4. ಇಲ್ಲಿ ನೀವು ಆಧಾರ್ ಸಂಖ್ಯೆಯ ಬದಲಿಗೆ 16 ಅಂಕಿಗಳ ವರ್ಚುವಲ್ ಐಡೆಂಟಿಫಿಕೇಶನ್ ಸಂಖ್ಯೆ (VID) ಅನ್ನು ಸಹ ನಮೂದಿಸಬಹುದು.
5. ಈ ಪ್ರಕ್ರಿಯೆಯ ನಂತರ, ನಿಮಗೆ ನೀಡಲಾದ ಭದ್ರತೆ ಅಥವಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
6. ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಬಯಸಿದರೆ, 'ನನ್ನ ಮೊಬೈಲ್ ಸಂಖ್ಯೆ ನೋಂದಾಯಿಸಲಾಗಿಲ್ಲ' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
7. ಈಗ ನಿಮ್ಮ ಪರ್ಯಾಯ ಸಂಖ್ಯೆ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಇದನ್ನೂ ಓದಿ- UIDAI Update: ಕಳೆದುಹೋದ UID ಅಥವಾ EID ಸಂಖ್ಯೆಯನ್ನು ಈ ರೀತಿ ಮರಳಿ ಪಡೆಯಬಹುದು
8. ಬಳಿಕ 'ಸೆಂಡ್ OTP' ಮೇಲೆ ಕ್ಲಿಕ್ ಮಾಡಿ.
9. ಈಗ ನೀವು ನಮೂದಿಸಿದ ಪರ್ಯಾಯ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (OTP) ಬರುತ್ತದೆ.
10. ಮುಂದೆ, ನೀವು 'ನಿಯಮಗಳು ಮತ್ತು ಷರತ್ತುಗಳು' ಚೆಕ್‌ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ ಅಂತಿಮವಾಗಿ 'ಸಲ್ಲಿಸು' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
11. ಈಗ ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
12. ಮರುಮುದ್ರಣದ ಪರಿಶೀಲನೆಗಾಗಿ, ನೀವು ಪೂರ್ವವೀಕ್ಷಣೆ ಆಧಾರ್ ಪತ್ರದ ಆಯ್ಕೆಯನ್ನು ಇಲ್ಲಿ ಪಡೆಯುತ್ತೀರಿ.
13. ಇದರ ನಂತರ ನೀವು 'ಮೇಕ್ ಪೇಮೆಂಟ್' ಆಯ್ಕೆಯನ್ನು ಆರಿಸಿಕೊಳ್ಳಿ.
14. ನಿಗದಿತ ಶುಲ್ಕವನ್ನು ಪಾವತಿಸುವ ಮೂಲಕ ನೀವು ಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.