Drop of Edible Oil : ಪೆಟ್ರೋಲ್-ಡೀಸೆಲ್ ನಂತರ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ! ಎಷ್ಟು ಗೊತ್ತಾ?
ಹಲವೆಡೆ 20, 18, 10, 7 ರೂ.ವರೆಗೆ ಕುಸಿತ ದಾಖಲಾಗಿದೆ. ತಾಳೆ, ನೆಲಗಡಲೆ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ತೈಲಗಳು ಕುಸಿತ ಕಂಡಿವೆ. ಹಬ್ಬ ಹರಿದಿನಗಳಲ್ಲಿ ಖಾದ್ಯ ತೈಲಗಳ ಬೆಲೆಯಲ್ಲಿ ಈ ರೀತಿಯ ಕುಸಿತವು ಸಾಕಷ್ಟು ಪರಿಹಾರವಾಗಿದೆ. ದೀಪಾವಳಿಗೆ ಒಂದು ದಿನ ಮುಂಚಿತವಾಗಿಯೇ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ನೀಡಿತು.
ನವದೆಹಲಿ : ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಶುಕ್ರವಾರ ಖಾದ್ಯ ತೈಲದ ಬೆಲೆ(Edible Oil)ಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳಿದ್ದಾರೆ. ಹಲವೆಡೆ 20, 18, 10, 7 ರೂ.ವರೆಗೆ ಕುಸಿತ ದಾಖಲಾಗಿದೆ. ತಾಳೆ, ನೆಲಗಡಲೆ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ತೈಲಗಳು ಕುಸಿತ ಕಂಡಿವೆ. ಹಬ್ಬ ಹರಿದಿನಗಳಲ್ಲಿ ಖಾದ್ಯ ತೈಲಗಳ ಬೆಲೆಯಲ್ಲಿ ಈ ರೀತಿಯ ಕುಸಿತವು ಸಾಕಷ್ಟು ಪರಿಹಾರವಾಗಿದೆ. ದೀಪಾವಳಿಗೆ ಒಂದು ದಿನ ಮುಂಚಿತವಾಗಿಯೇ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ನೀಡಿತು.
ಬೆಲೆಗಳು ಎಷ್ಟು ಕುಸಿದವು?
ತಾಳೆ ಎಣ್ಣೆ ಬೆಲೆ
ದೆಹಲಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ(Palm oil) - ಲೀಟರ್‌ಗೆ 6 ರೂ.
ಅಲಿಗಢದಲ್ಲಿ ತಾಳೆ ಎಣ್ಣೆ - ಲೀಟರ್‌ಗೆ 18 ರೂ.
ಮೇಘಾಲಯದಲ್ಲಿ ತಾಳೆ ಎಣ್ಣೆ - ಲೀಟರ್‌ಗೆ 10 ರೂ.
ತಮಿಳುನಾಡಿನಲ್ಲಿ ತಾಳೆ ಎಣ್ಣೆ - ಲೀಟರ್‌ಗೆ 5 ರಿಂದ 7 ರೂ.
ತೆಂಗಿನೆಣ್ಣೆ ಬೆಲೆಯಲ್ಲಿ ಸಾಕಷ್ಟು ಕುಸಿತವಾಗಿದೆ
ದೆಹಲಿಯಲ್ಲಿ - ಲೀಟರ್‌ಗೆ 7 ರೂ.
ಮಧ್ಯಪ್ರದೇಶದಲ್ಲಿ - ಲೀಟರ್‌ಗೆ 10 ರೂ.
ಮೇಘಾಲಯದಲ್ಲಿ - ಲೀಟರ್‌ಗೆ 10 ರೂ.
ತಮಿಳುನಾಡಿನಲ್ಲಿ - ಲೀಟರ್‌ಗೆ 10 ರೂ.
ಅಲಿಗಢದಲ್ಲಿ - ಲೀಟರ್‌ಗೆ 5 ರೂ.
ಸೋಯಾಬೀನ್ ಎಣ್ಣೆಯ ಬೆಲೆ ತುಂಬಾ ಕುಸಿದಿದೆ
ದೆಹಲಿಯಲ್ಲಿ - ಲೀಟರ್‌ಗೆ 5 ರೂ.
ಲೂಧಿಯಾನ ಮತ್ತು ಅಲಿಗಢದಲ್ಲಿ - ಲೀಟರ್‌ಗೆ 5 ರೂ.
ಛತ್ತೀಸ್‌ಗಢದಲ್ಲಿ - ಲೀಟರ್‌ಗೆ 11 ರೂ.
ಮಹಾರಾಷ್ಟ್ರದಲ್ಲಿ - ಲೀಟರ್‌ಗೆ 5 ರಿಂದ 7 ರೂ.
ಸೂರ್ಯಕಾಂತಿ ಎಣ್ಣೆ ಬೆಲೆಯೂ ಕುಸಿದಿದೆ
ದೆಹಲಿಯಲ್ಲಿ - ಲೀಟರ್‌ಗೆ 10 ರೂ.
ಒಡಿಶಾದಲ್ಲಿ - ಲೀಟರ್‌ಗೆ 5 ರೂ.
ಮೇಘಾಲಯದಲ್ಲಿ ಗರಿಷ್ಠ ಬೆಲೆ ಲೀಟರ್‌ಗೆ ಸುಮಾರು 20 ರೂಪಾಯಿ ಇಳಿಕೆಯಾಗಿದೆ.
ಇದನ್ನೂ ಓದಿ : Petrol Price Today : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ
ಗಮನಾರ್ಹವಾಗಿ, ತೈಲ ಬೆಲೆಯಲ್ಲಿ ಈ ಇಳಿಕೆ ಅಕ್ಟೋಬರ್ 31 ಮತ್ತು ನವೆಂಬರ್ 3 ರ ನಡುವೆ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ