ಏರ್ ಇಂಡಿಯಾದಿಂದ ಬಂಪರ್ ಆಫರ್..! ಟಿಕೆಟ್ ಬುಕ್ಕಿಂಗ್ ಮೇಲೆ ಭಾರೀ ರಿಯಾಯಿತಿ
Air India Offer : ಏರ್ ಇಂಡಿಯಾ ಪ್ರಯಾಣಿಕರಿಗೆ ಭಾರಿ ರಿಯಾಯಿತಿಯೊಂದಿಗೆ ಸೂಪರ್ ಸುದ್ದಿ ನೀಡಿದೆ. ಕೇವಲ 1470 ರೂಪಾಯಿಗೆ ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನು ಒದಗಿಸುತ್ತಿದೆ. ಅಂತೆಯೇ ಶೇಕಡಾ 30 ರಷ್ಟು ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ.
Air India ticket Offer : ನೀವು ವಿಮಾನದಲ್ಲಿ ಪ್ರಯಾಣಿಸಲು ಪ್ಲ್ಯಾನ್ ಮಾಡಿದ್ದೀರಾ.. ನಿಮ್ಗೆ ಏರ್ ಇಂಡಿಯಾ ಶುಭ ಸುದ್ದಿಯನ್ನು ತಂದಿದೆ. ಸ್ಪೈಸ್ ಜೆಟ್ ನಂತರ.. ಇದೀಗ ಟಾಟಾ ಗ್ರೂಪ್ ಏರ್ ಲೈನ್ಸ್ ಏರ್ ಇಂಡಿಯಾ ಬಂಪರ್ ಆಫರ್ ತಂದಿದೆ. ಈ ಆಫರ್ ಅಡಿಯಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. ಟಿಕೆಟ್ ಬುಕ್ಕಿಂಗ್ ಮೇಲೆ ಶೇ.30ರಷ್ಟು ರಿಯಾಯಿತಿ ಘೋಷಿಸಿದೆ. ಇದನ್ನು ಕಂಪನಿ ಟ್ವೀಟ್ ಮೂಲಕ ಬಹಿರಂಗಪಡಿಸಿದೆ. ಕಡಿಮೆ ದರದಲ್ಲಿ ನಿಮ್ಮ ನೆಚ್ಚಿನ ತಾಣಕ್ಕೆ ಹಾರಾಟ ನಡೆಸಬಹುದು ಎಂದು ಏರ್ ಇಂಡಿಯಾ ಘೋಷಿಸಿದೆ. ಈ ಕೊಡುಗೆಯಲ್ಲಿ, ಆಗಸ್ಟ್ 20 ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಕಂಪನಿಯ ವೆಬ್‌ಸೈಟ್ ಮತ್ತು ಆ್ಯಪ್ ಮೂಲಕ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಆದರೆ ಷರತ್ತುಗಳು ಅನ್ವಯವಾಗುತ್ತವೆ. ಕಂಪನಿಯು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಲ್ಲಿ 96 ಗಂಟೆಗಳ ಮಾರಾಟವನ್ನು ಪ್ರಾರಂಭಿಸಿದೆ. ಪ್ರಯಾಣಿಕರು ರೂ.1470 ರಲ್ಲಿ ಎಕಾನಮಿ ವರ್ಗವನ್ನು ಬುಕ್ ಮಾಡಬಹುದು. ಇದಲ್ಲದೇ ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ಕಿಂಗ್ ರೂ.10,130ರಿಂದ ಆರಂಭವಾಗುತ್ತದೆ.
ಧಾರವಾಡದಲ್ಲಿ 900 ಕೋಟಿ ರೂ. ಹೂಡಿಕೆಗೆ ಮುಂದಾದ ವಿಶ್ವ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್
ಈ ಕೊಡುಗೆಯ ಅಡಿಯಲ್ಲಿ ನೀವು ಆಗಸ್ಟ್ 17 ರಿಂದ ಆಗಸ್ಟ್ 20 ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದರ ಹೊರತಾಗಿ ನೀವು ಈ ಕೊಡುಗೆಯ ಅಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೂಲಕ 1 ಸೆಪ್ಟೆಂಬರ್ 2023 ರಿಂದ 31 ಅಕ್ಟೋಬರ್ 2023 ರವರೆಗೆ ಪ್ರಯಾಣಿಸಬಹುದು.
ಏರ್ ಇಂಡಿಯಾ ಜೊತೆಗೆ, ಸ್ಪೈಸ್ ಜೆಟ್ ಸಹ ಈ ಸಮಯದಲ್ಲಿ ಅಗ್ಗದ ಟಿಕೆಟ್‌ಗಳನ್ನು ಬುಕ್ ಮಾಡುವ ಅವಕಾಶವನ್ನು ನೀಡುತ್ತಿದೆ. ಸ್ಪೈಸ್ ಜೆಟ್ ಪ್ರಯಾಣಿಕರಿಗಾಗಿ ಸ್ವಾತಂತ್ರ್ಯ ದಿನದ ಸೇಲ್ ತಂದಿರುವುದು ಗೊತ್ತೇ ಇದೆ. ಇದರಲ್ಲಿ ವಿಮಾನದ ಟಿಕೆಟ್ ಅನ್ನು ಕೇವಲ 1515 ರೂ.ಗೆ ಬುಕ್ ಮಾಡಬಹುದು. ಈ ಕೊಡುಗೆಯ ಅಡಿಯಲ್ಲಿ ಆಗಸ್ಟ್ 20 ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಟಿಕೆಟ್ ದರವು ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ. ಆದ್ದರಿಂದ ನೀವು ಕೇವಲ ರೂ.1515 ರಲ್ಲಿ ನಿಮ್ಮ ನೆಚ್ಚಿನ ಸೀಟ್ ಅನ್ನು ಆಯ್ಕೆ ಮಾಡಬಹುದು. ಇದರೊಂದಿಗೆ ರೂ.2000 ಟಿಕೆಟ್ ವೋಚರ್ ಕೂಡ ಲಭ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.