ನವದೆಹಲಿ: ಮಂಗಳವಾರದ ಬೆಳಗಿನ ವಹಿವಾಟಿನಲ್ಲಿ ಅದಾನಿ ಕಂಪನಿಯ ಷೇರುಗಳು ಶೇ.18ರಷ್ಟು ಜಿಗಿತ ಕಂಡಿವೆ. ಕೆಲ ತಿಂಗಳ ಹಿಂಎ ಹೂಡಿಕೆದಾರರಿಗೆ ಭಾರೀ ನಷ್ಟವುಂಟು ಮಾಡಿದ್ದ ಅದಾನಿ ಸಮೂಹದ ಎಲ್ಲಾ ಷೇರುಗಳು ಪುಟಿದೆದ್ದಿವೆ.


COMMERCIAL BREAK
SCROLL TO CONTINUE READING

ಇಂದಿನ ಬೆಳಗಿನ ವಹಿವಾಟಿನಲ್ಲಿ ಅದಾನಿ ಎಂಟರ್ಪ್ರೈಸಸ್‍ನ ಷೇರುಗಳು ಶೇ.18ರಷ್ಟು ಏರಿಕೆ ಕಂಡಿದೆ. ಅದಾನಿ-ಹಿಂಡೆನ್‌ಬರ್ಗ್ ಸಂಶೋಧನಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ಸುಪ್ರೀಂಕೋರ್ಟ್ ಸಮಿತಿಯ ವರದಿ ಹೊರಬಂದ ಬಳಿಕ ಅದಾನಿ ಗ್ರೂಪ್‌ನ ಷೇರುಗಳು ಭರ್ಜರಿ ಏರಿಕೆ ಕಂಡಿವೆ.


ಇದನ್ನೂ ಓದಿ: Economy: ಯಾವ ದಿಕ್ಕಿನತ್ತ ಸಾಗುತ್ತಿದೆ ದೇಶದ ಆರ್ಥಿಕತೆ? ಅಪಾಯ ಎಲ್ಲಿದೆ? ವಿತ್ತ ಸಚಿವಾಲಯದ ವರದಿ ಹೇಳಿದ್ದೇನು?


ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಅದಾನಿ ಎಂಟರ್ ಪ್ರೈಸಸ್‍ನ ಷೇರುಗಳು ಶೇ.13.49ರಷ್ಟು ಏರಿಕೆ ಕಂಡಿದ್ದರೆ, ಅದಾನಿ ವಿಲ್ಮರ್‍ನ ಷೇರು ಶೇ.9.99ರಷ್ಟು ಏರಿಕೆ ಕಂಡಿದೆ. ಅದೇ ರೀತಿ ಅದಾನಿ ಪವರ್ ಶೇ.4.98, ಅದಾನಿ ಟ್ರಾನ್ಸ್‌ಮಿಷನ್ ಶೇ.5, ಅದಾನಿ ಗ್ರೀನ್ ಶೇ.5, ಅದಾನಿ ಟೋಟಲ್ ಗ್ಯಾಸ್ ಶೇ.5, ಅದಾನಿ ಪೋರ್ಟ್ಸ್ ಶೇ.0.73, ಅಂಬುಜಾ ಸಿಮೆಂಟ್ ಶೇ.0.73 ಮತ್ತು ಎನ್‌ಡಿಟಿವಿ ಷೇರು ಶೇ.4.99ಕ್ಕೆ ಏರಿಕೆಯಾಗಿದೆ.


ಬೆಳಗಿನ ವಹಿವಾಟಿನ ಸಮಯದಲ್ಲಿ ಅದಾನಿ ಕಂಪನಿಯ ಕೆಲವು ಷೇರುಗಳು ಅಪ್ಪರ್ ಸರ್ಕ್ಯೂಟ್‍ನಲ್ಲಿ ವಹಿವಾಟು ನಡೆಸುತ್ತಿದ್ದವು. ಕೆಲವು ತಿಂಗಳ ಹಿಂದೆ ಅದಾನಿ ಕಂಪನಿ ಬಗ್ಗೆ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಪ್ರಕಟಿಸಿದ ಬೆನ್ನಲ್ಲೇ ಸಮೂಹದ ಎಲ್ಲಾ ಷೇರುಗಳು ಭಾರೀ ಕುಸಿತ ಕಂಡಿದ್ದವು. ಪರಿಣಾಮ ಹೂಡಿಕೆದಾರರು ಕೈಸುಟ್ಟುಕೊಂಡು ಭಾರೀ ನಷ್ಟ ಅನುಭವಿಸಿದ್ದರು. ಇದೀಗ ಕಳೆದ ಕೆಲವು ದಿನಗಳಿಂದ ಅದಾನಿಯ ಕೆಲವು ಷೇರುಗಳು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಡುತ್ತಿವೆ.      


ಇದನ್ನೂ ಓದಿ: Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.