Affordable Second Hand Cars: ನೀವೂ ಕೂಡ ಕೈಗೆಟುಕುವ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕಾಗಿ ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಲಭ್ಯವಿವೆ. ಅಂತಹ ಒಂದು ಪ್ಲಾಟ್‌ಫಾರ್ಮ್ ಎಂದರೆ ಕಾರ್ಸ್ 24 ಆಗಿದೆ. ಈ ಆನ್‌ಲೈನ್ ಪ್ಲಾಟ್‌ಫಾರ್ಮ್ನಲ್ಲಿ ನೀವು 2 ರಿಂದ 4 ಲಕ್ಷ ರೂಪಾಯಿಗಳಲ್ಲಿ ಉತ್ತಮ ಗುಣಮಟ್ಟದಲ್ಲಿ ಲಭ್ಯವಿರುವ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಬಹುದಾಗಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಐದು ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ:-
2011 ಹ್ಯುಂಡೈ i10 MAGNA:

2011 ಹ್ಯುಂಡೈ i10 MAGNA 1.2 KAPPA2 ಮ್ಯಾನುಯಲ್ ಕಾರಿನ (ಸೆಕೆಂಡ್ ಹ್ಯಾಂಡ್) ಬೆಲೆ 2.72 ಲಕ್ಷ ರೂ. ಎಂದು ಹೇಳಲಾಗುತ್ತಿದೆ. ಈ ಕಾರು 45,437 ಕಿಮೀ ಓಡಿದೆ ಮತ್ತು ಇದು ಮೊದಲ ಮಾಲೀಕರ ಕಾರು. ಇದು ಪೆಟ್ರೋಲ್ ಎಂಜಿನ್ ಕಾರ್ ಆಗಿದ್ದು, ಇದರ ಇಎಂಐ 5,318ರೂ.ಗಳಿಂದ ಪ್ರಾರಂಭವಾಗುತ್ತದೆ.


2011 ರ ಮಾರುತಿ ವ್ಯಾಗನ್ R:
2011 ರ ಮಾರುತಿ ವ್ಯಾಗನ್ Rನ 1.0 VXI ಮ್ಯಾನುವಲ್‌ಗಾಗಿ 2.72 ರೂ. ಎಂದು ಹೇಳಲಾಗುತ್ತಿದೆ. ಈ ಕಾರು ಕೇವಲ 28,971 ಕಿ.ಮೀ ಕ್ರಮಿಸಿದ್ದು ಈ ಮೊದಲ ಮಾಲೀಕರ ಕಾರು. ಇದರಲ್ಲಿ ಪೆಟ್ರೋಲ್ ಎಂಜಿನ್ ಕಾರ್. ಇದರ ಇಎಂಐ ಕೂಡ  5,318ರೂ.ಗಳಿಂದ ಪ್ರಾರಂಭವಾಗುತ್ತದೆ.


ಇದನ್ನೂ ಓದಿ- ಹೋಂಡಾ ಆಕ್ಟಿವಾಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು


2012 ಹ್ಯುಂಡೈ i10 ERA:
2012 ಹ್ಯುಂಡೈ i10 ERA 1.1 IRDE ಮ್ಯಾನುಯಲ್ ಬೆಲೆಯನ್ನು 2.46 ಲಕ್ಷ ರೂ. ಎನ್ನಲಾಗಿದೆ. ಈ ಕಾರು ಇದುವರೆಗೂ 30,492 ಕಿ.ಮೀ ಕ್ರಮಿಸಿದೆ. ಇದು ಮೊದಲ ಮಾಲೀಕರ ಕಾರ್ ಆಗಿದ್ದು, ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದರ ಇಎಂಐ 4,809ರೂ.ನಿಂದ ಆರಂಭವಾಗಲಿದೆ. 


2018 ರ Datsun Redi Go A:
2018 ರ Datsun Redi Go A ಮ್ಯಾನುಯಲ್‌ನ ಬೆಲೆ 2.77 ಲಕ್ಷ ರೂ. ಆಗಿದೆ. ಇದು ಕೇವಲ 22,237 ಕಿ.ಮೀ. ಕ್ರಮಿಸಿದೆ. ಈ ಪೆಟ್ರೋಲ್ ಎಂಜಿನ್ ಕಾರ್ ಫಸ್ಟ್ ಓನರ್ ಕಾರ್ ಆಗಿದೆ. ಇದರ ಇಎಂಐ 5,415ರೂ.ಗಳಿಂದ ಪ್ರಾರಂಭವಾಗಲಿದೆ.


ಇದನ್ನೂ ಓದಿ- Tata Best Selling car: 6 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಕಾರುಗಳಿವು


2013 ಹೋಂಡಾ ಅಮೇಜ್:
2013 ಹೋಂಡಾ ಅಮೇಜ್ 1.2 SMT I VTEC ಮ್ಯಾನುವಲ್‌ ಕಾರಿಗೆ 3.67 ಲಕ್ಷ ರೂ.ಗಳು ಎಂದು ಹೇಳಲಾಗುತ್ತಿದೆ. ಈ ಕಾರ್ 58,239 ಕಿ.ಮೀ ಕ್ರಮಿಸಿದೆ. ಈ ಪೆಟ್ರೋಲ್ ಎಂಜಿನ್ ಕಾರ್ ಫಸ್ಟ್ ಓನರ್ ಕಾರ್ ಆಗಿದೆ. ಇದರ ಇಎಂಐ 7,175 ರೂ.ಗಳಿಂದ ಆರಂಭವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.