Insurance Scheme - ನಿಮ್ಮ ಬ್ಯಾಂಕ್ ಖಾತೆಯಲ್ಲಿ 342 ರೂಪಾಯಿ ಇಲ್ಲದಿದ್ದರೆ, ನಿಮಗೆ 4 ಲಕ್ಷ ರೂ. ಗಳವರೆಗೆ ನಷ್ಟ ಉಂಟಾಗಬಹುದು. ವಾಸ್ತವದಲ್ಲಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ವಾರ್ಷಿಕ ನವೀಕರಣಕ್ಕೆ ಕೊನೆಯ ದಿನಾಂಕ ಮೇ 31, 2022 ಆಗಿದೆ. ನೀವು ಈ ಎರಡೂ ಯೋಜನೆಗಳನ್ನು ನವೀಕರಿಸದಿದ್ದರೆ, ನೀವು 4 ಲಕ್ಷದವರೆಗಿನ ವಿಮೆಯಿಂದ ವಂಚಿತರಾಗಬಹುದು.


COMMERCIAL BREAK
SCROLL TO CONTINUE READING

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ: ಈ ಯೋಜನೆಯಡಿ ಯಾವುದೇ ಕಾರಣದಿಂದ ಮರಣ ಹೊಂದಿದವರಿಗೆ ರಕ್ಷಣೆ ಓದಗಿಸಲಾಗುತ್ತದೆ. ಈ ಯೋಜನೆಗೆ ಸೇರಲು ವಯಸ್ಸಿನ ಮಿತಿ 18-50 ವರ್ಷಗಳಾಗಿವೆ. 50 ವರ್ಷಕ್ಕಿಂತ ಮೊದಲು ಯೋಜನೆಗೆ ಸೇರುವವರು ಪ್ರೀಮಿಯಂ ಪಾವತಿಯ ಮೇಲೆ 55 ವರ್ಷ ವಯಸ್ಸಿನವರೆಗೆ ಜೀವ ಅಪಾಯದ ಕವರೇಜ್ ಪಡೆಯಬಹುದು.


ಪ್ರಯೋಜನ: ಸಾವಿನ ಕಾರಣವನ್ನು ಲೆಕ್ಕಿಸದೆ, ವಾರ್ಷಿಕ ರೂ 330 ಪ್ರೀಮಿಯಂ ಪಾವತಿಯ ಮೇಲೆ ರೂ 2 ಲಕ್ಷದ ಜೀವ ವಿಮಾ ರಕ್ಷಣೆ ಒಳಗಿಸಲಾಗುತ್ತದೆ. 


ನೋಂದಣಿ: ಖಾತೆದಾರರ ಬ್ಯಾಂಕ್‌ನ ಶಾಖೆ/ಬಿಸಿ ಪಾಯಿಂಟ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಯೋಜನೆಯಡಿ ತಮ್ಮ ಹೆಸರನ್ನು ನೋಂದಣಿ ಮಾಡಬಹುದು. ಯೋಜನೆಯ ಅಡಿಯಲ್ಲಿ, ಗ್ರಾಹಕರು ಒಮ್ಮೆ ಮಾತ್ರ ಮಾಡಿದ ಆದೇಶದ ಆಧಾರದ ಮೇಲೆ ಅವರ ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್ ಮಾಡುವ ಮೂಲಕ ಪ್ರೀಮಿಯಂ ಪಾವತಿಸಬಹುದು. ಈ ಯೋಜನೆಯ ಸಂಪೂರ್ಣ ವಿವರಗಳಿಗಾಗಿ ನೀವು ವೆಬ್‌ಸೈಟ್ ಲಿಂಕ್ https://jansuraksha.gov.in ಗೆ ಭೇಟಿ ನೀಡಬಹುದು.


ಪ್ರಧಾನ ಮಂತ್ರಿ ಸುರಕ್ಷಾ ಬಿಮಾ: ಈ ಯೋಜನೆಯು ಅಪಘಾತದಿಂದ ಮರಣ ಅಥವಾ ಅಂಗವೈಕಲ್ಯಕ್ಕೆ ರಕ್ಷಣೆ ನೀಡುತ್ತದೆ. ಯೋಜನೆಗೆ ಸೇರಲು ವಯೋಮಿತಿ 18-70 ವರ್ಷಗಳಾಗಿವೆ. ಆಕಸ್ಮಿಕ ಮರಣ ಅಥವಾ ಅಂಗವೈಕಲ್ಯಕ್ಕೆ ರೂ 2 ಲಕ್ಷ (ಭಾಗಶಃ ಅಂಗವೈಕಲ್ಯವಿದ್ದಲ್ಲಿ ರೂ 1 ಲಕ್ಷ ರೂ) ರಕ್ಷಣೆ ಒದಗಿಸಲಾಗುತ್ತದೆ. 


ಇದನ್ನೂ ಓದಿ -ATM ನಿಂದ ಹಣ ವಿತ್ ಡ್ರಾ ನಿಯಮ ಬದಲಿಸಿದ RBI : ಇಲ್ಲಿದೆ ಹೊಸ ನಿಯಮಗಳು!


ನೋಂದಣಿ: ಯೋಜನೆಯಡಿ ಹೆಸರು ನೋಂದಾಯಿಸಲು ಖಾತೆದಾರರ ಬ್ಯಾಂಕ್‌ನ ಶಾಖೆ/ಬಿಸಿ ಪಾಯಿಂಟ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಯನ್ನು ಉಲ್ಲೇಖಿಸಿ ಪೋಸ್ಟ್ ಆಫೀಸ್‌ಗೆ ಭೇಟಿ ನೀಡುವ ಮೂಲಕ ಮಾಡಿಕೊಳ್ಳಬಹುದು.


ಇದನ್ನೂ ಓದಿ-ಈ ಯೋಜನೆಯಲ್ಲಿ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ನೀಡುತ್ತಿದೆ ಹೊಲಿಗೆ ಯಂತ್ರ


ಯೋಜನೆಯ ಅಡಿಯಲ್ಲಿ, ಗ್ರಾಹಕರು ಒಮ್ಮೆ ಮಾತ್ರ ಮಾಡಿದ ಆದೇಶದ ಆಧಾರದ ಮೇಲೆ ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್ ಮಾಡುವ ಮೂಲಕ ಪ್ರೀಮಿಯಂ ಪಾವತಿಸಬಹುದು. ಹೆಚ್ಚಿನ ಮಾಹಿತಿಯನ್ನು ನೀವು  https://jansuraksha.gov.in ನಿಂದ ಪಡೆದುಕೊಳ್ಳಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.