ಬೆಂಗಳೂರು: ಇತ್ತೀಚೆಗೆ ಒಂದು ನೂತನ ಅಂತಾರಾಷ್ಟ್ರೀಯ ಪೂರೈಕೆ ಸರಪಳಿ ಸ್ಥಾಪನೆಯಾಗಿದ್ದು, ಅದು ಜಪಾನಿನ ಹೊಕೈಡೋ, ಭಾರತದ ಗುಜರಾತ್‌ನಿಂದ, ದಕ್ಷಿಣ ಕೊರಿಯಾ, ತೈವಾನ್, ಫಿಲಿಪೈನ್ಸ್, ಇಂಡೋನೇಷ್ಯಾ, ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯ ಹಾಗೂ ಬಾಂಗ್ಲಾದೇಶಗಳ ಮೂಲಕ ಸಾಗುತ್ತದೆ.


COMMERCIAL BREAK
SCROLL TO CONTINUE READING

ಅಮೆರಿಕಾ ಮತ್ತು ಚೀನಾಗಳ ಮಧ್ಯೆ ರಾಜಕೀಯ ಸಂದಿಗ್ಧತೆ ದಿನೇ ದಿನೇ ಹೆಚ್ಚುತ್ತಿರುವುದರಿಂದ, ಸಾಕಷ್ಟು ಉತ್ಪಾದಕರು ಚೀನಾದಿಂದ ಹೊರಗಡೆ ಪೂರೈಕೆ ಸರಪಳಿಗಾಗಿ ನೋಡುತ್ತಿದ್ದಾರೆ. ಅದಕ್ಕಾಗಿ 'ಆಲ್ಟ್ ಏಷ್ಯಾ' ಎಂಬ ಪದ ಹುಟ್ಟಿಕೊಂಡಿದೆ. ಇದು ಉದ್ಯಮಗಳಿಗೆ ತಮ್ಮ ಉತ್ಪಾದನೆಯನ್ನು ಏಷ್ಯಾದ ಇತರ ಭಾಗಗಳಿಗೆ ಕೊಂಡೊಯ್ಯಲು ಪ್ರೇರೇಪಿಸಿದೆ.


ಆದರೆ ಯಾವ ರಾಷ್ಟ್ರದ ಬಳಿಯೂ ಚೀನಾದಂತಹ ಬೃಹತ್ ಉದ್ಪಾದನಾ ಸಾಮರ್ಥ್ಯ ಇಲ್ಲ. ಆದಾಗ್ಯೂ, ಆಲ್ಟ್ ಏಷ್ಯಾದ 14 ರಾಷ್ಟ್ರಗಳು ಈಗಾಗಲೇ ಸಾಗಾಣಿಕಾ ಪೂರೈಕೆ ಸರಪಳಿಯ ಸಮರವನ್ನು ಆರಂಭಿಸಿವೆ.


ಇದನ್ನೂ ಓದಿ- 7th Pay Commission: ಸರ್ಕಾರಿ ನೌಕರರ ಮೇಲೆ ಹಣದ ಸುರಿಮಳೆ, ತುಟ್ಟಿಭತ್ಯೆ ಶೇ.45ಕ್ಕೆ ಏರಿಕೆ!


ಆಲ್ಟ್ ಏಷ್ಯಾ ಎಂದು ಹೆಸರು ಪಡೆದಿರುವ ರಾಷ್ಟ್ರಗಳು ಯಾವುವೆಂದರೆ, ಜಪಾನ್, ತೈವಾನ್, ದಕ್ಷಿಣ ಕೊರಿಯಾ, ಭಾರತ, ಫಿಲಿಪೈನ್ಸ್, ಇಂಡೋನೇಷ್ಯಾ, ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಲಾವೋಸ್, ಕಾಂಬೋಡಿಯ, ಬಾಂಗ್ಲಾದೇಶ ಹಾಗೂ ಬ್ರೂನೇಗಳಾಗಿವೆ.


ವರದಿಗಳ ಪ್ರಕಾರ, ಆಲ್ಟ್ ಏಷ್ಯಾದ ರಫ್ತು ದರ ಚೀನಾದ ರಫ್ತುದರಕ್ಕೆ ಸಮಾನವಾಗಿದೆ. ಅಕ್ಟೋಬರ್ 2021ರಿಂದ ಸೆಪ್ಟೆಂಬರ್ 2022ರ ನಡುವೆ ಆಲ್ಟ್ ಏಷ್ಯಾ ಅಮೇರಿಕಾಗೆ 634 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಕೈಗೊಂಡಿತ್ತು. ಇದು ಚೀನಾದ ರಫ್ತು ಮೌಲ್ಯವಾದ 614 ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿತ್ತು. ಆದರೆ ಚೀನಾದ ರಫ್ತು ಬಹುತೇಕ ಇಲೆಕ್ಟ್ರಾನಿಕ್ ಉಪಕರಣಗಳಾದರೆ, ಆಲ್ಟ್ ಏಷ್ಯಾ ವೈವಿಧ್ಯಮಯ ರಫ್ತು ಹೊಂದಿದೆ.


ಕಾರ್ಯಾಚರಿಸುವ ವಯಸ್ಸಿನ ಜನಸಂಖ್ಯೆಯ ಶೈಕ್ಷಣಿಕ ಅರ್ಹತೆಯನ್ನು ಗಮನಿಸುವುದಾದರೆ, ಆಲ್ಟ್ ಏಷ್ಯಾ ಮತ್ತು ಚೀನಾ ಬಹುತೇಕ ಸಮಾನವಾಗಿವೆ. ಆಲ್ಟ್ ಏಷ್ಯಾದಲ್ಲಿ, 25-54 ವರ್ಷ ವಯಸ್ಸಿನ ಜನರಲ್ಲಿ, 15.5 ಮಿಲಿಯನ್ ಜನರು ಉನ್ನತ ವ್ಯಾಸಂಗ ಹೊಂದಿದ್ದು, ಅದು ಚೀನಾದ 14.5 ಮಿಲಿಯನ್ ಜನರಿಗೆ ಬಹುತೇಕ ಸಮಾನವಾಗಿದೆ.


ಆಲ್ಟ್ ಏಷ್ಯಾದಲ್ಲಿ ಸಿಂಗಾಪುರ ಮತ್ತು ಜಪಾನ್‌ಗಳು ಹೆಚ್ಚಿನ ಆದಾಯ ಹೊಂದಿದ್ದರೂ, ಚೀನಾದ ಸಂಬಳವೂ ಹೆಚ್ಚುತ್ತಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವು ರಾಷ್ಟ್ರಗಳಿಗಿಂತ ಹೆಚ್ಚಾಗಿದೆ.


ಇದನ್ನೂ ಓದಿ- PPF ನಲ್ಲಿ ಹಣ ಹೂಡಿಕೆ ಮಾಡುವವರಿಗೊಂದು ಸಂತಸದ ಸುದ್ದಿ, ಸರ್ಕಾರ ನೀಡುತ್ತಿದೆ 42 ಲಕ್ಷ ರೂ.!


2022ರ ಮಾಹಿತಿಯ ಪ್ರಕಾರ, ಚೀನಾದಲ್ಲಿ ಉತ್ಪಾದನಾ ಕಾರ್ಮಿಕರ ಪ್ರತಿ ಗಂಟೆಯ ಸಂಬಳ 8.31 ಡಾಲರ್ ಆಗಿದ್ದರೆ, ಭಾರತ, ವಿಯೆಟ್ನಾಂ, ಥೈಲ್ಯಾಂಡ್ ಕಾರ್ಮಿಕರ ಸಂಬಳ 3 ಡಾಲರ್‌ಗಿಂತ ಕಡಿಮೆಯಾಗಿತ್ತು. ಅಮೆರಿಕಾ - ಚೀನಾ ಸಂಬಂಧ ಕುಂಠಿತವಾಗುವ ಮೊದಲು, ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದ, ಕನಿಷ್ಠ ಲಾಭ ಹೊಂದಿದ್ದ ಸಂಸ್ಥೆಗಳು ಚೀನಾದಿಂದ ಹೊರ ನಡೆದಿದ್ದವು.


ಈ ವರದಿಯ ಪ್ರಕಾರ, ಚೀನಾದ ಉತ್ತಮ ಉತ್ಪಾದನಾ ಸಾಮರ್ಥ್ಯವನ್ನು ಸರಿಗಟ್ಟುವುದು ಕಷ್ಟಕರವಾಗಿದ್ದು, ಆಲ್ಟ್ ಏಷ್ಯಾದ ವಿವಿಧ ಆರ್ಥಿಕ ವ್ಯವಸ್ಥೆಗಳು ಚೀನಾದಂತೆ ಒಂದಕ್ಕೊಂದು ಸಹಯೋಗ ಹೊಂದುವುದಿಲ್ಲ. ಅದರೊಡನೆ, ಮೂಲಭೂತ ಸೌಕರ್ಯಗಳು ಹಾಗೂ ಸಾಗಾಣಿಕಾ ವ್ಯವಸ್ಥೆಗಳೂ ಸವಾಲು ಎದುರಿಸುತ್ತಿವೆ.


ಆದರೆ ಹಲವು ಸಂಸ್ಥೆಗಳು ಈಗಾಗಲೇ ಚೀನಾದಿಂದ ಹೊರತಾಗಿ, ಬೇರೆ ಪೂರೈಕೆದಾರರನ್ನು ಹೊಂದಲು ಎದುರು ನೋಡುತ್ತಿವೆ. ಅವುಗಳು ಮುಂದಿನ ವರ್ಷಗಳಲ್ಲಿ ಆಲ್ಟ್ ಏಷ್ಯಾ ಸಮರ್ಪಕ ಆಯ್ಕೆ ಎಂದುಕೊಳ್ಳುವ ಸಾಧ್ಯತೆಗಳಿವೆ.


ಅಂಕಿ ಸಂಖ್ಯೆಗಳ ಪೂರಕ ಮಾಹಿತಿ: ಎಕನಾಮಿಸ್ಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.