Air Travel Guidelines: ವಿಮಾನಯಾನದ ವೇಳೆ ಈ ತಪ್ಪುಗಳನ್ನು ಮಾಡದಿರಿ
Air Travel Guidelines: ಈಗ ನೀವು ವಿಮಾನಯಾನ ಕೈಗೊಳ್ಳುತ್ತಿದ್ದರೆ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ, ಇಲ್ಲದಿದ್ದರೆ ನಿಮ್ಮನ್ನು ವಿಮಾನದಿಂದ ಕೆಳಗಿಳಿಸಬಹುದು. ವಾಸ್ತವವಾಗಿ, ಕರೋನಾದ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ಡಿಜಿಸಿಎ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ನವದೆಹಲಿ: Air Travel Guidelines: ಇನ್ನು ಮುಂದೆ ನೀವು ವಿಮಾನಯಾನ ಕೈಗೊಳ್ಳುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮನ್ನು ವಿಮಾನದಿಂದ ಕೆಳಗಿಳಿಸಬಹುದು. ವಾಸ್ತವವಾಗಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ದೃಷ್ಟಿಯಿಂದ, ಡಿಜಿಸಿಎ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸ ನಿಯಮಗಳನ್ನು ಹೊರಡಿಸಿದೆ. ಇದರ ಅನ್ವಯ ಈಗ, ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವ ಜೊತೆಗೆ, ಕೋವಿಡ್ ಪ್ರೋಟೋಕಾಲ್‌ನ ಇ-ನಕಲನ್ನು ವಿಮಾನಯಾನ ಸಂಸ್ಥೆಗಳಿಂದ ಪ್ರಯಾಣಿಕರಿಗೆ ಕಳುಹಿಸಲಾಗುವುದು. ಇವುಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಡಿಜಿಸಿಎ ಮಾರ್ಗಸೂಚಿ:
ಮಾರ್ಚ್ 13 ರಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕ ಡಿಜಿಸಿಎ (DGCA) ಈ ಆದೇಶವನ್ನು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ನೀಡಿತು. ಇದರ ಅನುಸಾರ ಪ್ರಯಾಣಿಕರು ಆಗಮನ, ನಿರ್ಗಮನ ಮತ್ತು ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆ ಕಳುಹಿಸುವ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಬೇಕಾಗುತ್ತದೆ. ವಿಮಾನದೊಳಗೆ ಯಾವುದೇ ಅಜಾಗರೂಕತೆ ಕಂಡುಬಂದಲ್ಲಿ ಅಥವಾ ಮಾಸ್ಕ್ (Mask) ಅನ್ನು ಸರಿಯಾಗಿ ಧರಿಸದಿದ್ದರೆ ಅಥವಾ ಕರೋನಾ ಹಿನ್ನಲೆಯಲ್ಲಿ ಹೊರಡಿಸಿರುವ ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಅಂತಹವರನ್ನು ವಿಮಾನದಿಂದ ಕೆಳಗಿಳಿಸಲಾಗುವುದು ಎಂದು ಡಿಜಿಸಿಎ ಹೇಳುತ್ತದೆ.
ಇದನ್ನೂ ಓದಿ - DGCA Latest Update - Check-In Bag ಇಲ್ಲದೆ ವಿಮಾನ ಯಾತ್ರೆ ಕೈಗೊಳ್ಳುವವರಿಗೆ ಅಗ್ಗದ ದರದಲ್ಲಿ ಟಿಕೆಟ್
ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸುವುದು ಕಡ್ಡಾಯ:
ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಸಮಯದಿಂದ ಗಮ್ಯಸ್ಥಾನವನ್ನು ತಲುಪಿ ವಿಮಾನ ನಿಲ್ದಾಣದಿಂದ ಹೊರ ಹೋಗುವವರೆಗೂ ಪ್ರತಿಯೊಬ್ಬರಿಗೂ ಮಾಸ್ಕ್ (Mask) ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಡಿಜಿಸಿಎಯ ಹೊಸ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಮೂಗು ಮತ್ತು ಬಾಯಿಯನ್ನು ಮಾಸ್ಕ್ ನಿಂದ ಸಂಪೂರ್ಣವಾಗಿ ಮುಚ್ಚಿರಬೇಕು. ಇದನ್ನು ಪರಿಶೀಲಿಸಲು ಸಿಐಎಸ್ಎಫ್ ಮತ್ತು ಇತರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ ಪ್ರಯಾಣಿಕನು ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದರೆ, ಪ್ರಯಾಣಿಕನನ್ನು 'ಅಶಿಸ್ತಿನ ಪ್ರಯಾಣಿಕ' (Unruly Passenger) ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ - Covid-19 Vaccine ಹಾಕಿಸಿಕೊಂಡ ಪೈಲಟ್ ಗಳು 48 ಗಂಟೆ ವಿಮಾನ ಚಲಿಸುವ ಹಾಗಿಲ್ಲ: DGCA
ನೋ ಫ್ಲೈ ಪಟ್ಟಿಗೆ ಸೇರ್ಪಡೆ:
ಕೆಲವು ದಿನಗಳ ಹಿಂದೆ ಬಂದ ಎರಡನೇ ಆದೇಶದಲ್ಲಿ ಹಾರಾಟದ ಸಮಯದಲ್ಲಿ ಫೇಸ್ ಮಾಸ್ಕ್ ಧರಿಸದ ವಾಯು ಪ್ರಯಾಣಿಕರನ್ನು ಮುಂದಿನ ಪ್ರಯಾಣಕ್ಕಾಗಿ 'ನೋ ಫ್ಲೈ ಲಿಸ್ಟ್' (No Fly List) ನಲ್ಲಿ ಸೇರಿಸಲಾಗುವುದು ಎಂದು ಡಿಜಿಸಿಎ ತಿಳಿಸಿದೆ. ಅಂದರೆ ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ ಯಾವುದೇ ವಿಮಾನಯಾನ ಸಂಸ್ಥೆ ಪ್ರಯಾಣಿಕನನ್ನು ಈ ಪಟ್ಟಿಗೆ ಸೇರಿಸಲಾಗಿದ್ದರೂ ಉಳಿದ ವಿಮಾನಯಾನ ಸಂಸ್ಥೆಗಳು ಸಹ ಆ ಪ್ರಯಾಣಿಕರನ್ನು ನೋ ಫ್ಲೈ ಪಟ್ಟಿಯಲ್ಲಿ ಸೇರಿಸುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.