Airtel Payments Bank FD : ಹಿರಿಯ ನಾಗರಿಕರು ಯಾವಾಗಲೂ ಉಳಿತಾಯಕ್ಕಾಗಿ ನಿಶ್ಚಿತ ಠೇವಣಿ (ಎಫ್‌ಡಿ) ಮಾಡುವುದನ್ನು ನೀವು ನೋಡಿರಬಹುದು. ಈಗ ಬ್ಯಾಂಕ್ ಗಳು ಇತರ ಉಳಿತಾಯ ಆಯ್ಕೆಗಳನ್ನು ಪರಿಚಯಿಸಿದ ನಂತರ, ಜನ ಇತರ ಉಳಿತಾಯ ಆಯ್ಕೆಗಳನ್ನು ಸಹ ಪ್ರಯತ್ನಿಸುತ್ತಿದ್ದಾರೆ. ಆದರೆ ಇನ್ನೂ ಅನೇಕ ಜನ ಎಫ್‌ಡಿ ಪಡೆಯುವ ಕ್ರೇಜ್ ಇದೆ. ನೀವು ಎಫ್‌ಡಿ ಮಾಡಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ.


COMMERCIAL BREAK
SCROLL TO CONTINUE READING

ಇಂಡಸ್‌ಇಂಡ್ ಬ್ಯಾಂಕ್‌ನೊಂದಿಗೆ ಒಪ್ಪಂದ


ಹೌದು, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್‌ಡಿ ಸೌಲಭ್ಯವನ್ನು ಆರಂಭಿಸಿದೆ. ಇದಕ್ಕಾಗಿ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಇಂಡಸ್‌ಇಂಡ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ, ಬ್ಯಾಂಕ್ ಎಫ್‌ಡಿ ಮೇಲೆ ಶೇಕಡಾ 6.5 ರಿಂದ 7 ರಷ್ಟು ಬಡ್ಡಿಯನ್ನು ನೀಡುತ್ತದೆ. ಪ್ರಸ್ತುತ, ಇತರ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಎಫ್‌ಡಿಯಲ್ಲಿ ಗರಿಷ್ಠ ಶೇ.6 ರವರೆಗೆ ಬಡ್ಡಿಯನ್ನು ನೀಡುತ್ತಿದೆ.


ಇದನ್ನೂ ಓದಿ : ಕಳೆದು ಹೋದ PAN Card ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!


ಮ್ಯಾಚುರಿಟಿ ಮೊದಲು ಹಿಂಪಡೆದರೆ ಯಾವುದೇ ದಂಡವಿಲ್ಲ


ಅಗತ್ಯ ಅಥವಾ ಇತರ ಕಾರಣಗಳಿಂದ ನೀವು ಮ್ಯಾಚುರಿಟಿ ಮೊದಲು ಎಫ್‌ಡಿ ಹಣವನ್ನು  ಹಿಂಪಡೆದರು ಸಹ, ಬ್ಯಾಂಕ್ ಯಾವುದೇ ದಂಡವನ್ನು ವಿಧಿಸುವುದಿಲ್ಲ. ಬ್ಯಾಂಕ್ ನೀಡಿದ ಮಾಹಿತಿಯಲ್ಲಿ, ಎಫ್‌ಡಿ ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್ ಪೋರ್ಟ್‌ಫೋಲಿಯೊವನ್ನು ಬಲಪಡಿಸಿದೆ ಎಂದು ಹೇಳಲಾಗಿದೆ.


ಹಿರಿಯ ನಾಗರಿಕರಿಗೆ ಶೇ.7ರಷ್ಟು ಬಡ್ಡಿ ಸಿಗಲಿದೆ


ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಗ್ರಾಹಕರು 500 ರೂ.ನಿಂದ 1,90,000 ರೂ.ವರೆಗೆ ಮೊತ್ತವನ್ನು ಠೇವಣಿ ಮಾಡಬಹುದು. ಇದರ ಮೇಲೆ ನಿಮಗೆ ವಾರ್ಷಿಕವಾಗಿ ಶೇ.6.5 ರವರೆಗೆ ಬಡ್ಡಿಯನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರು ಎಲ್ಲಾ ರೀತಿಯ ಸ್ಥಿರ ಠೇವಣಿಗಳ ಮೇಲೆ ಶೇಕಡಾ 0.5 ರಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ.


ಇದನ್ನೂ ಓದಿ : 7th Pay Commission : ಈ ತಿಂಗಳ ಕೇಂದ್ರ ನೌಕರರ ಸಂಬಳದಲ್ಲಿ ಹೆಚ್ಚಳ : ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ


ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಗ್ರಾಹಕರು ತನ್ನ ಅವಧಿ ಮುಗಿಯುವ ಮೊದಲು ಎಫ್‌ಡಿಯನ್ನು ಹಿಂಪಡೆಯಬಹುದು ಎಂದು ಬ್ಯಾಂಕ್ ಹೇಳಿದೆ. ಇದಕ್ಕಾಗಿ ಅವರಿಂದ ಯಾವುದೇ ದಂಡ ಅಥವಾ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಎಫ್‌ಡಿ ಸೌಲಭ್ಯವು ಒಂದು, ಎರಡು ಅಥವಾ ಮೂರು ವರ್ಷಗಳವರೆಗೆ ಲಭ್ಯವಿರುತ್ತದೆ ಎಂದು ಇಂಡಸ್‌ಇಂಡ್ ಬ್ಯಾಂಕ್ ಹೇಳಿದೆ. ಗ್ರಾಹಕರು ಒಂದೇ ಬಾರಿಗೆ ಅನೇಕ ಎಫ್‌ಡಿ ಗಳನ್ನು ಮಾಡಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.