Airtel Xstream Fiber New Plans Announced: ಸ್ಮಾರ್ಟ್‌ಫೋನ್‌ಗಳಲ್ಲಿ ಎಲ್ಲರೂ ಇಂಟರ್ನೆಟ್  ಸೌಲಭ್ಯ ಹೊಂದಿರುವುದು ಸಾಮಾನ್ಯ.  ಆದರೆ ನಮ್ಮ ಮನೆಗಳಲ್ಲಿ, ಚಲನಚಿತ್ರಗಳನ್ನು ವೀಕ್ಷಿಸಲು ಅಥವಾ ಡೌನ್‌ಲೋಡ್ ಮಾಡಲು, ವೈಫೈ ಬಳಸುವುದು ಉತ್ತಮ ಆಯ್ಕೆಯಾಗಿದೆ. ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿರುವ ವೈ-ಫೈ ವೇಗದಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ  ಅಥವಾ ನಿಮ್ಮ ಮನೆಗೆ ಉತ್ತಮ ವೈಫೈ ಸಂಪರ್ಕದ ಹುಡುಕಾಟದಲ್ಲಿದ್ದಾರೆ. ದೇಶದ ಖ್ಯಾತ ಟೆಲಿಕಾಂ ಆಪರೇಟರ್ ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಸೇವೆಯಾದ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಅಡಿ ಮೂರು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. . ಈ ಮೂರು ಯೋಜನೆಗಳು ಅತ್ಯಂತ ಕೈಗೆಟುಕುವ ದರದ ಯೋಜನೆಗಳಾಗಿವೆ ಮತ್ತು ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

COMMERCIAL BREAK
SCROLL TO CONTINUE READING

ಮಾರುಕಟ್ಟೆಗೆ ಮೂರು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ ಏರ್ಟೆಲ್
ಏರ್‌ಟೆಲ್ ತನ್ನ ಬಳಕೆದಾರರಿಗೆ ಮೂರು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ, ಈ ಯೋಜನೆಗಳು ಕಡಿಮೆ ಬೆಲೆಯಲ್ಲಿ ಅದ್ಭುತ ಪ್ರಯೋಜನಗಳನ್ನು ನೀಡುವ ಯೋಜನೆಗಳಾಗಿವೆ. ಭಾರತಿ ಏರ್‌ಟೆಲ್‌ನ ಸಿಇಒ ವೀರ್ ಇಂದರ್ ನಾಥ್ ಅವರು ಭಾರತದ ಮನರಂಜನಾ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಗಳು ಹೆಚ್ಚಿನ ವೇಗದ ಡೇಟಾ ಮತ್ತು ಕಡಿಮೆ ವೆಚ್ಚದಲ್ಲಿ ಅನೇಕ OTT ಚಂದಾದಾರಿಕೆಗಳೊಂದಿಗೆ ಹೆಚ್ಚಿನ ಪ್ರಯೋಜನಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿವೆ ಎಂದು ಅವರು ಹೇಳಿದ್ದಾರೆ.

ಏರ್‌ಟೆಲ್ ರೂ 1599ರ ಯೋಜನೆ
ಬಿಡುಗಡೆ ಮಾಡಲಾದ ಮೂರು ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ, ಈ ಯೋಜನೆಯು ಅತ್ಯಂತ ದುಬಾರಿಯಾಗಿದೆ ಮತ್ತು ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯಲ್ಲಿ, ನಿಮಗೆ 3.3TB ಅಥವಾ 3300GB ಡೇಟಾವನ್ನು ನೀಡಲಾಗುತ್ತಿದೆ, ಇದರ ವೇಗವು 300Mbps ಆಗಿದೆ. ಈ ಡೇಟಾವನ್ನು ಮಾಸಿಕ ಆಧಾರದ ಮೇಲೆ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, ಡೇಟಾದ ಜೊತೆಗೆ, ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಗಳನ್ನು ಸಹ ನೀಡಲಾಗುತ್ತಿದೆ. ಅಷ್ಟೇ ಅಲ್ಲ ಈ ಚಂದಾದಾರಿಕೆಗಳೊಂದಿಗೆ, Airtel Xstream Premium ನ ಒಂದೇ ಲಾಗಿನ್ ಮೂಲಕ, SonyLIV, Eros Now, Lionsgate Play, ManoramaMax, Shemaroo ಮತ್ತು Shorts TV ನಂತಹ 14 OTT ಪ್ಲಾಟ್‌ಫಾರ್ಮ್‌ಗಳಿಗೆ ನಿಮಗೆ ಪ್ರವೇಶವನ್ನು ನೀಡಲಾಗುತ್ತಿದೆ.


ಇದನ್ನೂ ಓದಿ-Facebook Messenger Scam 2022: 'ಈ ವಿಡಿಯೋದಲ್ಲಿ ನೀವಿದ್ದೀರಾ?' ಈ ಪ್ರಶ್ನೆಗೆ ಉತ್ತರ ನಿಮ್ಮನ್ನು ಬೀದಿಗೆ ತರಬಹುದು, ಎಚ್ಚರ!

ಏರ್‌ಟೆಲ್ ರೂ 1099ರ ಬ್ರಾಡ್‌ಬ್ಯಾಂಡ್ ಯೋಜನೆ
1099 ರೂ.ಗಳ ಈ ಯೋಜನೆಯಲ್ಲಿ, ಏರ್‌ಟೆಲ್ ಪ್ರತಿ ತಿಂಗಳು 3300GB ಅಂದರೆ 3.3TB ಡೇಟಾವನ್ನು 200Mbps ವೇಗದಲ್ಲಿ ನೀಡುತ್ತಿದೆ. Amazon Prime Video, Disney + Hotstar, Eros Now, SonyLIV, Lionsgate Play, Shemaroo ಮುಂತಾದ ಹಲವು ಹೆಸರುಗಳು ಶಾಮೀಲಾಗಿರುವ ಈ ಯೋಜನೆಯಲ್ಲಿ ನಿಮಗೆ ಒಟ್ಟು 16 OTT ಪ್ಲಾಟ್ಫಾರ್ಮ್ ಗಳ ಚಂದಾದಾರಿಕೆಗಳನ್ನು ನೀಡಲಾಗುತ್ತಿದೆ. ಈ ಯೋಜನೆಯು Netflix ಚಂದಾದಾರಿಕೆಯೊಂದಿಗೆ ಬರುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಆಫರ್ ಅನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ, ಇದರಲ್ಲಿ 350 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ಸಹ ನೀಡಲಾಗುತ್ತಿದೆ. ಆದರೆ, ನೀವು ಸೆಟ್-ಟಾಪ್ ಬಾಕ್ಸ್‌ಗಳ ಬಗ್ಗೆ ಹೇಳುವುದಾದರೆ, ಈ ಟಿವಿ ಚಾನೆಲ್‌ಗಳ ಲಾಭವನ್ನು ಪಡೆಯಲು, ನೀವು 2 ಸಾವಿರ ರೂಪಾಯಿಗಳನ್ನು ಪಾವತಿಸಿ ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್ ತೆಗೆದುಕೊಳ್ಳಬೇಕು.


ಇದನ್ನೂ ಓದಿ-Aadhaar Card Real or Fake: ಆಧಾರ್ ಕಾರ್ಡ್ ನಕಲಿಯೇ ಅಥವಾ ಅಸಲಿಯೇ? ಈ ರೀತಿ ಸುಲಭವಾಗಿ ಪತ್ತೆ ಹಚ್ಚಿ

ಏರ್‌ಟೆಲ್ ರೂ 699ರ ಬ್ರಾಡ್‌ಬ್ಯಾಂಡ್ ಯೋಜನೆ
ಈ ಪಟ್ಟಿಯಲ್ಲಿರುವ ಅತ್ಯಂತ ಅಗ್ಗದ ಯೋಜನೆ ಇದಾಗಿದೆ, ಇದು ರೂ 699 ಗೆ ಆಕರ್ಷಕ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ನಿಮಗೆ 3.3TB ಅಂದರೆ 40Mbps ವೇಗದಲ್ಲಿ ಪ್ರತಿ ತಿಂಗಳು 3300GB ಡೇಟಾವನ್ನು ನೀಡಲಾಗುತ್ತಿದೆ. ಅಷ್ಟೇ ಅಲ್ಲ ಈ ಯೋಜನೆಯು 15 OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಬರುತ್ತಿದೆ. OTT ಪ್ರಯೋಜನಗಳಲ್ಲಿ Netflix ಮತ್ತು Amazon Prime ವೀಡಿಯೊಗೆ ಪ್ರವೇಶವನ್ನು ನೀಡಲಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ. ನೀವು ಈ ಎಲ್ಲಾ ಯೋಜನೆಗಳನ್ನು ಕಂಪನಿಯ ವೆಬ್ ಸೈಟ್ ಮೂಲಕ ಖರೀದಿಸಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.