ಈ ದೇಶಕ್ಕೆ ಭಾರತದಿಂದ ಸಿಗುತ್ತಿದೆ ಭಾರೀ ಆರ್ಥಿಕ ಸಹಾಯ: ಕೇಂದ್ರ ಬಜೆಟ್ ಮಂಡನೆ ವೇಳೆ ಹೊರಬಿತ್ತು ಮಹತ್ವದ ಮಾಹಿತಿ
Union Budget 2024-25 Important things: ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ.
Union Budget 2024-25 Important things: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದ್ದಾರೆ. ಬಜೆಟ್ ಘೋಷಣೆ ಬಳಿಕ ಬಿಡುಗಡೆಯಾದ ದಾಖಲೆಗಳಿಂದ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ದಾಖಲೆಗಳ ಪ್ರಕಾರ, ಭಾರತ ಸರ್ಕಾರವು ವಿದೇಶಿ ನೆರವಿಗೆ ಭಾರಿ ಮೊತ್ತವನ್ನು ಖರ್ಚು ಮಾಡುತ್ತಿದ್ದು, ಇದರಲ್ಲಿ ಭೂತಾನ್‌ಗೆ ಗರಿಷ್ಠ ಸಹಾಯವನ್ನು ನೀಡಲಾಗುತ್ತಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ. FY 2024-25 ಕ್ಕೆ MEA ಗಾಗಿ ಬಜೆಟ್ ಅಂದಾಜು ₹22,155 ಕೋಟಿ. ಈ ಮೊತ್ತವು FY 2023-24 ರಲ್ಲಿ ನಿಗದಿಪಡಿಸಿದ ₹18,050 ಕೋಟಿಗಿಂತ ಹೆಚ್ಚು, ಆದರೆ ಅದೇ ಆರ್ಥಿಕ ವರ್ಷಕ್ಕೆ ₹29,121 ಕೋಟಿಗಳ ಪರಿಷ್ಕೃತ ಅಂದಾಜಿಗಿಂತ ಕಡಿಮೆ.
ಇದನ್ನೂ ಓದಿ: ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ !ಚಿನ್ನಾಭರಣ ಖರೀದಿದಾರರು ನಿರಾಳ
ಪರಿಷ್ಕೃತ ಅಂದಾಜಿನ ಪ್ರಕಾರ, 2023-24ನೇ ಸಾಲಿನಲ್ಲಿ ಭಾರತ ಸರ್ಕಾರವು ವಿದೇಶಿ ಸರ್ಕಾರಗಳಿಗೆ ₹ 6,541.79 ಕೋಟಿ ಮೊತ್ತದ ನೆರವು ನೀಡಿತ್ತು. ಈ ಮೊತ್ತವು 2023-24ನೇ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ₹ 5,848.58 ಕೋಟಿ ಬಜೆಟ್‌ಗಿಂತ ಹೆಚ್ಚು. 2024-25ರ ಆರ್ಥಿಕ ವರ್ಷದ ಅಂದಾಜು ₹5,667.56 ಕೋಟಿ.
ಭೂತಾನ್ʼಗೆ ಗರಿಷ್ಠ ಸಹಾಯ
2024-2025ರ ಬಜೆಟ್ ಪ್ರಕಾರ, ಭೂತಾನ್ʼಗೆ ₹2,068.56 ಕೋಟಿಯಷ್ಟು ಹೆಚ್ಚಿನ ನೆರವು ಸಿಗುವ ನಿರೀಕ್ಷೆಯಿದೆ. ಈ ಮೊತ್ತ ಕಳೆದ ವರ್ಷದ ₹2,400 ಕೋಟಿಗಿಂತ ಕಡಿಮೆ. 2023-2024ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್ʼನಲ್ಲಿ ₹2,398.97 ಕೋಟಿ ವೆಚ್ಚವಾಗಿದೆ.
ಮಾಲ್ಡೀವ್ಸ್‌ಗೆ ಎಷ್ಟು ಸಹಾಯ?
ಕಳೆದ ವರ್ಷದಂತೆ ಈ ಬಾರಿಯೂ ಮಾಲ್ಡೀವ್ಸ್‌ಗೆ ₹ 400 ಕೋಟಿ ಅನುದಾನ ನೀಡಲಾಗುತ್ತದೆ. ಆದರೆ, 2023-2024ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್‌ನಲ್ಲಿನ ವೆಚ್ಚವು ₹770.90 ಕೋಟಿಗಳಷ್ಟಿತ್ತು, ಇದು ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು. ನೇಪಾಳ ಮತ್ತು ಮಾಲ್ಡೀವ್ಸ್ʼಗೆ ಕ್ರಮವಾಗಿ ₹700 ಕೋಟಿ ಮತ್ತು ₹400 ಕೋಟಿ ನೆರವು ಘೋಷಿಸಲಾಗಿದೆ. ಭಾರತ ಸರ್ಕಾರವು 2023-24ರಲ್ಲಿ ವಿದೇಶಿ ಸರ್ಕಾರಗಳಿಗೆ ₹6,541.79 ಕೋಟಿ ನೀಡಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರಲ್ಲಿ ವಿತ್ತೀಯ ಕೊರತೆಯ ಗುರಿಯನ್ನು 4.9% GDP ಯಲ್ಲಿ ನಿಗದಿಪಡಿಸಿದ್ದಾರೆ.
ಆಫ್ರಿಕಾ ರಾಷ್ಟ್ರಗಳಿಗೆ ₹200 ಕೋಟಿ
ಆಫ್ರಿಕನ್ ರಾಷ್ಟ್ರಗಳಿಗೆ ₹ 200 ಕೋಟಿ, ಬಾಂಗ್ಲಾದೇಶಕ್ಕೆ ₹ 120 ಕೋಟಿ, ಸೆಶೆಲ್ಸ್ʼಗೆ ₹ 40 ಕೋಟಿ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ₹ 30 ಕೋಟಿ ನೆರವು ನೀಡಲಾಗುತ್ತದೆ. 2025-26ರ ವೇಳೆಗೆ ವಿತ್ತೀಯ ಕೊರತೆಯನ್ನು GDP ಯ 4.5% ಕ್ಕೆ ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಭಾರತದಿಂದ ಸಹಾಯ ಪಡೆಯುತ್ತಿರುವ ಟಾಪ್ 10 ದೇಶಗಳು
1. ಭೂತಾನ್: ₹2,068.56 ಕೋಟಿ
2. ನೇಪಾಳ: ₹700 ಕೋಟಿ
2. ಮಾಲ್ಡೀವ್ಸ್: ₹400 ಕೋಟಿ
3. ಮಾರಿಷಸ್: ₹370 ಕೋಟಿ
4. ಮ್ಯಾನ್ಮಾರ್: ₹250 ಕೋಟಿ
5. ಶ್ರೀಲಂಕಾ: ₹245 ಕೋಟಿ
6. ಅಫ್ಘಾನಿಸ್ತಾನ: ₹200 ಕೋಟಿ
7. ಆಫ್ರಿಕನ್ ದೇಶ: ₹200 ಕೋಟಿ
8. ಬಾಂಗ್ಲಾದೇಶ: ₹120 ಕೋಟಿ
9. ಸೀಶೆಲ್ಸ್: ₹40 ಕೋಟಿ
10. ಲ್ಯಾಟಿನ್ ಅಮೆರಿಕ ದೇಶಗಳು: ₹30 ಕೋಟಿ
ಇದನ್ನೂ ಓದಿ: ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್ ದತ್ ಸೆನ್ಸೇಷನಲ್ ಹೇಳಿಕೆ ವೈರಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ