ನವದೆಹಲಿ: Drop In Air Fare - ನೀವು ಕೂಡ ಮೇಲಿಂದ ಮೇಲೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ (Air Travel), ಈ ಗುಡ್ ನ್ಯೂಸ್ ನಿಮಗಾಗಿ. ಮುಂಬರುವ ದಿನಗಳಲ್ಲಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಇದೆ. ಇತೀಚೆಗಷ್ಟೇ ದೀರ್ಘ ಕಾಲದ ಬಳಿಕ ಮಾರ್ಚ್ 27 ರಿಂದ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿತ್ತು. ಮಾರ್ಚ್ 27 ರಿಂದ ನಿಯಮಿತ ಅಂತರಾಷ್ಟ್ರೀಯ ಪ್ರಯಾಣ ಪುನರಾರಂಭಗೊಂಡಾಗ ವಿಮಾನಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಅಂತಾರಾಷ್ಟ್ರೀಯ ವಿಮಾನಯಾನ ಶೀಘ್ರದಲ್ಲೇ ಆರಂಭವಾಗಲಿದೆ
ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುವುದರ ಸಕಾರಾತ್ಮಕ ಪ್ರಭಾವ ಟಿಕೆಟ್ ದರಗಳ (Air Fare Price) ಮೇಲೆ ಕಾಣಿಸಲಿದೆ ಎಂದು ತಜ್ಞರು ಭಾವಿಸಿದ್ದಾರೆ.  ಇದರಿಂದಾಗಿ ಪ್ರಯಾಣ ದರ ಶೇ.40ರಿಂದ 50ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ವಾಸ್ತವದಲ್ಲಿ ಎರಡು ವರ್ಷಗಳ ಹಿಂದೆ, ಕರೋನಾ ಪ್ರಕರಣಗಳ ಹೆಚ್ಚಳದಿಂದಾಗಿ, ಸುರಕ್ಷತೆಯ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.


ವಿಮಾನಯಾನ ಸಂಸ್ಥೆಗಳು ಹಾರಾಟಗಳನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿವೆ
ಮಾಧ್ಯಮ ವರದಿಗಳ ಪ್ರಕಾರ, ಲುಫ್ಥಾನ್ಸ ಮತ್ತು ಅದರ ಸಮೂಹ ವಾಹಕ ಕಂಪನಿ ಸ್ವಿಸ್ ಮುಂಬರುವ ದಿನಗಳಲ್ಲಿ ವಿಮಾನಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜಿಸಿದೆ. ಇದೇ ವೇಳೆ, ಸಿಂಗಾಪುರ್ ಏರ್ಲೈನ್ಸ್ ಶೇ. 17 ರಷ್ಟು ವಿಮಾನಗಳನ್ನು ಹೆಚ್ಚಿಸಲು ಪರಿಗಣಿಸುತ್ತಿದೆ. ದೇಶೀಯ ವಾಹಕ ಇಂಡಿಗೋ ಮುಂಬರುವ ತಿಂಗಳುಗಳಲ್ಲಿ 100 ಜಾಗತಿಕ ವಿಮಾನಗಳನ್ನು ಪ್ರಾರಂಭಿಸಲು ಯೋಜಿಸಿದೆ.


ಇದನ್ನೂ ಓದಿ-ಮೊದಲನೇ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಗೆ ಪ್ರಚಂಡ ಗೆಲುವು...!


ಶೇ. 100 ರಷ್ಟು ದರಗಳು ಹೆಚ್ಚಾಗಿವೆ (Business News In Kannada)
ಸಂಸ್ಥೆಗಳ ಈ ಎಲ್ಲಾ ನಿರ್ಧಾರಗಳು ವಿಮಾನಯಾನ ದರಗಳ (Air Fare Ticket Price) ಮೇಲೆ ನೇರ ಪ್ರಭಾವ ಬೀರುವುದು ಖಚಿತ ಎನ್ನಲಾಗುತ್ತಿದೆ. ವಾಸ್ತವದಲ್ಲಿ, ದೇಶದಲ್ಲಿ ನಿಯಮಿತ ಅಂತರಾಷ್ಟ್ರೀಯ ವಿಮಾನಗಳ ನಿಷೇಧದ ಸಮಯದಲ್ಲಿ, ಕೆಲವು ದೇಶಗಳೊಂದಿಗೆ ಏರ್ ಬಬಲ್ ಸಿಸ್ಟಮ್ ಅಡಿಯಲ್ಲಿ ಸೀಮಿತ ವಿದೇಶಿ ವಿಮಾನಗಳನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗಿತ್ತು. ಈ ಕಾರಣದಿಂದಾಗಿ, ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ಭಾರತ-ಯುಎಸ್ ಸೇರಿದಂತೆ ಕೆಲವು ಪ್ರಮುಖ ವಿಮಾನ ಮಾರ್ಗಗಳಲ್ಲಿನ ದರಗಳು ಶೇ.100ರಷ್ಟು ಏರಿಕೆಯಾಗಿವೆ.


ಇದನ್ನೂ ಓದಿ-ರೈಲು ಪ್ರಯಾಣಿಕರ ಗಮನಕ್ಕೆ! ಪ್ರಯಾಣಿಕರಿಗೆ ಗುಡ್ ನ್ಯೂಸ್ ಪ್ರಕಟಿಸಿದ ರೈಲು ಇಲಾಖೆ


ಹೆಚ್ಚು ಬೇಡಿಕೆ, ಕಡಿಮೆ ಪೂರೈಕೆಯಿಂದಾಗಿ ದರ ಹೆಚ್ಚಳ
ಅಂತರರಾಷ್ಟ್ರೀಯ ವಿಮಾನಯಾನಗಳ ಕಡಿಮೆ ಆವರ್ತನದಿಂದಾಗಿ, ಹೆಚ್ಚಿನ ಬೇಡಿಕೆ ಮತ್ತು ಕಡಿಮೆ ಪೂರೈಕೆಯ ಬಿಕ್ಕಟ್ಟು ಎದುರಾಗಿತ್ತು. ಇದು ವಿಮಾನಯಾನದ ಮೇಲೆ ಪರಿಣಾಮ ಬೀರಿತ್ತು ಮತ್ತು ಅದು ದ್ವಿಗುಣಗೊಂಡಿತ್ತು. ಮಾರ್ಚ್ 27 ರಿಂದ ವಿಮಾನ ಸೇವೆಯ ಸಾಮಾನ್ಯೀಕರಣದಿಂದಾಗಿ ದರಗಳು ಇಳಿಕೆಯಾಗಲಿವೆ.


ಇದನ್ನೂ ಓದಿ-ರಾಜಧಾನಿಯಲ್ಲಿ ಅಮಾನವೀಯ ಕೃತ್ಯ : ಬೀದಿ ನಾಯಿಗೆ ಥಳಿಸಿ ಆಸಿಡ್ ಹಾಕಲು ಯತ್ನ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.