EPF Account: ಸಂಬಳ ಪಡೆಯುವವರಿಗೆ  ಭವಿಷ್ಯ ನಿಧಿಯ ಹಣ ಅವರ ಜೀವಮಾನದ ಗಳಿಕೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು EPFO ​​ಗೆ ಸಂಬಂಧಿಸಿದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ಕೆಲಸ ಮಾಡುವವರೆಗೆ ಅಥವಾ ನೌಕರಿಯಲ್ಲಿ ಇರುವವರೆಗೆ, ಇಪಿಎಫ್‌ಗೆ ಕೊಡುಗೆ ನೀಡುತ್ತೀರಿ ಮತ್ತು ನೀವು ನಿವೃತ್ತರಾದಾಗ, ನಿಮ್ಮಲ್ಲಿ ಗಣನೀಯ ಮೊತ್ತ ಇರುತ್ತದೆ. ಈ ಹಣದ ಆಧಾರದ ಮೇಲೆ ನಿಮ್ಮ ವೃದ್ಧಾಪ್ಯವನ್ನು ಸುರಕ್ಷಿತವಾಗಿ ಕಳೆಯಬಹುದು. ಆದರೆ ಅನೇಕ ಬಾರಿ ಮಾಹಿತಿಯ ಕೊರತೆ ಅಥವಾ ಕೆಲವು ತಪ್ಪುಗಳಿಂದಾಗಿ ಪಿಎಫ್ ಖಾತೆಯನ್ನು ಮುಚ್ಚಲಾಗುತ್ತದೆ. ಆದ್ದರಿಂದ ನೀವು ಅಂತಹ ಯಾವುದೇ ತಪ್ಪನ್ನು ಮಾಡದಂತೆ ನಿಗಾವಹಿಸಬೇಕು. ಅದಕ್ಕಾಗಿ  ಇಪಿಎಫ್‌ಗೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ಈ ಕಾರಣದಿಂದಾಗಿ ಖಾತೆಯನ್ನು ಮುಚ್ಚಬಹುದು:
ನೀವು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಹೊಸ ಕಂಪನಿಗೆ ನಿಮ್ಮ ಪಿಎಫ್ ಖಾತೆಯನ್ನು (PF Account) ವರ್ಗಾಯಿಸದಿದ್ದರೆ ಮತ್ತು ಹಳೆಯ ಕಂಪನಿ ಮುಚ್ಚಿದ್ದರೆ ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪಿಎಫ್ ಖಾತೆಯಿಂದ 36 ತಿಂಗಳವರೆಗೆ ಯಾವುದೇ ವಹಿವಾಟು ನಡೆಯದಿದ್ದರೆ, ಈ ಸಂದರ್ಭದಲ್ಲಿ ನಿಮ್ಮ ಪಿಎಫ್ ಖಾತೆಯನ್ನು ಮುಚ್ಚಲಾಗುತ್ತದೆ. EPFO ಅಂತಹ ಖಾತೆಗಳನ್ನು 'ಇನ್‌ಆಪರೇಟಿವ್' ವರ್ಗದಲ್ಲಿ ಇರಿಸುತ್ತದೆ.


ಅಂತಹ ಖಾತೆಯನ್ನು ಮತ್ತೆ ಸಕ್ರಿಯಗೊಳಿಸುವುದು ಹೇಗೆ?
ಒಮ್ಮೆ ಖಾತೆಯು 'ನಿಷ್ಕ್ರಿಯ' ಆದಾಗ ನಿಮಗೆ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ, ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು, ನೀವು EPFO ​​ಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 'ನಿಷ್ಕ್ರಿಯ'ದ ನಂತರವೂ, ಖಾತೆಯಲ್ಲಿರುವ ಹಣದ ಮೇಲೆ ಬಡ್ಡಿ ಸಂಗ್ರಹವಾಗುತ್ತಲೇ ಇರುತ್ತದೆ, ಅಂದರೆ ನಿಮ್ಮ ಹಣ ಮುಳುಗಿರುವುದಿಲ್ಲ, ನೀವು ಅದನ್ನು ಮರಳಿ ಪಡೆಯುತ್ತೀರಿ. ಮೊದಲು ಈ ಖಾತೆಗಳಿಗೆ ಬಡ್ಡಿ ಲಭ್ಯವಿರಲಿಲ್ಲ. ಆದರೆ, 2016ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ನಿಷ್ಕ್ರಿಯ ಖಾತೆಯಲ್ಲಿ ಸಂಗ್ರಹವಾಗಿರುವ ಹಣಕ್ಕೂ ಬಡ್ಡಿ ಆರಂಭಿಸಲಾಗಿತ್ತು. ಖಾತೆದಾರರಿಗೆ 58 ವರ್ಷ ವಯಸ್ಸಿನವರೆಗೆ ಪಿಎಫ್ ಖಾತೆಯಲ್ಲಿ ಬಡ್ಡಿ ಸೇರುತ್ತದೆ ಎಂದು ನೀವು ತಿಳಿದಿರಬೇಕು. 


ಇದನ್ನೂ ಓದಿ- LPG Subsidy: ನಿಮಗೂ ಎಲ್‌ಪಿಜಿ ಸಬ್ಸಿಡಿ ಸಿಗುತ್ತಿಲ್ಲವೇ? ಖಾತೆಯಲ್ಲಿ ಹಣ ಪಡೆಯಲು ಇಂದೇ ಈ ಕೆಲಸ ಮಾಡಿ


ಖಾತೆಯು ಯಾವಾಗ ನಿಷ್ಕ್ರಿಯವಾಗುತ್ತದೆ?
ಹೊಸ ನಿಯಮಗಳ ಪ್ರಕಾರ, ನೌಕರನು EPF ಬ್ಯಾಲೆನ್ಸ್ (EPF Balance) ಹಿಂಪಡೆಯಲು ಅರ್ಜಿ ಸಲ್ಲಿಸದಿದ್ದರೆ EPF ಖಾತೆಯು 'ನಿಷ್ಕ್ರಿಯ' ಆಗುತ್ತದೆ, 
A-  ನಿವೃತ್ತಿಯ 36 ತಿಂಗಳ ನಂತರವೂ,  ಸದಸ್ಯನ 55 ವರ್ಷಗಳ ನಂತರ 
B- ಸದಸ್ಯನು ಖಾಯಂ ಆಗಿ ವಿದೇಶದಲ್ಲಿ ನೆಲೆಸಿದ್ದರೆ 
C-  ಸದಸ್ಯರು ಸಾವನ್ನಪ್ಪಿದ್ದರೆ
D-  ಸದಸ್ಯರು ಎಲ್ಲಾ ನಿವೃತ್ತಿ ನಿಧಿಗಳನ್ನು ತೆಗೆದುಹಾಕಿದ್ದರೆ
 
ಪಿಎಫ್ ಖಾತೆಯಲ್ಲಿ 7 ವರ್ಷಗಳವರೆಗೆ ಕ್ಲೈಂ ಪಡೆಯದಿದ್ದರೆ ಈ ನಿಧಿಯನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ (Senior Citizens’ Welfare Fund) ಹಾಕಲಾಗುತ್ತದೆ. 


EPFO ಗೆ ಸಂಬಂಧಿಸಿದ ಸೂಚನೆಗಳು ಯಾವುವು?
ನಿಷ್ಕ್ರಿಯ ಖಾತೆಗಳಿಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು ಕಾಳಜಿ ವಹಿಸುವುದು ಅಗತ್ಯ ಎಂದು ಇಪಿಎಫ್‌ಒ ತನ್ನ ಸುತ್ತೋಲೆಯೊಂದರಲ್ಲಿ ಹೇಳಿದೆ. ಇದರಿಂದ ವಂಚನೆಗೆ ಸಂಬಂಧಿಸಿದ ಅಪಾಯವನ್ನು ಕಡಿಮೆಗೊಳಿಸಲಾಗುತ್ತದೆ ಮತ್ತು ಸರಿಯಾದ ಹಕ್ಕುದಾರರಿಗೆ ಕ್ಲೈಮ್ ಅನ್ನು ಪಾವತಿಸಲಾಗುತ್ತದೆ. 


ನಿಷ್ಕ್ರಿಯ PF ಖಾತೆಗಳನ್ನು ಯಾರು ಪ್ರಮಾಣೀಕರಿಸುತ್ತಾರೆ ?
ನಿಷ್ಕ್ರಿಯ PF ಖಾತೆಗಳಿಗೆ ಸಂಬಂಧಿಸಿದ ಕ್ಲೈಮ್ ಅನ್ನು ಇತ್ಯರ್ಥಗೊಳಿಸಲು, ಉದ್ಯೋಗಿಯ ಉದ್ಯೋಗದಾತನು ಆ ಕ್ಲೈಮ್ ಅನ್ನು ಪ್ರಮಾಣೀಕರಿಸುವುದು ಅವಶ್ಯಕ. ಆದಾಗ್ಯೂ, ಕಂಪನಿಯು ಮುಚ್ಚಲ್ಪಟ್ಟಿರುವ ಉದ್ಯೋಗಿಗಳು ಮತ್ತು ಕ್ಲೈಮ್ ಅನ್ನು ಪ್ರಮಾಣೀಕರಿಸಲು ಯಾರೂ ಇಲ್ಲದಿದ್ದರೆ, ನಂತರ ಬ್ಯಾಂಕ್ KYC ದಾಖಲೆಗಳ ಆಧಾರದ ಮೇಲೆ ಅಂತಹ ಕ್ಲೈಮ್ ಅನ್ನು ಪ್ರಮಾಣೀಕರಿಸುತ್ತದೆ.


ಇದನ್ನೂ ಓದಿ-  Business Idea:ಈ ಕೃಷಿಯನ್ನು ಕೇವಲ 2 ಸಾವಿರದಲ್ಲಿ ಪ್ರಾರಂಭಿಸಿ, 4 ಲಕ್ಷದವರೆಗೆ ಗಳಿಸಿ..


ಯಾವ ದಾಖಲೆಗಳು ಬೇಕಾಗುತ್ತವೆ:
ಕೆವೈಸಿ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಇಎಸ್‌ಐ ಐಡಿ ಕಾರ್ಡ್, ಗುರುತಿನ ಚೀಟಿ, ಚಾಲನಾ ಪರವಾನಗಿ ಸೇರಿವೆ. ಇದಲ್ಲದೇ ಆಧಾರ್ ನಂತಹ ಸರ್ಕಾರ ನೀಡುವ ಇತರೆ ಯಾವುದೇ ಗುರುತಿನ ಚೀಟಿಯನ್ನು ಸಹ ಇದಕ್ಕೆ ಬಳಸಬಹುದು. ಇದರ ನಂತರ, ಸಹಾಯಕ ಭವಿಷ್ಯ ನಿಧಿ ಆಯುಕ್ತರು ಅಥವಾ ಇತರ ಅಧಿಕಾರಿಗಳು ಮೊತ್ತಕ್ಕೆ ಅನುಗುಣವಾಗಿ ಖಾತೆಗಳಿಂದ ಹಿಂಪಡೆಯಲು ಅಥವಾ ಖಾತೆ ವರ್ಗಾವಣೆಯನ್ನು ಅನುಮೋದಿಸಲು ಸಾಧ್ಯವಾಗುತ್ತದೆ.


ಯಾರ ಅನುಮೋದನೆಯೊಂದಿಗೆ ಹಣವನ್ನು ಸ್ವೀಕರಿಸಲಾಗುತ್ತದೆ?
ಮೊತ್ತವು 50 ಸಾವಿರ ರೂಪಾಯಿ ಮೀರಿದರೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರ ಅನುಮೋದನೆಯ ನಂತರ ಹಣವನ್ನು ಹಿಂಪಡೆಯಲಾಗುತ್ತದೆ ಅಥವಾ ವರ್ಗಾಯಿಸಲಾಗುತ್ತದೆ. ಅದೇ ರೀತಿ, 25 ಸಾವಿರ ರೂಪಾಯಿಗಿಂತ ಹೆಚ್ಚು ಮತ್ತು 50 ಸಾವಿರ ರೂಪಾಯಿಗಿಂತ ಕಡಿಮೆ ಇದ್ದರೆ, ಖಾತೆ ಅಧಿಕಾರಿಯು ನಿಧಿ ವರ್ಗಾವಣೆ ಅಥವಾ ಹಿಂಪಡೆಯುವಿಕೆಯನ್ನು ಅನುಮೋದಿಸಲು ಸಾಧ್ಯವಾಗುತ್ತದೆ. ಮೊತ್ತವು 25 ಸಾವಿರ ರೂಪಾಯಿಗಿಂತ ಕಡಿಮೆಯಿದ್ದರೆ, ಡೀಲಿಂಗ್ ಸಹಾಯಕರು ಅದನ್ನು ಅನುಮೋದಿಸಲು ಸಾಧ್ಯವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.