Flight Ticket Offer : ಇಂಡಿಗೋ ಮತ್ತು ವಿಸ್ತಾರಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಅಗ್ಗದ ವಿಮಾನ ಟಿಕೆಟ್‌ಗಳನ್ನು ಒದಗಿಸುತ್ತಿವೆ. ಇದಕ್ಕಾಗಿ ಜನವರಿ 11 ರವರೆಗೆ ಅಂದರೆ ಇಂದಿನವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ವಿಸ್ತಾರಾ ತನ್ನ 9 ನೇ ವಾರ್ಷಿಕೋತ್ಸವದ  ಸೇಲ್ ಅನ್ನು ಹೊರ ತಂದಿದೆ. ಹೊಸ ವರ್ಷದ ಸೇಲ್ ಅಡಿಯಲ್ಲಿ ಗ್ರಾಹಕರಿಗೆ ಇಂಡಿಗೋ ಭಾರೀ ಆಫರ್ ನೀಡಿದೆ. ಈ ಸೇಲ್ ನಲ್ಲಿ ಕೇವಲ 1799 ರೂಪಾಯಿಗೆ ಟಿಕೆಟ್ ಬುಕ್ ಮಾಡಬಹುದಾಗಿದೆ.  


COMMERCIAL BREAK
SCROLL TO CONTINUE READING

ಜನವರಿ 11 ರವರೆಗೆ ಇಂಡಿಗೋ  ಸೇಲ್ : 
ವಿಮಾನಯಾನ ಸಂಸ್ಥೆಯು ಹೊಸ ವರ್ಷದಂದು ವಿಶೇಷ ಸೇಲ್ ಅನ್ನು ತಂದಿದ್ದು, ಇದರ ಅಡಿಯಲ್ಲಿ ಅಗ್ಗದ ಬೆಲೆಯಲ್ಲಿ ವಿಮಾನಯಾನ ಮಾಡಬಹುದಾಗಿದೆ. ಇಂಡಿಗೋ ಈ ವಿಚಾರವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇಂಡಿಗೋ ಸೇಲ್ ಜನವರಿ 9 ರಿಂದ ಜನವರಿ 11 ರವರೆಗೆ ನಡೆಯಲಿದೆ. ದೇಶೀಯ ಮಾರ್ಗಗಳ ಟಿಕೆಟ್‌ಗಳು  1799 ರೂಪಾಯಿಯಿಂದ ಪ್ರಾರಂಭವಾಗುತ್ತವೆ. 


ಇದನ್ನೂ ಓದಿ : ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಬೇಕೆ? ಇಲ್ಲಿದೆ 5 ಸುಲಭ ಮಾರ್ಗಗಳು..!


ವಿಸ್ತಾರದಿಂದಲೂ ಆಫರ್ : 
ಇಂಡಿಗೋ ಹೊರತುಪಡಿಸಿ, ವಿಸ್ತಾರಾ ಸಹ ಅಗ್ಗದ ದರದಲ್ಲಿ ವಿಮಾನ ಪ್ರಯಾಣದ ಅವಕಾಶವನ್ನು ನೀಡುತ್ತಿದೆ. ಸಂಸ್ಥೆಗೆ 9 ವರ್ಷಗಳು ಪೂರ್ಣಗೊಂಡ  ಹಿನ್ನೆಲೆಯಲ್ಲಿ ವಿಸ್ತಾರಾ ಆನಿವರ್ಸರಿ ಸೇಲ್ ಅನ್ನು ತಂದಿದೆ. ಇದರಲ್ಲಿ ಜನವರಿ 11 ರಂದು ಅಗ್ಗದ ಬೆಲೆಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದರಲ್ಲಿ ಎಕಾನಮಿ,   ಪ್ರೀಮಿಯಂ ಮತ್ತು ಬುಸಿನೆಸ್ ವಿಭಾಗದ ಟಿಕೆಟ್‌ಗಳ ಮೇಲೆ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ಬಳಸ್ಕೊಂಡು ಪ್ರಯಾಣಿಕರು 30 ಸೆಪ್ಟೆಂಬರ್ 2024 ರವರೆಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. 


ವಿಸ್ತಾರ ಟಿಕೆಟ್ ದರ ಎಷ್ಟು? :
ವಿಸ್ತಾರಾ ಮಾರಾಟದಲ್ಲಿ ದೇಶೀಯ ವಿಮಾನ ದರಗಳು  1809 ರೂಪಾಯಿಯಿಂದ   ಪ್ರಾರಂಭವಾಗುತ್ತವೆ.ಪ್ರೀಮಿಯಂ ವರ್ಗದಲ್ಲಿ 2309 ರೂ. ಮತ್ತು  ಬಿಸಿನೆಸ್ ವರ್ಗದಲ್ಲಿ 9909 ರೂಪಾಯಿಯಿಂದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತದೆ.


ಇದನ್ನೂ ಓದಿ :  Gold-Silver Price Today : ದಿನೇ ದಿನೇ ಕಡಿಮೆಯಾಗುತ್ತಲೇ ಇದೆ ಬಂಗಾರದ ಬೆಲೆ ! ಚಿನ್ನ ಖರೀದಿಗೆ ಇದೇ ಬೆಸ್ಟ್ ಟೈಮ್


ಏರ್ ಇಂಡಿಯಾ ಎಕ್ಸ್ ಪ್ರೆಸ್ :
ಇದಲ್ಲದೇ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕೂಡಾ ಅಗ್ಗದ ಬೆಲೆಗೆ ಟಿಕೆಟ್ ಗಳನ್ನು ನೀಡುತ್ತಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಗ್ರಾಹಕರಿಗೆ 'ಟೈಮ್ ಟು ಟ್ರಾವೆಲ್' ಆಫರ್ ಅನ್ನು ತಂದಿದ್ದು, ಇದರ ಅಡಿಯಲ್ಲಿ ಜನವರಿ 11 ರವರೆಗೆ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಸೆಪ್ಟೆಂಬರ್ 30 ರವರೆಗಿನ ಪ್ರಯಾಣಕ್ಕೆ ಇಂದಿನೊಳಗೆ ಟಿಕೆಟ್ ಬುಕ್ ಮಾಡಿಕೊಳ್ಳಬೇಕು. ಏರ್ ಇಂಡಿಯಾ ಗ್ರಾಹಕರಿಗೆ ಕೇವಲ 1799 ರೂ.ಗೆ ವಿಮಾನ ಟಿಕೆಟ್ ಸೌಲಭ್ಯ ಒದಗಿಸುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ