7th Pay commission : ಸತತ ಮೂರನೇ ತಿಂಗಳಿನಿಂದ ಕೇಂದ್ರ ನೌಕರರಿಗೆ ದೊಡ್ಡ ಹೊಡೆತ ಬಿದ್ದಿದೆ.ಮತ್ತೊಮ್ಮೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI-IW) ಸಂಖ್ಯೆಗಳು ಹೊರಬಂದಿಲ್ಲ.ಮೇ 31 ರಂದು ಬಿಡುಗಡೆಯಾಗಬೇಕಿದ್ದ ಸಂಖ್ಯೆಗಳನ್ನು ತಡೆಹಿಡಿಯಲಾಗಿದೆ.ಲೇಬರ್ ಬ್ಯೂರೋ ಜನವರಿ 2024 ರಿಂದ ಯಾವುದೇ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ.ಹಾಗಾಗಿ ಜುಲೈ 2024 ರಲ್ಲಿ ಏರಿಕೆಯಾಗಬೇಕಗಿರುವ ತುಟ್ಟಿ ಭತ್ಯೆ ಎಷ್ಟು ಎಂದು ಅಂದಾಜು ಮಾಡುವುದು ಕಷ್ಟಕರವಾಗಿರುತ್ತದೆ.ಸುಮಾರು ಎರಡು ದಶಕಗಳಲ್ಲಿ ಕೈಗಾರಿಕಾ ಕಾರ್ಮಿಕರ (CPI-IW) ಹಣದುಬ್ಬರ ಅಂಕಿಅಂಶಗಳನ್ನು ಬಿಡುಗಡೆ ಮಾಡದಿರುವುದು ಇದೇ ಮೊದಲು. 


COMMERCIAL BREAK
SCROLL TO CONTINUE READING

ಮೂಲಗಳನ್ನು ನಂಬುವುದಾದರೆ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅಂಕಿಅಂಶಗಳು ಲೇಬರ್ ಬ್ಯೂರೋ ಬಳಿ ಇಲ್ಲದೇ ಇರುವುದರಿಂದ ಈ ವಿಳಂಬವಾಗುತ್ತಿದೆ.ಇನ್ನು ಜೂನ್ ಅಂತ್ಯದವರೆಗೆ ಈ ಸಂಖ್ಯೆಗಾಗಿ ಕಾಯಬೇಕಾಗಿದೆ.


ಇದನ್ನೂ ಓದಿ :  ಸರ್ಕಾರಿ ನೌಕರರಿಗೆ ಬಿಗ್ ಅಪ್ಡೇಟ್ ! ಜುಲೈ ನಲ್ಲಿ ಮೂಲ ವೇತನದಲ್ಲಿಯೇ ಆಗಲಿದೆ ಭಾರೀ ಹೆಚ್ಚಳ


ಫೆಬ್ರವರಿ ಮತ್ತು ಮಾರ್ಚ್‌ನ ಅಂಕಿಅಂಶಗಳನ್ನು ಕಾರ್ಮಿಕ ಬ್ಯೂರೋ ಇನ್ನೂ ಹೊಂದಿಲ್ಲದಿರುವುದು ಸಂಖ್ಯೆಗಳನ್ನು ಬಿಡುಗಡೆ ಮಾಡಲು ವಿಳಂಬವಾಗುತ್ತಿರುವ  ಹಿಂದಿನ ಕಾರಣ.ಜೂನ್ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಂಖ್ಯೆಗಳಲ್ಲಿ ಅದರ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು ಎಂದು ಹೇಳಲಾಗಿದೆ.ಲೇಬರ್ ಬ್ಯೂರೋ ಡೇಟಾ ಹೊಂದಿಲ್ಲದ ಕಾರಣ ಜುಲೈ 2024 ರಲ್ಲಿ ತುಟ್ಟಿ ಭತ್ಯೆ ಹೆಚ್ಚಾಗುವುದಿಲ್ಲ ಎಂದು ಅರ್ಥವಲ್ಲ.ಆದರೆ, ಲೆಕ್ಕಾಚಾರದಲ್ಲಿ ಸ್ವಲ್ಪ ಬದಲಾವಣೆ ಆಗಬಹುದು. 


ಜನವರಿ 2024ರ ಅಂಕಿಅಂಶಗಳನ್ನು ಫೆಬ್ರವರಿ 28ರಂದು ಬಿಡುಗಡೆ ಮಾಡಲಾಗಿದೆ. ನಂತರ,ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಅಂಕಿ ಅಂಶಗಳು ಹೊರಬಂದಿಲ್ಲ.ಇವುಗಳ ಆಧಾರದ ಮೇಲೆ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ.ಆದರೆ, ಈ ಬಾರಿ ಅಂದಾಜಿಸುವುದೇ ಕಷ್ಟವಾಗುತ್ತಿದೆ.ಜನವರಿ 2024 ರಲ್ಲಿ,ಎಐಸಿಪಿಐ ಸೂಚ್ಯಂಕವು 138.9 ಪಾಯಿಂಟ್‌ಗಳಲ್ಲಿತ್ತು. ಅದರ ಆಧಾರದ ಮೇಲೆ  ತುಟ್ಟಿಭತ್ಯೆ ದರ 50.84 ಕ್ಕೆ ಅಂದರೆ 51 ಪ್ರತಿಶತಕ್ಕೆ ಏರಿದೆ.ಇನ್ನು ಮುಂದಿನ ಸಂಖ್ಯೆಗಳು ಬಂದಾಗ ಮಾತ್ರ ಜುಲೈ 2024 ಕ್ಕೆ ತುಟ್ಟಿಭತ್ಯೆ ಎಷ್ಟು ಹೆಚ್ಚಾಗುತ್ತದೆ ಎಂದು ತಿಳಿಯುತ್ತದೆ. 


ಇದನ್ನೂ ಓದಿ :  Stock Market Crash: ಬರೋಬ್ಬರಿ 31 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು!


ತುಟ್ಟಿಭತ್ಯೆ ಶೂನ್ಯವಾಗುವುದಿಲ್ಲ : 
ಜುಲೈ 2024ರಿಂದ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೂನ್ಯವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಅಂತಹ ಯಾವುದೇ ನಿಯಮವಿಲ್ಲ.ಸರಕಾರವೂ ಈ ರೀತಿಯ ಯೋಚನೆ ಕೈಬಿಟ್ಟಿದೆ.ತುಟ್ಟಿಭತ್ಯೆಯ ಲೆಕ್ಕಾಚಾರವು 50 ಪ್ರತಿಶತವನ್ನು ಮೀರಿ ಮುಂದುವರಿಯುತ್ತದೆ.


ತುಟ್ಟಿಭತ್ಯೆ ಈಗ ಯಾವಾಗ ಬದಲಾಗುತ್ತದೆ ? : 
ಕೇಂದ್ರ ಉದ್ಯೋಗಿಗಳಿಗೆ ಮುಂದಿನ ತುಟ್ಟಿಭತ್ಯೆ ಬದಲಾವಣೆಯು ಜುಲೈ 2024 ರಲ್ಲಿ ನಡೆಯಲಿದೆ.ಸದ್ಯದ ಅಂಕಿಅಂಶಗಳನ್ನು ಗಮನಿಸಿದರೆ ಡಿಎ ಅಂಕ ಶೇ.50.84ಕ್ಕೆ ತಲುಪಿದೆ.ತುಟ್ಟಿಭತ್ಯೆಯಲ್ಲಿ ಮುಂದಿನ ಹೆಚ್ಚಳ ಶೇಕಡಾ 4 ರಷ್ಟಿರಬಹುದು ಎಂದು ಹೇಳಲಾಗುತ್ತದೆ. ಪ್ರಸ್ತುತ ಟ್ರೆಂಡ್ ಪ್ರಕಾರ, ತುಟ್ಟಿಭತ್ಯೆ ಶೇಕಡಾ 51 ಕ್ಕೆ ತಲುಪಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ಅಂಕಿಅಂಶಗಳು ಮುಂದಿನ ಹೆಚ್ಚಳ ಎಷ್ಟು ಎಂಬುದನ್ನು ನಿರ್ಧರಿಸುತ್ತದೆ.ಸದ್ಯದ ಪರಿಸ್ಥಿತಿಗಿಂತ ಶೇ.3ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಅಂದರೆ ತುಟ್ಟಿಭತ್ಯೆ ಶೇ.51ರಿಂದ ಶೇ.53ಕ್ಕೆ ಏರಿಕೆಯಾಗಲಿದೆ.


ಇದನ್ನೂ ಓದಿ : Arecanut Price in Karnataka: ಸಿದ್ದಾಪುರ, ಯಲ್ಲಾಪುರ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ