ಅಕ್ಷಯ ತೃತೀಯ ಎಂಬುದು ಹಿಂದೂ ಧರ್ಮದಲ್ಲಿ ಆಚರಿಸುವ ಒಂದು ಭಾವನಾತ್ಮಕ ಹಬ್ಬ. ಹಿಂದೂ ಕ್ಯಾಲೆಂಡರ್‌ ಪ್ರಕಾರ ಈ ಹಬ್ಬ ಮೇ 3 ರಂದು ಆಚರಿಸಲ್ಪಡಲಿದೆ. ಅಕ್ಷಯ ತೃತೀಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತು ಈ ದಿನ ಚಿನ್ನವನ್ನು ಖರೀದಿಸಿದರೆ ಶುಭಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಜೊತೆಗೆ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಿದರೆ ಸಮೃದ್ಧಿಯನ್ನು ತರುತ್ತದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ.


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಕೊರೊನಾ ಪ್ರಭಾವದಿಂದ ಚಿನ್ನ ಖರೀದಿ ಆನ್‌ಲೈನ್‌ ಮೂಲಕ ನಡೆಯುತ್ತಿದೆ. ಇನ್ನು ಡಿಜಿಟಲ್‌ ಫ್ಲ್ಯಾಟ್‌ಫಾರ್ಮ್‌ ಚಿನ್ನ ಖರೀದಿಗೆ ಯೋಗ್ಯ ಎಂಬುದು ಸಾಬೀತಾಗಿದೆ.  


ಇದನ್ನು ಓದಿ: Gold-Silver Price: ಚಿನ್ನ ಪ್ರಿಯರಿಗೆ ಶಾಕ್‌: ಮತ್ತೆ ಏರಿಕೆ ಕಂಡ ಬಂಗಾರದ ಬೆಲೆ


ಡಿಜಿಟಲ್ ಗೋಲ್ಡ್‌ ಎಂದರೆ: 
ಡಿಜಿಟಲ್ ಗೋಲ್ಡ್‌ ಎಂದರೆ ಹೂಡಿಕೆ ಸಾಧನವಾಗಿದ್ದು, ಖರೀದಿದಾರರಿಗೆ 24 ಕ್ಯಾರಟ್, 999.9 ಶುದ್ಧ ಚಿನ್ನವನ್ನು ಖರೀದಿಸಲು ಅವಕಾಶ ನೀಡುತ್ತದೆ. ಅಷ್ಟೇ ಅಲ್ಲದೆ ನಂತರ ಅದನ್ನು ಸುರಕ್ಷಿತ ವಾಲ್ಟ್‌ನಲ್ಲಿ ಠೇವಣಿ ಮಾಡುವ ಅವಕಾಶವೂ ಇದೆ. ಈ ಚಿನ್ನಗಳನ್ನು 24 ಕ್ಯಾರಟ್‌, 999.9 ಶುದ್ಧ ಚಿನ್ನದ ನಾಣ್ಯಗಳು ಮತ್ತು ಚಿನ್ನದ ಬಾರ್‌ಗಳಿಗೆ ವ್ಯಾಪಾರ ಸಹ ಮಾಡಬಹುದು.


ಡಿಜಿಟಲ್ ಗೋಲ್ಡ್‌ನ್ನು ಎಲ್ಲಿ ಖರೀದಿಸಬಹುದು:
ಡಿಜಿಟಲ್ ಗೋಲ್ಡ್‌ನ್ನು ಗೂಗಲ್‌ ಪೇ, ಫೋನ್‌ಪೇ ಮೂಲಕ ಖರೀದಿ ಮಾಡಬಹುದು. ಜೊತೆಗೆ ಪೇಟಿಎಂ ಮನಿ, ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್ ಮುಂತಾದ ಬ್ರೋಕರೇಜ್ ವ್ಯವಹಾರಗಳಿಂದ ಸಹ ಖರೀದಿಸಬಹುದು


ಗೂಗಲ್‌ ಪೇ ಮೂಲಕ ಚಿನ್ನವನ್ನು ಖರೀದಿಸುವ ಹಂತಗಳು:


ಹಂತ 1: ಗೂಗಲ್‌ ಪೇ ಆ್ಯಪ್ ತೆರೆದು ನ್ಯೂ ಟ್ಯಾಪ್‌ನ್ನು ತೆರೆಯಿರಿ
ಹಂತ 2: ಸರ್ಚ್‌ ವಿಭಾಗದಲ್ಲಿ 'ಗೋಲ್ಡ್ ಲಾಕರ್' ಪ್ರೆಸ್‌ ಮಾಡಬೇಕು
ಹಂತ 3: ಗೋಲ್ಡ್ ಲಾಕರ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಕಾಣುವ ʼಬೈʼ (ಖರೀದಿ)  ಬಟನ್‌ ಕ್ಲಿಕ್ ಮಾಡಿ (ಈ ವೇಳೆ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಬೆಲೆಯನ್ನು ನೋಡಬಹುದು-ತೆರಿಗೆ ಸೇರಿದಂತೆ)
ಹಂತ 4: ರುಪಾಯಿ ಲೆಕ್ಕದಲ್ಲಿ ಖರೀದಿಸಲು ಬಯಸುವ ಚಿನ್ನದ ಮೊತ್ತವನ್ನು ನಮೂದಿಸಿ
ಹಂತ 5: ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆ ಮಾಡಿ ಮತ್ತು ಪಾವತಿಯನ್ನು ಪೂರ್ಣಗೊಳಿಸಿ


ಗೂಗಲ್‌ಪೇ ಮೂಲಕ ಚಿನ್ನವನ್ನು ಮಾರಾಟ ಮಾಡುವ ಪ್ರಕ್ರಿಯೆ:
ಹಂತ 1: ಗೂಗಲ್‌ ಆ್ಯಪ್‌ನಲ್ಲಿ ನ್ಯೂ ಟ್ಯಾಪ್‌ನ್ನು ತೆರೆಯಿರಿ
ಹಂತ 2: ಸರ್ಚ್‌ ವಿಭಾಗದಲ್ಲಿ 'ಗೋಲ್ಡ್ ಲಾಕರ್' ಪ್ರೆಸ್‌ ಮಾಡಬೇಕು
ಹಂತ 3: ʼಸೆಲ್‌ʼ(ಮಾರಾಟ) ಆಯ್ಕೆಯನ್ನು ಆರಿಸಿ
ಹಂತ 4: ನೀವು ಮಾರಾಟ ಮಾಡಲು ಬಯಸುವ ಚಿನ್ನದ ತೂಕವನ್ನು ಮಿಲಿಗ್ರಾಂಗಳಲ್ಲಿ ನಮೂದಿಸಿ
ಹಂತ 5: ಒಮ್ಮೆ ಮಾರಾಟವನ್ನು ಅನುಮೋದಿಸಿದ ನಂತರ ಹಣವು ನಿಮ್ಮ ಖಾತೆಯಲ್ಲಿ ಲಭ್ಯವಿರಬೇಕು


ಇದನ್ನು ಓದಿ: ಮೇ 1 ರಿಂದ ಸಿಲಿಂಡರ್‌ ಬೆಲೆ ದುಬಾರಿ, ಬ್ಯಾಂಕ್ ರಜೆ; ತಿಂಗಳು ಪ್ರಾರಂಭ ಹೇಗೆ? 


ಈ ಪ್ರಕ್ರಿಯೆ ಮೂಲಕ ಡಿಜಿಟಲ್‌ ಗೋಲ್ಡ್‌ನಲ್ಲಿ ಚಿನ್ನ ಖರೀದಿ ಮತ್ತು ಮಾರಾಟ ಮಾಡಬಹುದು. ಇನ್ನು ಕಳೆದ ಕೆಲ ದಿನದಿಂದ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಳಿತವಾಗುತ್ತಿದೆ. ಅಕ್ಷಯ ತೃತೀಯ ಸಮೀಪಿಸುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇಂದು ಮಾರುಕಟ್ಟೆಯಲ್ಲಿ 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 52,370 ರೂ. ಆಗಿದ್ದು, ಬೆಲೆಯಲ್ಲಿ 59 ರೂ.(ಒಂದು ಗ್ರಾಂ.ಗೆ) ಹೆಚ್ಚಳ ಕಂಡುಬಂದಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿಯೂ 200 ರೂ. ಏರಿಕೆಯಾಗಿದ್ದು ಕೆಜಿ ಬೆಳ್ಳಿಯ ಬೆಲೆ 64,000 ರೂ. ಆಗಿದೆ. ಕಳೆದ ದಿನ 63,800 ರೂ.ಗೆ ಬೆಳ್ಳಿ ಮಾರಾಟವಾಗುತ್ತಿತ್ತು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.