ಬೆಂಗಳೂರು: ದೆಹಲಿ ನಂತರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಹೊಸ UPS (United Parcel Services) ಇಂಟರ್ ಕಾಂಟಿನೆಂಟಲ್ ಜಾಗತಿಕ ಸ್ಮಾರ್ಟ್ ಲಾಜಿಸ್ಟಿಕ್ ಸರ್ವೀಸ್ ಪ್ರಾರಂಭವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಿದ್ದರಾಮಯ್ಯನವರು ಗೊಡ್ಡು ಸಂಪ್ರದಾಯಗಳಿಗೆ ಇತಿಶ್ರೀ ಹಾಡಿದರು-ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ


ಇದರಿಂದ ಭಾರತ ಏಷ್ಯಾ, ಯೂರೋಪ್ ಹಾಗೂ ಅಮೇರಿಕಾ ಖಂಡಗಳೊಂದಿಗೆ ಸ್ಮಾರ್ಟ್ ಲಾಜಿಸ್ಟಿಕ್ ವ್ಯಾಪಾರ ಅವಕಾಶ ಪಡೆಯುವ ಮೂಲಕ ಸಂಪರ್ಕ ಸೇತುವೆಯಾಗಲಿದೆ. ಹೊಸ ಬೋಯಿಂಗ್ 747-8 ವಿಮಾನ ಭಾರತದಲ್ಲಿ ಸೇವೆ ಪ್ರಾರಂಭಿಸಿದೆ.


ಈಗಾಗಲೇ ದೆಹಲಿ 2020ರ ಹಣಕಾಸು ವರ್ಷದಲ್ಲಿ 400 ಬಿಲಿಯನ್ ಡಾಲರ್ ರಪ್ತನ್ನು ಭಾರತ ಪೂರೈಸಿದೆ. ಈ ವಿಮಾನ ಸೇವೆ ಸಣ್ಣ ಉದ್ದಿಮೆ, ವ್ಯಾಪಾರಗಳಿಗೆ ಉತ್ತೇಜನ ನೀಡಿಲಿದೆ. ನಮ್ಮ‌ ಗ್ರಾಹಕರಿಗೆ ಉತ್ತಮ‌ ಸೇವೆ ನೀಡುವುದು ನಮ್ಮ ಕರ್ತವ್ಯ ಎಂದು UPS ಭಾತರದ ನಿರ್ದೇಶಕರು ತಿಳಿಸಿದರು.


ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಲ ಮಾರ್ಗದರ್ಶನ ಇರಲಿದೆ : ಸಿಎಂ ಬೊಮ್ಮಾಯಿ


ಈಗಾಗಲೇ ದೇವನಹಳ್ಳಿ ವಿಮಾನ ನಿಲ್ದಾಣ ಗ್ರಾಹಕರಿಗೆ ಉತ್ತಮ ಸೇವೆ, ಸೌಲಭ್ಯ, ಕರೋನಾ ನಿಯಂತ್ರಣ, ಸ್ವಚ್ಛತೆ ಕ್ಷೇತ್ರಗಳಲ್ಲಿ ದೇಶ- ವಿದೇಶಗಳ ಪ್ರಶಸ್ತಿ ಗೌರವಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. 2020ರಲ್ಲಿ ದೆಹಲಿಯಲ್ಲಿ UPS ಸೇವೆ ಪ್ರಾರಂಭವಾಗಿತ್ತು. ಇದೀಗ ಬೆಂಗಳೂರು UPS ಮೂಲಕ ದಕ್ಷಿಣ ಭಾರತದ ಗೇಟ್ ವೇ ಯಾಗಿ, ಇಂಡೋ ಪೆಸಿಪಿಕ್ ವಲಯದ ವಾಣಿಜ್ಯ ಸಂಪರ್ಕ ಕೊಂಡಿಯಾಗಿ ಬೆಂಗಳೂರು ಹಾಗೂ KIA ದಾಪುಗಾಲಿಡ್ತಿವೆ UPS ಸೇವೆ ಮೂಲಕ ಬೆಂಗಳೂರನ್ನು ವಿಶ್ವಕ್ಕೆ ಸ್ವಾಗತಿಸಲು ಖುಷಿಯಾಗ್ತಿದೆ ಎಂದು ಕೆಂಪೇಗೌಡ ಏರ್ಪೋರ್ಟ್ ಅಧಿಕಾರಿ ತಿಳಿಸಿದರು.


ಒಟ್ಟಾರೆ ದೆಹಲಿ ನಂತರ ದಕ್ಷಿಣ ಭಾರತದ ಬೆಂಗಳೂರು ಯೂರೋಪ್ ಮೂಲದ UPS ಸೇವೆ ಒದಗಿಸುತ್ತಿರುವ ದಕ್ಷಿಣ ಭಾರತದ ಗೇಟ್ವೇಯಾಗಿ ಅಭಿವೃದ್ಧಿ ಆಗ್ತಿರುವುದು ನಮ್ಮೆಲ್ಲರ ಹೆಮ್ಮೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.