ಕೋಬೋಟ್ಸ್ ನೊಂದಿಗೆ Smart Power factory ಯನ್ನು ವಿಸ್ತರಿಸಿದ ABB India
ಹೆಚ್ಚುತ್ತಿರುವ Smart Power ಪರಿಹಾರಗಳು ಮತ್ತು ಇಂಧನ ನಿರ್ವಹಣೆ ತಂತ್ರಜ್ಞಾನಗಳ ಬೇಡಿಕೆಗಳನ್ನು ಮೊಟ್ಟ ಮೊದಲ ಬಾರಿಗೆ Industry 5.0 ಉತ್ಪಾದನಾ ಪ್ರಕ್ರಿಯೆಗಳ ಮೂಲಕ ಪೂರೈಸುವ ನಿಟ್ಟಿನಲ್ಲಿ ABB India ನೆಲಮಂಗಲದಲ್ಲಿರುವ ತನ್ನ Smart Power ಫ್ಯಾಕ್ಟರಿಯನ್ನು ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸಿದೆ.
ನೆಲಮಂಗಲ: ಹೆಚ್ಚುತ್ತಿರುವ Smart Power ಪರಿಹಾರಗಳು ಮತ್ತು ಇಂಧನ ನಿರ್ವಹಣೆ ತಂತ್ರಜ್ಞಾನಗಳ ಬೇಡಿಕೆಗಳನ್ನು ಮೊಟ್ಟ ಮೊದಲ ಬಾರಿಗೆ Industry 5.0 ಉತ್ಪಾದನಾ ಪ್ರಕ್ರಿಯೆಗಳ ಮೂಲಕ ಪೂರೈಸುವ ನಿಟ್ಟಿನಲ್ಲಿ ABB India ನೆಲಮಂಗಲದಲ್ಲಿರುವ ತನ್ನ Smart Power ಫ್ಯಾಕ್ಟರಿಯನ್ನು ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸಿದೆ. ಉತ್ತಮ ಮಾನವ-ಯಂತ್ರ ಇಂಟರ್ ಪೇಸ್, ಕೃತಕ ಬುದ್ಧಿಮತ್ತೆ (artificial intelligence (AI)) ಮತ್ತು ಅತ್ಯಾಧುನಿಕ, ಸ್ವಯಂಚಾಲಿತ ಹಾಗೂ ಹೊಂದಿಕೊಳ್ಳುವ ಭವಿಷ್ಯದ-ಸಿದ್ಧ ಕಾರ್ಖಾನೆಯನ್ನು ನಿರ್ಮಾಣ ಮಾಡಲು ಸುಧಾರಿತ ಡಿಜಿಟಲೈಸೇಶನ್ ತಂತ್ರಜ್ಞಾನಗಳಿಗಾಗಿ ಸ್ಮಾರ್ಟ್ ಸೌಲಭ್ಯವು ಸುಧಾರಿತ ಸಹಯೋಗಿ ರೊಬೊಟಿಕ್ಸ್ ತಂತ್ರಜ್ಞಾವನ್ನು ಬಳಸಿಕೊಳ್ಳುತ್ತದೆ.
ಈ ಮೊದಲ ರೀತಿಯ ಸೌಲಭ್ಯವು ಹೆಚ್ಚಿದ ವಿಶ್ವಾಸಾರ್ಹತೆ ಹಾಗೂ ಶಕ್ತಿಯ ಉಳಿತಾಯಕ್ಕಾಗಿ ಉದ್ಯಮದಿಂದ ಬೇಡಿಕೆಯನ್ನು ಪೂರೈಸಲು ABB Smart Power ನ ಸಂಪೂರ್ಣ ಶ್ರೇಣಿಯ ಲಘು ವೋಲ್ಟೇಜ್ ವಿದ್ಯುತ್ ಉಪಕರಣಗಳು ಮತ್ತು ವಿದ್ಯುತ್ ನಿರ್ವಹಣೆ ತಂತ್ರಜ್ಞಾನಗಳನ್ನು ಉತ್ಪಾದಿಸುತ್ತದೆ, ಪರೀಕ್ಷಿಸುತ್ತದೆ ಮತ್ತು ಪೂರೈಸುತ್ತದೆ. ಇದಲ್ಲದೇ, ಹೆಚ್ಚುತ್ತಿರುವ ವಾಣಿಜ್ಯ ಮತ್ತು ವಸತಿ ಕಟ್ಟಡಗಳು, ಮೂಲಸೌಕರ್ಯ, ಯುಟಿಲಿಟಿ ಮತ್ತು ಸೌರ, ಪವನ ಮತ್ತು ಇನ್ನೂ ಅನೇಕ ವಿದ್ಯುತ್ ಉತ್ಪಾದನಾ ವ್ಯವಸ್ಥೆಗಳ ಬೇಡಿಕೆಗಳನ್ನು ಪೂರೈಸುತ್ತದೆ.
ಇದನ್ನೂ ಓದಿ- ದಕ್ಷಿಣ ಕನ್ನಡದಲ್ಲಿ ಗುಂಡಿ ತೆಗೆಯುವ ವೇಳೆ ಗುಹೆ ಪತ್ತೆ..!
ABB Smart Power ಕಾರ್ಖಾನೆಯು 10,000 ಚದರ ಮೀಟರ್ ಗೂ ಅಧಿಕ ವಿಸ್ತೀರ್ಣದಲ್ಲಿ ಸ್ಥಾಪಿತವಾಗಿದ್ದು, ರೊಬೊಟ್ಸ್, ಮೋಟರ್ಸ್ ಮತ್ತು ಡ್ರೈವ್ ಗಳಂತಹ ಲಿಂಕ್ ಉಪಕರಣಗಳನ್ನು ಇಂಟರ್ನೆಟ್ ಆಫ್ ಥಿಂಗ್ಸ್ ಗೆ (IoT) ಲಿಂಕ್ ಮಾಡುತ್ತದೆ. ಸಂಪರ್ಕಿತ ಫ್ಯಾಕ್ಟರಿ ಸಾಫ್ಟ್ ವೇರ್ ಪ್ರಕ್ರಿಯೆಯ ಗರಿಷ್ಠ ಮಟ್ಟದ ಅವಕಾಶಗಳನ್ನು ಪ್ರಮುಖವಾಗಿಸುತ್ತದೆ ಮತ್ತು ಉತ್ಪಾದಕತೆ ಹಾಗೂ ದಕ್ಷತೆಯನ್ನು ಹೆಚ್ಚಿಸಲು ಮುನ್ಸೂಚಕ ನಿರ್ವಹಣೆಯನ್ನು ನಿಗದಿಪಡಿಸುತ್ತದೆ. ಈ ಮೂಲಕ ಶೇ.15 ರಷ್ಟು ವಿದ್ಯುತ್ ದಕ್ಷತೆಯೊಂದಿಗೆ ಶೇ.30 ರಷ್ಟು ವರ್ಧಿತ ವಿದ್ಯುತ್ ಉತ್ಪಾದನೆಗೆ ಕಾರಣವಾಗುತ್ತದೆ.
ಈ ಬಗ್ಗೆ ABB ಸಮೂಹ ಸಂಸ್ಥೆಯ ಸ್ಮಾರ್ಟ್ ಪವಾರ್ ವಿಭಾಗದ ಅಧ್ಯಕ್ಷ ಜಿಯಾಂಪಿರೋ ಫ್ರಿಸಿಯೋ ಅವರು ಮಾತನಾಡಿ, ``ಬೆಂಗಳೂರು ಕಾರ್ಖಾನೆಯಲ್ಲಿನ ನವೀಕರಣಗಳು ಮತ್ತು ವಿಸ್ತರಣೆಯು ವಿಶ್ವದಲ್ಲಿ ನಮ್ಮ ಸುಧಾರಿತ ಉತ್ಪಾದನಾ ಸೌಲಭ್ಯಗಳಲ್ಲಿ ಒಂದಾಗಿದೆ. ಅತ್ಯಾಕರ್ಷಕವಾದ ಹೊಸ Industry 5.0ತಂತ್ರಜ್ಞಾನಗಳ ಅಳವಡಿಕೆಯು ABB Smart Powerನ ತಂತ್ರಜ್ಞಾನಗಳ ಉತ್ಪಾದನೆ, ಪರೀಕ್ಷೆ ಮತ್ತು ಪೂರೈಕೆಗೆ ಇದು ಸೂಕ್ತವಾದ ತಾಣವಾಗಿದೆ. ತಮ್ಮ ಕಾರ್ಯಾಚರಣೆಗಳಲ್ಲಿ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ವಿದ್ಯುತ್ ದಕ್ಷತೆಯ ಉನ್ನತ ಗುಣಮಟ್ಟವನ್ನು ಅನುಸರಿಸುವ ಗ್ರಾಹಕರಿಗೆ Smart Powerತಂಡವು ಆದರ್ಶಪ್ರಾಯವಾದ ಪಾಲುದಾರಿಕೆಯನ್ನು ಹೊಂದಿದ್ದಾರೆ‘‘ ಎಂದು ತಿಳಿಸಿದರು.
ಇದನ್ನೂ ಓದಿ- ಬಾಲಕಿಯರ ಮೇಲೆ ದೌರ್ಜನ್ಯ ಆರೋಪ.. ಮುರುಘಾ ಶ್ರೀಗಳು ಪೊಲೀಸ್ ವಶಕ್ಕೆ!?
ABB India Ltd ನ Electrification Business ಅಧ್ಯಕ್ಷ ಕಿರಣ್ ದತ್ ಅವರು ಮಾತನಾಡಿ,``ಈ ಸೌಲಭ್ಯದಲ್ಲಿ ನಮ್ಮದೇ ಆದ ಡಿಜಿಟಲ್ ರೂಪಾಂತರದೊಂದಿಗೆ ನಮ್ಮ ಗ್ರಾಹಕರಿಗೆ ನೇರವಾಗಿ ಸ್ಮಾರ್ಟ್ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಪ್ರಯೋಜನಗಳನ್ನು ನಾವು ನೀಡಲು ಸಾಧ್ಯವಾಗುತ್ತದೆ. ಇದು ಭಾರತದಲ್ಲಿ ಡಿಜಿಟಲ್ ಮತ್ತು ಸುಸ್ಥಿರ ಉತ್ಪಾದನೆಯತ್ತ ಆಗುವ ಬದಲಾವಣೆಗಳನ್ನು ಬೆಂಬಲಿಸುತ್ತದೆ ಎಂಬುದನ್ನು ನಾವು ನಂಬುತ್ತೇವೆ. ಸ್ಮಾರ್ಟ್ ಫ್ಯಾಕ್ಟರಿಗಳು ಭಾರತೀಯ ಉತ್ಪಾದನಾ ವಲಯಕ್ಕೆ ಪ್ರಮುಖ ಆಧಾರವಾಗಿವೆ. ಇದೇ ವೇಳೆ, ಗುಣಮಟ್ಟದ ವಿದ್ಯುದ್ದೀಕರಣದ ಉತ್ಪನ್ನಗಳು ಹಾಗೂ ಮುಂದಿನ ಪರಿಹಾರಗಳನ್ನು ಒದಗಿಸುತ್ತದೆ. ಇದು ಸಂಬಂಧಿತ ಕ್ಷೇತ್ರಗಳಾದ್ಯಂತ ದೇಶದ ಮುಂದಿನ ಬೆಳವಣಿಗೆಯನ್ನು ಸಮರ್ಥನೀಯವಾದ ರೀತಿಯಲ್ಲಿ ಬೆಂಬಲಿಸುತ್ತದೆ‘‘ ಎಂದು ತಿಳಿಸಿದರು.
ಈ ಸೌಲಭ್ಯವು ವಿವಿಧ ಉತ್ಪನ್ನಗಳ ರೂಪಾಂತರಗಳಿಗಾಗಿ ಸಂಯೋಜಿತ ಸ್ವಾಯತ್ತ ಪರೀಕ್ಷಾ ಕೋಶಗಳೊಂದಿಗೆ ಹಲವಾರು ರೊಬೊಟ್ ಪ್ರಕಾರಗಳನ್ನು ಹೊಂದಿದೆ. ಕಟ್ಟ ಕಡೆ ಮೈಲಿಯ ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಸಕ್ರಿಯಗೊಳಿಸುವ ಮೂಲಕ ಮಾಪನಶಾಸ್ತ್ರ ಪ್ರಯೋಗಾಲಯವು ಮಾಪನ, ಮಾಪನಾಂಕ ನಿರ್ಣಯ ಮತ್ತು ತಪಾಸಣೆಯಲ್ಲಿ ವಿನ್ಯಾಸದ ವಿಶೇಷಣಗಳು ಹಾಗೂ ಉತ್ಪನ್ನದ ಗುಣಮಟ್ಟವನ್ನು ಹೊಂದಿಸಲು ಪ್ರಮಾಣೀಕರಣವನ್ನು ಖಾತ್ರಿಗೊಳಿಸಯತ್ತದೆ. ಪರೀಕ್ಷಾ ಪ್ರಯೋಗಾಲಯಅನುಸರಣೆಗಾಗಿ ಉತ್ಪಾದಿಸಲಾಗಿರುವ ಉತ್ಪನ್ನಗಳ ಕಠಿಣ ಸಹಿಷ್ಣುತೆ ಪರೀಕ್ಷೆಗಳನ್ನು ನಿರ್ವಹಣೆ ಮಾಡುತ್ತದೆ.
ಇಂಗಾಲದ ತಟಸ್ಥತೆಯನ್ನು ಸಾಧಿಸುವ ನಿಟ್ಟಿನಲ್ಲಿ ABBಯ 2030 ರ ಸುಸ್ಥಿರತೆಯ ಕಾರ್ಯತಂತ್ರಕ್ಕೆ ಅನುಗುಣವಾಗಿ ಈ ಸ್ಮಾರ್ಟ್ ಪವರ್ ಫ್ಯಾಕ್ಟರಿಯು ABB Indiaದ ಸಮಗ್ರ ನೆಲಮಂಗಲದ ಕ್ಯಾಂಪಸ್ ನಲ್ಲಿ ನೆಲೆಗೊಂಡಿದೆ. ಇದನ್ನು Indian Green Building Council (IGBC) ಪ್ಲಾಟಿನಂ ರೇಟಿಂಗ್ ನೊಂದಿಗೆ ಮತ್ತು The Energy and Resources Institute(TERI)ನಿಂದ ಪ್ರಮಾಣೀಕರಿಸಲಾಗಿದೆ.
ಇದನ್ನೂ ಓದಿ- ಬಾಲಕಿಯರ ಮೇಲೆ ದೌರ್ಜನ್ಯ ಆರೋಪ.. ಮುರುಘಾ ಶ್ರೀಗಳು ಪೊಲೀಸ್ ವಶಕ್ಕೆ!?
ABB (ABBN: SIX Swiss Ex) ಒಂದು ಪ್ರಮುಖವಾದ ಜಾಗತಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಹೆಚ್ಚುಉತ್ಪಾದಕ, ಸ್ಥಿರಭವಿಷ್ಯವನ್ನು ಸಾಧಿಸಲು ಸಮಾಜ ಮತ್ತು ಉದ್ಯಮದ ಪರಿವರ್ತನೆಗೆ ಶಕ್ತಿ ನೀಡುತ್ತದೆ. ಸಾಫ್ಟ್ ವೇರ್ ಅನ್ನುವಿದ್ಯುದ್ದೀಕರಣ, ರೊಬೊಟಿಕ್ಸ್, ಆಟೋಮೇಷನ್ ಮತ್ತು ಮೋಷನ್ ಪೋರ್ಟ್ಫೋಲಿಯೋಗೆ ಸಂಪರ್ಕಿಸುವ ಮೂಲಕ ABB ಕಾರ್ಯಕ್ಷಮತೆಯನ್ನು ಹೊಸಹಂತಗಳಿಗೆ ಹೆಚ್ಚಿಸಲು ತಂತ್ರಜ್ಞಾನದ ಗಡಿಗಳನ್ನು ರೂಪಿಸುತ್ತದೆ. 130 ವರ್ಷಗಳ ಹಿಂದಿನ ಶ್ರೇಷ್ಠತೆಯ ಇತಿಹಾಸದೊಂದಿಗೆ ABBಯ ಯಶಸ್ಸನ್ನು 100ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 1,05,000 ಪ್ರತಿಭಾವಂತ ಉದ್ಯೋಗಿಗಳನ್ನು ಹೊಂದಿದೆ. www.abb.com
ABB ಯ Electrification Business Area ವು ವಿದ್ಯುತ್ ಉತ್ಪನ್ನಗಳು ಮತ್ತು ಪರಿಹಾರಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದು 200 ಕ್ಕೂ ಹೆಚ್ಚು ಉತ್ಪಾದನಾ ತಾಣಗಳೊ0ದಿಗೆ 100 ಕ್ಕೂ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ 55,000+ ಉದ್ಯೋಗಿಗಳು ಸುರಕ್ಷಿತ, ಸ್ಮಾರ್ಟ್ ಮತ್ತು ಸಮರ್ಥನೀಯವಾದ ವಿದ್ಯುದ್ದೀಕರಣವನ್ನು ತಲುಪಿಸಲು ಸಮರ್ಪಿತರಾಗಿದ್ದಾರೆ. ABB ಎಬಿಲಿಟಿ ಸಕ್ರಿಯಗೊಳಿಸಿದ ಡಿಜಿಟಲ್ ಪರಿಹಾರಗಳೊಂದಿಗೆ ನಮ್ಮ ಪೋರ್ಟ್ ಫೋಲಿಯೋ ವಿದ್ಯುತ್ ಶಕ್ತಿಯ ಅರಿವನ್ನು ರಕ್ಷಿಸುತ್ತದೆ, ಸಂಪರ್ಕಿಸುತ್ತದೆ ಮತ್ತು ಗರಿಷ್ಠತೆಗೆ ತಲುಪುವಂತೆ ಮಾಡುತ್ತದೆ. ಇದರಲ್ಲಿ ನವೀಕರಿಸಬಹುದಾದ ಏಕೀಕರಣ ಮತ್ತು ಉಪಯುಕ್ತತೆಗಳು, ಉದ್ಯಮ, ಮೂಲಸೌಕರ್ಯ ಮತ್ತು ಸಾರಿಗೆಗಾಗಿ ಚುರುಕಾದ ವಿದ್ಯುತ್ ವಿತರಣೆಗಾಗಿ ಶಕ್ತಿ ಸಂಗ್ರಹಣೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ https://go.abb/electrificationಗೆ ಭೇಟಿ ನೀಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ