Adani Hindenburg Case: ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮತ್ತೊಮ್ಮೆ ವಿಚಾರಣೆ ನಡೆಸಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಸೆಬಿ ಪರ ವಾದ ಆಲಿಸಿದ ಬಳಿಕ ತನಿಖೆಗೆ ಆಗಸ್ಟ್ 14ರವರೆಗೆ ಕಾಲಾವಕಾಶ ನೀಡಿದೆ. ಇದಕ್ಕೂ ಮುನ್ನ ಸೆಬಿ ತನಿಖೆಗೆ ಆರು ತಿಂಗಳ ಕಾಲ ವಿಸ್ತರಣೆಗೆ ಒತ್ತಾಯಿಸಿತ್ತು. ಆದರೆ, ಇದೀಗ ಈ ಕುರಿತು ಹೊಸ ಅಪ್ಡೇಟ್ ಪ್ರಕಟಗೊಂಡಿದ್ದು, ಸೆಬಿಗೆ ಹೆಚ್ಚಿನ ಅಧಿಕಾರ ನೀಡುವ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ತಜ್ಞರ ಸಮಿತಿ ಹೇಳಿದೆ.  ಇದಲ್ಲದೆ ಸೆಬಿಯ ಜಾರಿ ನೀತಿಯನ್ನು ಮತ್ತಷ್ಟು ಸುಧಾರಿಸುವ ಅವಶ್ಯಕತೆ ಇದೆ ಎಂದೂ ಕೂಡ ಸುಪ್ರೀಂ ಕೋರ್ಟ್ ಹೇಳಿದೆ.


COMMERCIAL BREAK
SCROLL TO CONTINUE READING

ಅನುಮಾನಾಸ್ಪದ ವ್ಯಾಪಾರ ಪ್ರಕರಣಗಳು ಕಂಡುಬಂದಿವೆ
ಹಿಂಡೆನ್‌ಬರ್ಗ್ ವರದಿಯ ಮೊದಲು, ಗ್ರೂಪ್ ಕಂಪನಿಯಲ್ಲಿ ಅನುಮಾನಾಸ್ಪದ ವ್ಯಾಪಾರದ ಪ್ರಕರಣಗಳಿವೆ ಎಂದು ಸುಪ್ರೀಂ ಕೋರ್ಟ್ ಸಮಿತಿ ಹೇಳಿದೆ. ಜನವರಿ 24 ರಂದು ಅದಾನಿ ಗ್ರೂಪ್‌ನ ಹಿಂಡೆನ್‌ಬರ್ಗ್ ವರದಿ ಹೊರಬಂದ ನಂತರ, ಸಮೂಹಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿರುವುದು ಇಲ್ಲಿ ಗಮನಾರ್ಹ. ಆ ವೇಳೆಯಲ್ಲಿ ಅದಾನಿ ಸಮೂಹದ ಷೇರುಗಳನ್ನು ತೆಗೆದುಕೊಂಡ ಹೂಡಿಕೆದಾರರು ಭಾರಿ ನಷ್ಟವನ್ನು ಅನುಭವಿಸಿದ್ದರು. ಇದಾದ ಬಳಿಕ ಎಎಂ ಸಪ್ರೆ ಅವರ ಅಧ್ಯಕ್ಷತೆಯಲ್ಲಿ ಸುಪ್ರೀಂ ಕೋರ್ಟ್‌ನ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.


ಇದನ್ನೂ ಓದಿ-Credit-Debit Card ಗಳಿಂದ ಹಣ ಖರ್ಚು ಮಾಡುವ ನಿಯಮಗಳಲ್ಲಿ ಬದಲಾವಣೆ, ವಿತ್ತ ಸಚಿವಾಲಯದಿಂದ ಹೊಸ ನಿಯಮಗಳು ಜಾರಿ


ಸೆಬಿ ತನಿಖೆಗೆ ಆರು ತಿಂಗಳ ಕಾಲಾವಕಾಶ ಕೋರಿತ್ತು
ಈ ಪ್ರಕರಣದಲ್ಲಿ ಮೇ 15ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಸೆಬಿ ತನಿಖೆಗೆ ಇನ್ನೂ ಆರು ತಿಂಗಳು ಕಾಲಾವಕಾಶ ಕೋರಿತ್ತು. ಆದರೆ ಮೇ 17 ರಂದು ಈ ಕುರಿತು ವಿಚಾರಣೆ ನಡೆಸಿದಾಗ ನ್ಯಾಯಾಲಯವು ಸೆಬಿ ತನಿಖೆಯ ಸಮಯವನ್ನು ಮೂರು ತಿಂಗಳು ವಿಸ್ತರಿಸಿತ್ತು. ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ಮುಂದಿನ ವಿಚಾರಣೆ ಈಗ ಜುಲೈ 11 ರಂದು ನಡೆಯಲಿದೆ. ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಮೂರ್ತಿ ನರಸಿಂಹ ಮತ್ತು ನ್ಯಾಯಮೂರ್ತಿ ಪಾರ್ದಿವಾಲಾ ಅವರ ಪೀಠ ನಡೆಸುತ್ತಿದೆ.


ಇದನ್ನೂ ಓದಿ-RBI Money: 535 ಕೋಟಿ ಹೊತ್ತೋಯ್ಯುತ್ತಿದ್ದ ಲಾರಿ, ದಾರಿಯಲ್ಲಿ ಇದ್ದಕ್ಕಿದಂತೆ ಇಂಜಿನ್ ನಿಂದ ಹೊಗೆ ಬರಲಾರಂಭಿಸಿತು... ಮುಂದೇನಾಯ್ತು?


ಈ ಸಂಪೂರ್ಣ ವಿಷಯದಲ್ಲಿ, ಮಾರ್ಚ್ 2 ರಂದು, ಹಿಂಡೆನ್‌ಬರ್ಗ್ ವರದಿಯಲ್ಲಿ ಅದಾನಿ ಗ್ರೂಪ್‌ನಿಂದ ಯಾವುದೇ ಸೆಕ್ಯುರಿಟೀಸ್ ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ SEBI ಗೆ ನಿರ್ದೇಶಿಸಿದೆ. 2016ರಿಂದ ಅದಾನಿ ಕಂಪನಿಗಳ ಮೇಲೆ ಸೆಬಿ ತನಿಖೆ ನಡೆಸುತ್ತಿದೆ ಎಂಬ ಆರೋಪ ನಿರಾಧಾರ ಎಂದು ಮೇ 14ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಸೆಬಿ ಹೇಳಿದೆ. 2016 ರ ನಂತರ, ಸಮೂಹದ ಯಾವುದೇ ಕಂಪನಿಯನ್ನು ತನಿಖೆ ಮಾಡಲಾಗಿಲ್ಲ ಎಂದು ಸೆಬಿ ಈಗಾಗಲೇ ಸ್ಪಷ್ಟಪಡಿಸಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ